Thursday, July 12, 2007

ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...


ಇದು ನಾನು ಬರೆದ ಪದ್ಯವಲ್ಲ. ಕಿಶೋರ್ ಕುಮಾರ್ ಹಾಡಿದ आ चल के तुझे, मैं लॆके चलुं ಕೇಳುತ್ತ ಹಾಡಿನ ರಾಗಕ್ಕೆ ಕನ್ನಡದಲ್ಲಿ ಗುಣುಗುಣಿಸುತ್ತಿದ್ದೆ, ಅಷ್ಟೇ!



ಬಾ ನನ್ನ ಜೊತೆ ನಾ ಕರೆದೊಯ್ಯುವೆ

ಆ ದೂರ ಗಗನದೆಡೆ

ಎಲ್ಲಿ ದುಃಖವಿರದೋ ಕಣ್ಣೀರಿರದೋ

ಆ ದೂರ ಗಗನದೆಡೆ //ಪ//


ಸೂರ್ಯನ ಮೊದಲನೆ ಕಿರಣ

ಆಸೆಯ ಬೆಳಕಿನ ಸ್ಫುರಣ

ಚಂದ್ರನ ತಿಂಗಳ ಬೆಳಕು

ಅಂಧಕಾರ ಹೋಯಿತು ಹೊರಕು


ಬಿಸಿಲೇ ಇರಲಿ ನೆರಳೇ ಬರಲಿ

ನಮ್ಮ ದಾರಿ ಗಮ್ಯದೆಡೆ

ಎಲ್ಲಿ ದುಃಖವಿರದೋ ಕಣ್ಣೀರಿರದೋ
ಆ ದೂರ ಗಗನದೆಡೆ //೧//


ಕಣ್ಣನ್ನು ಚಾಚಿದಸ್ಟೂ

ಮುಕ್ತ ಗಗನದ ನೋಟ

ಅಲ್ಲಿ ರಂಗು ರಂಗಿನ ಹಕ್ಕಿ

ಆಶಾಸಂದೇಶ ತರಲಿ


ಕನಸಿನ ಚಿಗುರು ನಳನಳಿಸಲಿ

ಸಂಜೆಯ ತಳಿರಿನಡಿ

ಎಲ್ಲಿ ದುಃಖವಿರದೋ ಕಣ್ಣೀರಿರದೋ

ಆ ದೂರ ಗಗನದೆಡೆ //೨//

2 comments:

  1. ಚೆನ್ನಾಗಿದೆ

    ReplyDelete
  2. geLeyare,
    KannaDada para chintane, charche, hot discussions
    ella ee hosa blog alloo nadeetide. illoo bhAgavahisONa banni !

    http://enguru.blogspot.com

    - KattEvu kannaDada naaDa, kai joDisu baara !

    ReplyDelete