Sunday, June 03, 2007

ರಾಮ ಶಾಮ ಭಾಮ


ಏನಂತೀರಾ? ಇವತ್ತು ಲಂಡನ್ನಿನ ಮಿನಿ ಭಾರತ (ಪಂಜಾಬ್)ದಲ್ಲಿರುವ 'ಹಿಮಾಲಯ' ಚಿತ್ರಮಂದಿರದಲ್ಲಿ ಗಾಂಧಿ ಕ್ಲಾಸಿನಲ್ಲಿ (ಎಲ್ಲಾ ಸೀಟೂ ಗಾಂಧಿ ಕ್ಲಾಸೇ, ಆ ಮಾತು ಬೇರೆ) ಕನ್ನಡ ಸಿನಿಮಾ 'ರಾಮ ಶಾಮ ಭಾಮ' ನೋಡಿ ಬಂದು, ರಾತ್ರಿ ೨ ಗಂಟೆಯಾದರೂ ನಗುತ್ತಿದ್ದೇನೆ. ಅದಕ್ಕೇ ಬರೆಯುತ್ತಿದ್ದೇನೆ...

ಇದರ ಎಲ್ಲ ಕೀರ್ತಿ ರವೀಂದ್ರ ಭರದ್ವಾಜ್ ಅವರಿಗೆ ಸೇರಬೇಕು. ಅವರು ತೆಗೆದುಕೊಂಡ ಶ್ರಮ ಅವರು ಬರೆದರೇನೇ ಚೆನ್ನಗಿರುತ್ತೆ. ಚಿತ್ರ ಮುಗಿದಾಗ ಚಿತ್ರನಟ ರಮೇಶ್ ಬೇರೆ ಮೊಬೈಲಿನಿಂದ ಮಾತಾಡಿದ್ದು ತುಂಬ ಖುಷಿಯಾಯಿತು. ೧೫೦ ಜನ ಕಡಿಮೆಯೇನಲ್ಲ, that too with such a short notice. ಇನ್ನೂ ಹೆಚ್ಚು ಕನ್ನಡ ಚಿತ್ರಗಳು ಬರಲಿವೆ, ಇಂಗ್ಲಂಡಿಗೆ...ಅವರು ಕನ್ನಡ ಟಿವಿಗಾಗಿಯೂ ಶ್ರಮಿಸುತ್ತಿದ್ದಾರೆ, ಶೀಗ್ರಮೇವ ಟಿವಿ ಪ್ರಾಪ್ತಿರಸ್ತು ಎಂದು ಉದಯ ಮತ್ತು ಈ ಟಿವಿ ಇಬ್ಬರೂ ತಥಾಸ್ತು ಎಂದರೆ ಸಾಕು. ನಾನು ಇಂಗ್ಲಂಡಿನಲ್ಲಿ ದಿನಾ ಕನ್ನಡ ಕಾರ್ಯಕ್ರಮಗಳನ್ನು ನೋಡಿಕೊಂಡು ಮಜವಾಗಿರ್ತೀನಿ. ಇಂಗ್ಲಂಡಿನಲ್ಲಿರುವ ಕನ್ನಡಿಗರೇ, ಅವರ ಜಾಲಕೊಮ್ಮೆ ಭೆಟ್ಟಿಕೊಡಿ, http://movies.harwest-uk.com/
ಇನ್ನು ಸಿನಿಮಾ ವಿಷಯ ಏನಂತೀರಾ? ನಿಮಗೆಲ್ಲ ಈ ಸಿನಿಮಾ ತುಂಬ ಹಳೆಯದಿರಬಹುದು, ಆದರೆ ನನಗೆ ಹೊಸದೇ! ಸತಿ ಲೀಲಾವತಿ ಚಿತ್ರದ ರಿಮೇಕ್ ಆದರೂ, ಕಮಲ್ ಹಾಸನನ ಉತ್ತರ ಕರ್ನಾಟಕದ ಕನ್ನಡ ಕೇಳಿ ಇನ್ನೂ ನೆನೆಸಿಕೊಂಡು ನಗುತ್ತಿದ್ದೇನೆ. ಸಂಭಾಷಣೆಕಾರನಿಗೆ ನಮೋನ್ನಮಃ!

No comments:

Post a Comment