Wednesday, June 13, 2007

ಶಕುಂತಲಾ


ಗುರುಪ್ರಸಾದ್ ಕಾಗಿನೆಲೆ ಯವರ 'ಶಕುಂತಲಾ' ದ ಹಸ್ತಪ್ರತಿ ಇಂದು ಪೋಸ್ಟ್ ನಲ್ಲಿ ಬಂದಾಗ ನನಗಾದ ಖುಷಿ ಅಷ್ಟಿಷ್ಟಲ್ಲ. ಇನ್ನೂ ಕಥಾಸಂಕಲನವನ್ನು ಓದಲು ಆರಂಭಿಸಿಲ್ಲ.

ಶ್ರೀರಾಂ ಅವರ ಕನ್ನಡವೇ ನಿತ್ಯ ಬ್ಲಾಗಿನಲ್ಲಿ ಅವರು ಬರೆದ ಶಕುಂತಳಾ ತಂದ ಹೊಸ ಹುರುಪು ಓದಿ ಆ ಕಥಾಸಂಕಲನವನ್ನು ಓದಬೇಕೆಂಬ ಆಸೆಯನ್ನು ಆ ಬ್ಲಾಗಿನ ಪ್ರತಿಕ್ರಿಯೆಯಲ್ಲಿ ವ್ಯಕ್ತಪಡಿಸಿದ್ದೆ (ಈ ದೂರದ ದೇಶದಲ್ಲಿ ಅಂತರ್ಜಾಲ ಬಿಟ್ಟರೆ ಕನ್ಣಾಡ ಓದಲುಸಾಧ್ಯವೇ ಇಲ್ಲ). ಅದನ್ನು ಓದಿದ ಬೆಂಗಳೂರಿನ ವಸುಧೇಂದ್ರ ಎನ್ನುವವರು ಕೂಡಲೇ ಈ-ಮೇಲ್ ಬರೆದು ಆ ಕಥಾಸಂಕಲನವನ್ನು ಇಂಗ್ಲಂಡಿಗೆ ಕಳಿಸಿ ಕೋಡುತ್ತೇನೆ ಎಂದು ಬರೆದು, ಈಗ ಅವರ ಮಿತ್ರರ ಮೂಲಕ ಕಳಿಸಿಕೊಟ್ಟಿದ್ದಾರೆ. ಆ ಮಹಾನುಭಾವರು ತಮ್ಮ ಹೆಸರನ್ನು ಅನಾಮಧೇಯರಾಗೇ ಉಳಿಸಿಕೊಂಡುನ್ನಗೆ ಪೋಸ್ಟ್ ಮಾಡಿದ್ದಾರೆ. ನನಗೆ ತುಂಬ ಖುಷಿಯಾಗಿದೆ.

ಶ್ರೀರಾಂ, ವಸುಧೇಂದ್ರ ಮತ್ತು ಅನಾಮಧೇಯರೇ, ನಾನು ತಮಗೆ ಋಣಿ!

No comments:

Post a Comment