Wednesday, June 28, 2006

Poem: Looking at 2005 from London Eye

೨೦೦೫: ಲಂಡನ್ ಐ
London eye is one of the hot tourist spots in London, which is nothing but a gaint gaint-wheel, from which most of the central London is seen. The newspapers in England are fond of international news and they cover them quite extensively in their ownway to show they are secular and democratic. This poem in Kannada is a reaction to the England's newspaper coverage during 2005.
ಭಾಗ ೧


ತ್ಸುನಾಮಿಯಲ್ಲಿ ಕೊಚ್ಚಿಹೋದವರಿಗಾಗಿ
ಇನ್ನೂ ಅಳುತ್ತಿವೆ
ಇಲ್ಲಿನ ನ್ಯೂಸ್‌ಪೇಪರ್‌ಗಳು

ಇರಾಕಿನಲ್ಲಿ ಸತ್ತುಹೋದವರಿಗಾಗಿ
ಕ್ರೋಧದಲ್ಲಿ ರೋದಿಸುತ್ತವೆ
ದಿನಾಲೂ ಟಿವಿ-ಚನಲುಗಳು

ಪಾಕ್ ಭೂಕಂಪನದಲ್ಲಿ ಬದುಕಿ
ಉಳಿದವರ ನರಕ ಯಾತನೆ
ಒಂದು ಫೋಟೊವಾದರೂ ಇರಲೇಬೇಕು

ಕತ್ರಿನಾ ಅಮೆರಿಕದಲ್ಲಾದರೂ
ಸುದ್ದಿ ಎರಡೇ ದಿನ

ಜೀವ ಅತ್ಯಮೂಲ್ಯ
ಪ್ರಜಾಪ್ರಭುತ್ವವಾದವೆಂದರೆ ಇದು
ಪಾಶ್ಚ್ಯಾತ್ಯರ ಉದಾರತೆಯೆಂದರೆ ಇದು
ಬಿಳಿಯರ ಸಮತತ್ವ ಬಾವವಿದು
ಕ್ರಿಶ್ಚಿಯನ್ನರ ರಕ್ತವೇ ಅಂಥದು


ಭಾಗ ೨


ತ್ಸುನಾಮಿಯಲ್ಲಿ ಕೊಚ್ಚಿಹೋದವರಿಗಾಗಿ
ಇನ್ನೂ ಅಳುತ್ತಿವೆ
ಇಲ್ಲಿನ ನ್ಯೂಸ್‌ಪೇಪರ್‌ಗಳು
(ಬ್ರಿಟೀಷರಿಗಾಗಿ ಮಾತ್ರ)

ಇರಾಕಿನಲ್ಲಿ ಸತ್ತುಹೋದವರಿಗಾಗಿ
ಕ್ರೋಧದಲ್ಲಿ ರೋದಿಸುತ್ತವೆ
ದಿನಾಲೂ ಟಿವಿ-ಚನಲುಗಳು
(ಬ್ರಿಟಿಷ್ ಸೈನಿಕರಿಗಾಗಿ ಮಾತ್ರ)

ಪಾಕ್ ಭೂಕಂಪನದಲ್ಲಿ
ಬದುಕಿ ಉಳಿದವರ ನರಕ ಯಾತನೆ
ಒಂದು ಫೋಟೊವಾದರೂ ಇರಲೇಬೇಕು
(ಮೂರನೆ ಜಗತ್ತು ಗೇಲಿಮಾಡಲು)

ಕತ್ರಿನಾ ಅಮೆರಿಕದಲ್ಲಾದರೂ
ಸುದ್ದಿ ಎರಡೇ ದಿನ
(ಸತ್ತವರು ಭರ್ತಿ ಕರಿಯರು)

ಜೀವ ಅತ್ಯಮೂಲ್ಯ
ಪ್ರಜಾಪ್ರಭುತ್ವವಾದಿಗಳದು
ಪಾಶ್ಚ್ಯಾತ್ಯರದು
ಬಿಳಿಯರದು
ಕ್ರಿಶ್ಚಿಯನ್ನರದು

1 comment:

  1. ಬಹಳ ಬಹಳ ಬಹಳ ಹಿಡಿಸಿತು. ಬರೀತಾ ಇರಿ. ಇನ್ನಷ್ಟು ಬರೆದದ್ದು ಇದ್ದರೆ ಹಂಚಿಕೊಳ್ಳಿ.

    ReplyDelete