Wednesday, June 27, 2007

ಕಡತಂದ ನೀಲುಗಳು

ನನಗೆ ಬ್ಲಾಗಿನಲ್ಲಿ ಸಿಗುವ ನೀಲುಗಳನ್ನು ಕಡತಂದು ಇಲ್ಲಿ ಸುರುವುತ್ತೇನೆ. ಬರೆದವರಿಗೆ ಈ ಕೆಲಸ ಇಷ್ಟವಿಲ್ಲದಿದ್ದರೆ ಹೇಳಿ, ತೆಗೆದು ಹಾಕುತ್ತೇನೆ.

ಅನಿವಾಸಿಯವರ ನೀಲುಗಳು:
'ಅನಿವಾಸಿ' ಯವರು ಅವರು ಬರೆದ ನೀಲುಗಳ ಲಿಂಕನ್ನು ಕಳಿಸಿದ್ದಾರೆ. ಕಳಿಸಿದ ಮೂರರಲ್ಲಿ ಎರೆಡು ಇಷ್ಟವಾದವು, ಕೊಂಡಿಯನ್ನು ಕೊಡುತ್ತಿದ್ದೇನೆ.
ಉಳಿದದ್ದು
ಮದುವೆ
ಗಂಡಾಂತರ
ಪಲಾಯನ

ನಾಗರಾಜ ಸೂರ್ಯ ನಾರಾಯಣ ಪಾಂಡೆ:
(ರಶೀದರ ಮೈಸೂರ್ಪೋಸ್ಟ್ನಿಂದ)

ದ್ವೇಷವಾದರೆ ಬಿಡಿ
ಬಾಗಿಲು ಮುಚ್ಚಿಬಿಡಬಹುದು
ಬಾಗಿಲೊಡೆದು ಒಳ ಬರುವ
ಸ್ನೇಹವನ್ನೇನು ಮಾಡಬೇಕು?

ಮೋಹಿತ:
(ರಶೀದರ ಮೈಸೂರ್ಪೋಸ್ಟ್ನಿಂದ)

ನೀಲು ೧:
ನಿನ್ನ ತೆರೆದ ತೋಳನ್ನ ಕಂಡು
ಈವರೆಗೆ ಒಂದು ನೀಳ ನಿದ್ದೆ.
ಇದೀಗ ಎದ್ದಾಗ ಒಂದು ಕಂದು ಮಲೆ,
ಹಸಿವು -ಮತ್ತು ಅಸಹನೀಯ ಈ ಮಳೆ.

ನೀಲು ೨:
ಹೋಗು. ತಟ್ಟೆಯಲ್ಲಿ ಅನ್ನವಿಡು.
ನಿನ್ನೆಯ ಸಾಂಬಾರು.
ನೆರಿಗೆ ಸರಿಪಡಿಸಿಕೋ.
ನಿನ್ನ ಮುಂಗುರುಳಲ್ಲಿ
ನನ್ನ ಬೆರಳು.
ನಿನ್ನ ಎದೆಯಲ್ಲೇ ಉಳಿದ
ನನ್ನ ಒಂದು ಬಿಳಿಯ ಕೂದಲು.

ದುಂಡಿರಾಜ್: (ದುಂಡಿರಾಜರ ಈ ನಗೆಚುಟುಕು ನೀಲು ಕೂಡ)

ನಾಚುತ್ತಾ ಆಕೆ
ಎದೆಯ ಮೇಲಿನ ಹೊದಿಕೆ
ಸರಿಸುತ್ತಾ ಕೊಂಚ ಕೊಂಚವೇ ಬದಿಗೆ
ಪಾಡ್ಯ
ಬಿದಿಗೆ
ತದಿಗೆ
ಪೂರ್ಣಿಮೆ
------------------------------
ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ ಹಣ ನೆಲ
ಹೊನ್ನು ಬೇಕು.
ಕೆಲವರಿಗೆ ಪ್ರೀತಿ
ಎಲ್ಲೋ ಕಾಣದ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು
ಬಡಜೋಗಿಯ ಹಾಡು.
-----------------------------
ಸನತ್, ಮೈಸೂರು:
ಮುಚ್ಚಿದ ಬಾಗಿಲಿನ ಕತ್ತಲೆ ಕೋಣೆಯಲ್ಲಿ ಅವರಿಬ್ಬರು
ಪ್ರೀತಿಯ ದಿವ್ಯಬೆಳಕನ್ನ ಹುಡುಕುತ್ತಿದ್ದರೆ
ಉಳಿದವರೆಲ್ಲರಿಗೆ ಕಾಮದ ವಾಸನೆ ಬಡಿಯುತ್ತಿತ್ತು

ಕುಂಟಿನಿ:

ದೇವರನ್ನು
ಅರಸಿಕೊಂಡು ಹೋದವನು
ಮರಳಿ
ಬಂದು
ದೇವರನ್ನು ನಿರಾಕರಿಸುವನು
ಅದುವೇ
ಪೂರ್ಣತ್ವ.
-----------
ನಿತ್ಯ ಮುಂಜಾನೆ
ಹಕ್ಕಿಯ ಕಲರವದಲ್ಲಿ
ನಿನ್ನ ಸಂತೋಷಕ್ಕಿಂತ
ಅದರ ಪಾಡಿದೆ.
----------------
ಹೆತ್ತು ಸಲಹುವುದಕ್ಕೆ ಮಾತ್ರಾ
ಮನೆ ಕಟ್ಟುವ ಹಕ್ಕಿ
ಮನುಷ್ಯನ ವಾಸ್ತವ್ಯವನ್ನು ಅಣಕಿಸುವುದು.
---------------------

ಜೋಗಿಯವರೂ ನೀಲುಗಳನ್ನು ಬರೆಯಲು ಆರಂಭಿಸಿದ್ದಾರೆ:

ಹರೆಯ ಉಕ್ಕಿದಾಕೆಗೆ ಹಿತವಚನ ಎಂಬಂತೆ..

No comments:

Post a Comment