Monday, July 02, 2007

ಸಾಹಿತ್ಯ

ಸಾಹಿತ್ಯ




ಇದ್ದಳು ಇಲ್ಲೊಬ್ಬಳು
ಗಾಳಿಯಂತೆ
ಮಳೆಯಂತೆ
ಕಾಮನಬಿಲ್ಲಿನಂತೆ


ಮದುವೆಗೆ ಮೊದಲು
ಹುಡುಗರನ್ನು ಕಣ್ಣೆತ್ತಿಯೂ ನೋಡಿರದ ಹುಡುಗಿ
ಹಳ್ಳಿ ಬಿಟ್ಟು ಹೊಲವನ್ನೂ ನೋಡಿರದ ಹುಡುಗಿ


ಮದುವೆಯಾಗಿ ಮಕ್ಕಳಾಗುತ್ತಿದ್ದಂತೆಯೇ
ಗಂಡನನ್ನು ಬಿಟ್ಟು



ಮುಕ್ತಳಾದಳು



ಊರು ಬಿಟ್ಟಳು
ಓಡಿದಳು
ಓದಿದಳು
ಹಾಡಿಗಳು
ಕುಣಿದಳು


ಎಲ್ಲ ಗಂಡಸರ
ಗಂಡಸ್ತಿಕೆಗೆ
ಸವಾಲಾದಳು


ಇನ್ನೂ ಒಬ್ಬ ಪ್ರೇಮಿ
ನಿದ್ದೆಯಿಂದ ಏಳುವ ಮೊದಲೇ
ಇನ್ನೊಬ್ಬನನ್ನು ತೆಕ್ಕೆಗೆ
ಎಳೆದುಕೊಂಡಳು



Bloddy Bitch!
ಹಾದರಗಿತ್ತಿ!!
ಸೂಳೆ!!!


ಹಳೆಯ ಗಂಡ, ಹಳೆಯ ಪ್ರೇಮಿಗಳು
ಮಕ್ಕಳು, ಬಂಧುಗಳು, ಗೆಳೆಯರು
ಬೊಬ್ಬೆಹೊಡೆದರು
ಊಳಿಟ್ಟರು
ಅತ್ತರು


ಅವಳಿಗೆ ಇದನ್ನೆಲ್ಲ ಕೇಳಿಸಿಕೊಳ್ಳಲೂ
ಪುರುಸೊತ್ತಿರಲಿಲ್ಲ


ಹಾರಿದಳು
ಪುರುಷನಿಂದ ಪುರುಷನೆಡೆ
ಊರಿಂದ ಊರಿಗೆ
ದೇಶದಿಂದ ದೇಶಕ್ಕೆ


'Bookers'
ಹುಡುಕಿಕೊಂಡು ಬಂತು


ಅರವತ್ತರ ಹರೆಯದಲ್ಲಿ
ಹೊಸ ಪ್ರೇಮಿಯ ಜೊತೆ
ಮರಳಲ್ಲಿ ಮನೆ ಕಟ್ಟುತ್ತಿರುವಾಗ


Noble
ಧನ್ಯವಾಯಿತು

3 comments:

  1. ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
    http://enguru.blogspot.com

    ReplyDelete
  2. ನಿಮ್ಮ ಸಾಹಿತ್ಯದಲ್ಲಿ ಕೆಲವು ತೊಡಕುಗಳಿವೆ.
    ನೀವೇಕೆ ಸಾಹಿತ್ಯವನ್ನು ಹೆಣ್ಣೆಂದು ಭಾವಿಸಬೇಕು ಮತ್ತು ಸಾಹಿತಿಯನ್ನು ಗಂಡೆಂದು ಭಾವಿಸಬೇಕು? ಮತ್ತು ನಿಮ್ಮ ಹಾದರಗಿತ್ತಿ ಪಟ್ಟ ಸಾಹಿತ್ಯಕ್ಕೋ ಅಥವಾ ಪ್ರಶಸ್ತಿಗಳಿಗೋ ವಿವರಿಸುವಿರಾ? ಅಷ್ಟಕೂ ಈ ಪಟ್ಟ್ ಕಟ್ಟುವ ಔಚಿತ್ಯವನ್ನು ವಿವರಿಸುವಿರಾ?

    ReplyDelete
  3. ಅನಾಮಧೇಯರೇ,

    ಒಮ್ಮೆ ಕವನ ಬರೆದಾದ ಮೇಲೆ, ಕವಿಗೂ ಕವನಕ್ಕೂ ಯಾವ ಸಂಬಂಧವಿಲ್ಲವೆಂದು ನಂಬಿದವನು ನಾನು; ಅರ್ಥ ನಿಮಗೆ ಬಿಟ್ಟದ್ದು.

    ಕೇಶವ

    ReplyDelete