Friday, June 01, 2007

ನೀಲುಗಳು


ಜಪಾನಿನಲ್ಲಿ ಹೈಕುಗಳಿದ್ದಂತೆ ಬೇರೆ ಭಾಷೆಗಳಲ್ಲಿ ಏನಿದೆಯೋ ಗೊತ್ತಿಲ್ಲ, ಕನ್ನಡದಲ್ಲಿ ಅದಕ್ಕೆ ಹತ್ತಿರವಾಗಿ ಚುಟುಕುಗಳಿವೆ, ಹನಿಗವನಗಳಿವೆ. ಆದರೆ, ಚುಟುಕುಗಳು ಎಂದ ತಕ್ಷಣ ನಗೆ ಉಕ್ಕಿಸುವಂಥ ಚಾಟಿಗಳು ಎಂದೇ ಅಂದುಕೊಳ್ಳುತ್ತೇವೆ, ಹನಿಗವನಗಳು ಎಂದ ತಕ್ಷಣ ಮಯೂರ, ತುಷಾರ ಪತ್ರಿಕೆಗಳ ಸವಕಲು ಫಿಲ್ಲರ್ಸ್ ಅಂದುಕೊಳ್ಲುತ್ಟೇವೆ. ಆದ್ದರಿಂದ ಚುಟುಕುಗಳು ಅತಥವಾ ಹನಿಗವನಗಳು ಹೈಕುಗಳಲ್ಲ. ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ? ನಾನಂತೂ ಮಾಡಿದ್ದೇನೆ, ನಾನು ಬರೆಯುವ 'ನೀಲುಗಳ'ಲ್ಲಿ ಕಾವ್ಯ ಇದೆಯೋ ಇಲ್ಲವೋ ನಿಮಗೆ ಬಿಟ್ಟಿದ್ದು, ಬರೆಯುವುದು ನನಗೆ ಬಿಟ್ಟಿದ್ದು..

ನೀಲು ೧
ನೀಲು ೨
ನೀಲು ೩
ನೀಲು ೪
ನೀಲು ೫
ನೀಲು ೬
ನೀಲು ೭
ನೀಲು ೮
ನೀಲು ೯
ನೀಲು ೧೦

12 comments:

  1. ವಂದನೆಗಳು.
    ಖಂಡಿತವಾಗಿ "ನೀಲುಗಳು" ಎಂದು ಹೆಸರಿಡಬಹುದು. ಅಷ್ಟೇ ಯಾಕೆ ಅದೊಂದು "ಕಾವ್ಯ ಪ್ರಕಾರ" ಎಂಬಂತೆ ಹೆಸರಿಟ್ಟು ಮಾತಾಡಬೇಕು! "ನೀಲು"ತನ ಎಂಬಂಥ ಒಂದು ಯೋಚನಾಕ್ರಮ ಬೆಳೆಯಬೇಕು. ಅದೇನು ಎಂದು ನನಗೆ ಸ್ಪಷ್ಟವಾಗಿಲ್ಲ. ಬರೆಯುತ್ತಾ ಸ್ಪಷ್ಟವಾಗ ಬಹುದು. ಹೆಚ್ಚು ಹೆಚ್ಚು ನೀಲುಗಳನ್ನು ಬರೆಯಿರಿ. ನಾನೂ ಇನ್ನು ಮೇಲೆ ಬರೆದ ಹನಿಗವನಗಳಿಗೆ ನೀಲುಗಳೆಂದು ಕರೆದುಕೊಂಡು ನಿಮ್ಮ ಬ್ಲಾಗಿಗೆ ಕೊಂಡಿ ಕೊಡಲೆ? ದಯವಿಟ್ಟು ತಿಳಿಸಿ.
    ಅಂದ ಹಾಗೆ ಲಂಕೇಶರ ನೀಲುಗಳು ಪುಸ್ತಕರೂಪದಲ್ಲಿ ಪ್ರಕಟವಾಗಿವೆಯೆ? ತುಂಬಾ ಹಿಂದೊಮ್ಮೆ ಅವರ ನೀಲುವನ್ನು ರಾಗವಾಗಿ ಹಾಡಿಕೊಂಡೂ ಖುಷಿಪಟ್ಟಿದ್ದೆವು!
    http://anivaasi.blogspot.com

    ReplyDelete
  2. ಅನಿವಾಸಿ,

    ತಮಗೂ ನಮಸ್ಕಾರ. ನಿಮ್ಮ ಪ್ರತಿಕ್ರಿಯೆ ಓದಿ ತುಂಬ ಸಂತೋಷವಾಯಿತು. 'ನೀಲು' ವನ್ನು ಪ್ರೋತ್ಸಾಹಿಸಿದ್ದಕ್ಕೆ ವಂದನೆಗಳು. ನೀವು ಬರೆಯುವ ನೀಲುಗಳ ಕೊಂಡಿ ನನ್ನ ಬ್ಲಾಗ್ ನಲ್ಲಿ ಬಿಡಿ, ಅಭ್ಯಂತರವಿಲ್ಲ. ನಿಮ್ಮ ಬ್ಲಾಗ್ ತುಂಬ ಚೆನ್ನಾಗಿದೆ. ಮುಂದುವರೆಸಿ...

    ಕೇಶವ

    ReplyDelete
  3. ಕೇಶವರೆ,
    ನನ್ನ ಕೆಲವು ನೀಲುಗಳಿಗೆ ಕೊಂಡಿ ಇಲ್ಲಿದೆ.

    ಉಳಿದದ್ದು
    ಸವಾಲು
    ಮದುವೆ

    ದಯವಿಟ್ಟು ಓದಿ ಪ್ರತಿಕ್ರಿಯೆ ತಿಳಿಸಿ
    ವಂದನೆಗಳು

    ReplyDelete
  4. ಅನಿವಾಸಿಯವರೇ,

    'ಮದುವೆ' ತುಂಬ ಇಷ್ಟವಾಯಿತು, 'ಉಳಿದದ್ದು' ತುಂಬ ಚೆನ್ನಾಗಿದೆ. 'ಸವಾಲು' ನೀಲುಗಿಂತ ಹೆಚ್ಚಾಗಿ ಪದಗಳ ಆಟದಿಂದಾಗಿ ಚುಟುಕುಗಳನ್ನು ಹೆಚ್ಚು ಹೋಲುತ್ತದೆ ಎಂದು ನನಗೆ ಅನಿಸುತ್ತದೆ. ಇನ್ನೂ ಹೆಚ್ಚು ನೀಲುಗಳು ಹೊರಬರಲಿ.

    ಲಂಕೇಶರ ನೀಲುಗಳನ್ನು ಹೇಗೆ ಸಂಗ್ರಹಿಸುವುದು?

    ಕೇಶವ

    ReplyDelete
  5. ಕೇಶವರೆ,
    ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ಇತ್ತೀಚೆಗೆ "ನೀಲು ಕಾವ್ಯ" ಎಂದು ಸಂಗ್ರಹ ಅಚ್ಚಾಗಿದೆ. ಹೋದ ವಾರವಷ್ಟೇ ಗೊತ್ತಾಯಿತು. ತರಿಸಿಕೊಳ್ಳುತ್ತಿದ್ದೇನೆ. ಬೆಂಗಳೂರಿನ ಗಾಂಧಿ ಬಜಾರದ ಅಂಕಿತ ಪುಸ್ತಕದಲ್ಲಿ ಸಿಕ್ಕುತ್ತದೆ ಅಂದುಕೊಂಡಿದ್ದೇನೆ.
    ನಮಸ್ಕಾರ.

    ReplyDelete
  6. ಕೇಶವರೆ,
    ಇಲ್ಲಿ ಮತ್ತೊಂದು ನೀಲುವಿದೆ.ಮದ್ದು
    ನಮಸ್ಕಾರ.

    ReplyDelete
  7. ನಿಮ್ಮ 'ಮದ್ದು' ಚೆನ್ನಾಗಿದೆ.
    'ನೀಲು ಕಾವ್ಯ' ಪ್ರಕಟವಾಗಿರುವ ಸುದ್ದಿ ತುಂಬ ಸಂತೋಷ. ಈ ಸಲ ಬೆಂಗಳೂರಿಗೆ ಹೋದಾಗ ಕೊಳ್ಳುತ್ತೇನೆ. ತುಂಬ ಧನ್ಯವಾದಗಳು.

    ReplyDelete
  8. ನಿಮ್ಮ ನೀಲು-೪ ಚೆನ್ನಾಗಿದೆ. ಜತೆಗಿರುವ ಚಿತ್ರವೂ!
    ಇನ್ನೊಂದಷ್ಟು ನೀಲುಗಳನ್ನು (ತಾಳಬದ್ಧ, ಡೌಲು, ನೆರಳು) ಈ ಪುಟದಲ್ಲಿ ಹಾಕಿದ್ದೇನೆ

    ReplyDelete
  9. ಲಂಕೇಶರ "ನೀಲು ಕಾವ್ಯ" ಸಂಗ್ರಹ-೧ರ ಬಗ್ಗೆ ಇಲ್ಲಿ ಬರೆದಿದ್ದೇನೆ. ಆದಾಗ ನೋಡಿ.

    ReplyDelete
  10. ಅನಿವಾಸಿಯವರೇ,

    ತುಂಬ ಧನ್ಯವಾದಗಳು, ತಮ್ಮ ಬರಹವನ್ನು ಲಿಂಕ್ ಕೊಟ್ಟಿದ್ದಕ್ಕೆ.

    ReplyDelete
  11. ನೀಲು ಒಳ್ಳೆ ಹೆಸರು
    ನಿಮ್ಮ ನೀಲು ಚೆನ್ನಾಗಿದೆ
    ಸಖತ್ತಾಗಿದೆ
    ತೋಪಾಗಿದೆ
    ಅಂತೆಲ್ಲ ನೀಲುವನ್ನು
    ವಿಮರ್ಶಿಸಬಹುದು
    ಕಣವಿಯವರ ನೀಲುಗೊಂದು ಸಾಲು
    ಕವಿತೆ
    ಸಿಗುತ್ತಾ
    ರಶೀದ್

    ReplyDelete
  12. ನೀಲುವಿಗೊಂದು ಶಾಲು

    ಏನಮ್ಮ ನೀಲು-
    ನೀ ಮೂಲ್ಯಾಗಿಟ್ಟ ಬಣ್ಣದ ಕೋಲು
    ತಿವಿದರ ಮುಟ್ಟುಕೊಬೇಕು
    ಸೊಂಟ, ಕೈ, ಕಾಲು.
    ತುಂಟಾಟಕ್ಕ ನೀನs ಒಂದು ಸವಾಲು.

    ಪ್ರೀತಿ: ನಿನ್ನ ರೀತಿ: ಆದರೂ
    ಕೋತಿ ಆಡಿಸಿ ಮಜಾ ನೋಡಬೇಕಂತಿ.

    ಏನs ಬಿಡು, ಚಾಷ್ಟಿ ಮಾಡ್ತಾಳ ಅಂದ್ರ
    ಕಣ್ಣಾಗ ನೀರು ಬರೊ ಹಂಗ ಖರೇನ
    ಹೇಳ್‌ಬಿಡ್ತಿ.

    ಹಕ್ಕಿ ಹಾಂಗ ಎಲ್ಲ ಕಡೆ ಹಾರ್‍ಯಾಡ್ತಿ.
    ಸೊಕ್ಕು ಬಂದವರ ತಲಿ ಕುಕ್ಕತಿ
    ಕೋಳಿ ಹಾಂಗ ನಸೀಕಲೆ ಎಬ್ಬಿಸ್ತಿ
    ಬಾಗಿಲದಾಗಿನ ಬಳ್ಳಿ ಹಂಗ ಮೈತುಂಬ ಹೂ ಬಿಡತಿ

    ನಿನ್ನ ಗುಟ್ಟು ಯಾರಿಗೂ ಬಿಟ್ಟುಕೊಟ್ಟಿಲ್ಲ.
    ಆದರೆ ವಾರಕ್ಕೊಮ್ಮೆ ಬರೂದು ಬಿಟ್ಟಿಲ್ಲ.
    ಹಂಗ ನೋಡಿದರ ನೀಲು-ನೀ ಬಟಾಬಯಲು
    ಆದರೂ ಚಳಿಗಾಲದಾಗ ಇರಲಿ, ತಗೊ-
    ಹೊತಗೊ ಈ ಶಾಲು.
    -ಚನ್ನವೀರ ಕಣವಿ
    (ನೀಲು ಕಾವ್ಯ, ಹಿಂಪುಟದಿಂದ)

    ReplyDelete