Sunday, September 24, 2006

Tippu, Karnad and Bhairappa

ಟಿಪ್ಪು, ಕಾರ್ನಾಡ್ ಮತ್ತು ಭೈರಪ್ಪ

The recent controversy surrounding Higher education minister Shankaramurthy about his comments about anti-Kannadism of Tippu Sultan has now moved to Kannada literature, involving Girish Karnad and S.L.Bhairappa.

ಭಾಗ ೧:
ಗಿರೀಶ್ ಕಾರ್ನಾಡರ ಬಹುಷಃ ಎಲ್ಲ ನಾಟಕಗಳನ್ನು ಓದಿದ್ದೇನೆ ಮಾತ್ತು ಬಹಳಷ್ಟು ನಾಟಕಗಳನ್ನು ನೋಡಿದ್ದೇನೆ. ನನ್ನ ಅಚ್ಚುಮೆಚ್ಚಿನ ನಾಟಕ 'ತಲೆದಂಡ' ಮತ್ತು 'ಅಗ್ನಿ ಮತ್ತು ಮಳೆ'. ನಾನು ಕಾರ್ನಾಡರ so called ಐತಿಹಾಸಿಕ ನಾಟಕಗಳನ್ನು ಐತಿಹಾಸಿಕಗಳಾಗಿ ನೋಡದೇ, ನಮ್ಮ ಜೀವನದ ಸಂಕೀರ್ಣತೆಗಳನ್ನು ಅವಲೋಕಿಸುವ ಮಾಧ್ಯಮವಾಗಿ ನೋಡಿದ್ದೇನೆ. ತುಘಲಕ್ ಆಗಲಿ, ಬಸವಣ್ಣನಾಗಲಿ ನಾಟಕದಂತೆ ಇರಲು ಸಾಧ್ಯವೇ ಇಲ್ಲ, ಆದರೆ ಕಾರ್ನಾಡ್ ಆ ನಾಟಕಗಳಲ್ಲಿ ತರುವ ಬದುಕಿನ ಘರ್ಷಣೆ ನಮ್ಮನ್ನು ಆಳವಾಗಿ ಯೋಚಿಸುವಂತೆ ಮಾಡುತ್ತದೆ. ಕಾರ್ನಾಡ್ ಗೆ ಜಾನಪೀಠ ಬಂದಾಗ ತುಂಬ ಖುಷಿ ಪಟ್ಟವರಲ್ಲಿ ನಾನೂ ಒಬ್ಬ. ಅವರಿಗೆ ಪ್ರಶಸ್ತಿ ಬಂದ ಮೇಲೆ ಬರೆದ ಟಿಪ್ಪುವಿನ ನಾಟಕವನ್ನು ಮೈಸೂರಿನ ರಂಗಾಯಣದವರು ಆಡಿದಾಗ ನಾಟಕ ನೋಡಲು ಆಸೆಯಿಂದ ಹೋದರೆ, ಅಲ್ಲಿ ಕಾದಿದ್ದು ಬರೀ ನಿರಾಸೆ; ಟಿಪ್ಪುವನ್ನು ದೊಡ್ಡ ಮಹಾರಾಜನಂತೆ ಚಿತ್ರಿಸಿದ್ದ, ದ್ವಂದ್ವಗಳಿಲ್ಲದ third grade ನಾಟಕ. ಗ್ಯಾನಪೀಠ ಬಂದಮೇಲೆ ಬರೆದ ಮೊದಲ ನಾಟಕ ಅದಾಗಿತ್ತು ಎಂದು ನೋಡಿದರೆ ನಮ್ಮ ಆಸೆ ಎಷ್ಟು ಇದ್ದಿರಬಹುದು! ಕರ್ನಾಟಕ ಸರ್ಕಾರದವರಿಗೆ ಬರ್ದುಕೊಟ್ತ ಸವಕಲು ನಾಟಕದಂತಿತ್ತು. ಇಂಥ ಕಾರ್ನಾಡ್ ಈಗ ಶಂಕರಮೂರ್ತಿಯವರ 'ಟಿಪ್ಪು- ಕನ್ನಡ' ವಿವಾದದಲ್ಲಿ ತಮ್ಮನ್ನು ಟಿಪ್ಪುವಿನ ಪರವಾಗಿ ನಿಂತಿರುವ ವಕೀಲರಂತೆ ಆಡುತ್ತಿದ್ದಾರೆ.

ವಿವಾದದಲ್ಲಿ ಸಿಲುಕಲು ಇಷ್ಟಪಡದ ಭೈರಪ್ಪ 'ವಿಜಯ ಕರ್ನಾಟಕ'ದಲ್ಲಿ (ಸೆಪ್ಟೆಂಬರ್ ೨೪, ೨೦೦೬) ಕಾರ್ನಾಡ್ ಗೆ ಉತ್ತರ ಕೊಟ್ಟಿದ್ದಾರೆ. ಕಾರ್ನಾಡ್ ಬಾಬಾಬುಡನ್ ಗಿರಿ, ಟಿಪ್ಪು ಬಿಟ್ಟು, ' ಬಿಂಬ'ದಂಥ ಸವೆದು ಹೋದ ನಾಟಕಗಳನ್ನ್ನು ಬಿಟ್ಟು, 'ಅಗ್ನಿ ಮತ್ತು ಮಳೆ'ಯಂಥ ಅದ್ಭುತ ನಾಟಕಗಳನ್ನು ಬರೆಯುಯುವುದರಲ್ಲಿ ಗಮನ ಹರಿಸಲಿ; ಅಥವಾ U.R.ಅನಂತಮೂರ್ತಿಯವರಂತೆ ಸೃಜನಶೀಲತೆ ಬತ್ತಿಹೋಗಿದ್ದರೆ, ತೆಪ್ಪಗೆ ನಿವೃತ್ತಿಯಾಗಲಿ.
ಭಾಗ ೨:
ಇಂದಿನ 'ವಿಜಯ ಕರ್ನಾಟಕ'ದಲ್ಲಿ (ಸೆಪ್ಟೆಂಬರ್ ೨೮, ೨೦೦೬) ಕಾರ್ನಾಡ್ ಉತ್ತರಿಸಿದ್ದಾರೆ. ಈಗ ಅವರು ಹೇಳುತ್ತಿರುವುದರ ತಿರುಳಿಂದರೆ, ಅವರು ಟಿಪ್ಪುವಿನ ಐತಿಹಾಸಿಕತೆ- ಕನ್ನಡದ ದೋರಣೆ ಬಗ್ಗೆ ಅಲ್ಲ, ಉನ್ನತ ಶಿಕ್ಷಣ ಸಚಿವರ ಹೊಣೆಗಾರಿಕೆ ಕೊರಿತಂತೆ ಸಾರ್ವಜನಿಕ ಚರ್ಚೆಗೆ ಆಹ್ವಾನ ಕೊಟ್ಟಿದ್ದಂತೆ (ಭೈರಪ್ಪನವರ ಕಾದಂಬರಿಯ ಆಶಯಗಳನ್ನು, ಭೈರಪ್ಪನವರ rightist ಧೋರಣೆಗಳನ್ನು ವಿಮರ್ಶಿಶಲು ಬೇರೆ ಲೇಖನ ಬರೆಯಬಹುದಿತ್ತು). ಹಾಗೆಂದು ಅವರು ಮೊದಲೇ ಹೇಳಿದ್ದರೆ ಭೈರಪ್ಪ ಅಥವಾ ಚಿದಾನಂದಮೂರ್ತಿ ಇಷ್ಟು ದೊಡ್ಡ ಲೇಖನಗಳನ್ನು ಬರೆಯುವ ಪ್ರಸಂಗವೇ ಬರುತ್ತಿರಲಿಲ್ಲ. ಹಾಗೆ ನೋಡಿದರೆ, ಕಾರ್ನಾಡ್ ಏಕೆ ಟಿಪ್ಪುವಿನ ವಿಷಯದಲ್ಲಿ ತಲೆ ಹಾಕಬೇಕಿತ್ತು? ಅವರು ಟಿಪ್ಪುವಿನ ಬಗ್ಗೆ ನಾಟಕ ಬರೆದ ಕಾರಣಕ್ಕಾಗಿಯೇ ಅಲ್ಲವೇ? ಅಥವಾ ಜ್ನ್ಯಾನಪೀಠ ಬಂದವರ ಜವಾಬ್ದಾರಿಯ ನಿರ್ವಹಣೆಗಾಗಿಯೇ? ಕಾರ್ನಾಡ್ ರಾಜಕಾರಣಿಯಲ್ಲ, fanatic ಮುಸಲ್ಮಾನನಲ್ಲ, ಐತಿಹಾಸಕಾರನಲ್ಲ; ಭಾರತದ ಪ್ರಜೆಯಾಗಿ, ಕರ್ನಾಟಕದಲ್ಲಿರುವ ಕಾರಣಕ್ಕಾಗಿ ಅವರಿಗೆ ಉನ್ನತ ಸಚಿವರ ಹೇಳಿಕೆಯ ಬಗ್ಗೆ ತಕರಾರಿದ್ದರೆ, ' ಓದುಗರ ಓಲೆ' ಬರೆಯಬಹುದಿತ್ತು, ಅಥವಾ ಒಂದು ಲೇಖನ ಬರೆಯಬಹುದಿತ್ತು, ಅದು ಬಿಟ್ಟು ಸಾರ್ವಜನಿಕೆ ಚರ್ಚೆಗೆ ಎಳೆದು ತರುವ ಹೇಳಿಕೆ ನೀಡಬಾರದಿತ್ತು. ಈಗ ಮಾಡಿದ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ' ಚರ್ಚೆ ಟಿಪ್ಪುವಿನ ಐತಿಹಾಸಿಕತೆ- ಕನ್ನಡದ ದೋರಣೆ ಬಗ್ಗೆ ಅಲ್ಲ, ಉನ್ನತ ಶಿಕ್ಷಣ ಸಚಿವರ ಹೊಣೆಗಾರಿಕೆ ಕೊರಿತು' ಎಂದು ಬರೆದರೆ ಕನ್ನಡ ಸಾಹಿತ್ಯದ, ಅದರಲ್ಲೂ ನಿಮ್ಮ ನಾಟಕಗಳ fan ಆಗಿರುವ ನನಗಂತೂ ಇಷ್ಟವಾಗಲಿಲ್ಲ. ಸಾಹಿತಿಗಳಾಗಿ ಬರೆಯಿರಿ, ರಾಜಕಾರಣಿಗಳಂತೆ ಹೇಳಿಕೆಗಳನ್ನು ಬದಲಿಸಬೇಡಿರಿ. ಕಾರ್ನಾಡ್, ಜ್ನ್ಯಾನಪೀಠದ ಮೊದಲಿನ ಕಾರ್ನಾಡ್ ಆಗಿ, ನಮಗಿನ್ನೂ ಒಳ್ಳೊಳ್ಳೆಯ ನಾಟಕ ಕೊಡಿ, ಓದಿ ಚರ್ಚಿಸುತ್ತೇವೆ, ನೋಡಿ ಆನಂದಿಸುತ್ತೇವೆ.
ಭಾಗ ೩:
ಗಿರೀಶ್ ಕಾರ್ನಾಡ್ ಲೇಖನಕ್ಕೆ ಓದುಗರು ತುಂಬ ಖಾರವಾಗಿಯೇ ಉತ್ತರಿಸಿದ್ದಾರೆ. ಗಿರೀಶ್ ಗೆ ಈಗಲಾದರೂ ಬುದ್ಧಿ ಬರಲಿ. ಲೇಖಕ ರಾಜಕೀಯದಲ್ಲಿ ಹೋರಾಡಬೇಕು, ಆದರೆ ರಾಜಕಾರಣಿಯಾಗಬಾರದು; ಆಗಲು ಹೊರಟರೆ ಓದುಗರಿಂದ ಈ ತರಹದ ಒದಿಕೆ ತಿನ್ನಬೇಕಾಗುತ್ತದೆ. ಕಾರ್ನಾಡ್, ಈಗಲಾದರೂ ರಾಜಕಾರಣ ಮಾಡುವುದನ್ನು ಬಿಟ್ಟು, ಸಾಹಿತ್ಯದತ್ತ ಮತ್ತೆ ಗಮನ ಹರಿಸಿ.
(last edited - 28/09/2006)

No comments:

Post a Comment