Saturday, June 02, 2007

ತಾ ರಾ ರಂ ಪಂ

'ತಾ ರಾ ರಂ ಪಂ' ನೋಡಿದ ಮೇಲೆ ಬಂದಿರೋ ಸಿಟ್ಟು, ಕೋಪ, ತಾಪ, ಇನ್ನೂ ಏನೇನೋ ತಡಕೊಳ್ಳಲಿಕ್ಕೆ ಆಗದೇ ಬರೆಯುತ್ತಿದ್ದೇನೆ. ಈ ಬಾಲಿವುಡ್ ಜನಗಳಿಗೆ ಭಾರತದಲ್ಲಿರೋ ಭಾರತೀಯರ ಬಗ್ಗೆ ಭಾರತದಲ್ಲಿ ಸಿನಿಮಾ ಮಾಡುವುದು ಮರೆತು ಹೋಗಿದೆಯೋ ಹೇಗೆ? ಈ ದಟ್ಟ ದರಿದ್ರ ಸಿನಿಮಾ ಪೂರ್ತಿ ನಡೆಯುವುದು ನ್ಯುಯಾರ್ಕಿನಲ್ಲಿ, ನಟರು ಭಾರತೀಯರು ಮತ್ತು ಹಾಡುಗಳಿವೆ ಎನ್ನುವುದನ್ನು ಬಿಟ್ಟರೆ, ಬಾಕಿಯೆಲ್ಲ ಕೆಟ್ಟ ಹಾಲಿವುಡ್ ಚಿತ್ರದ ನಕಲು! DDLJ ಯಿಂದ ಶುರುವಾದ ರೋಗ ಇನ್ನೂ ಬಿಡುವಂತೆ ಕಾಣುತ್ತಿಲ್ಲ. ಕಾರ್ ರೇಸಂತೆ, ರೇಸಿನ champion ಭಿಕಾರಿಯಾಗುವಿದಂತೆ, ಮತ್ತೆ ಸೋಲನ್ನು ಗೆಲ್ಲುವುದಂತೆ...ರಾಮ, ರಾಮ, ನಮ್ಮ ಕರ್ಮ! ಬಾಲಿವುಡ್ಡಿನಲ್ಲಿ ಭಾರತವನ್ನು ನೋಡಿ ಯಾವ ಕಾಲವಾಯಿತೋ?ಅದೆಲ್ಲ ಇರಲಿ, ನಾಳೆ (sorry, ಇವತ್ತು) 'ರಾಮ, ಶ್ಯಾಮ, ಭಾಮ' ದ ಪ್ರದರ್ಶನವಿದೆ ಈ ಇಂಗ್ಲಂಡಿನಲ್ಲಿ! ಸಿನಿಮಾ ಹೇಗೇ ಇರಲಿ, ಇಂಗ್ಲಂಡಿನಲ್ಲಿ ಬೆಳ್ಳಿಪರದೆ ಮೇಲೆ ಕನ್ನಡ ಸಿನಿಮಾ ನೋಡುವುದೇ ಖುಷಿ, ಏನಂತೀರಾ?

No comments:

Post a Comment