Saturday, August 11, 2007

ಇವರೂ ನಮ್ಮವರು


ನಮ್ಮ ಮನೆ ಇರೋದು ಲಂಡನ್ನಿನ ಹ್ಯಾರೋ (ನಾನು ನನ್ನ ಗೆಳೆಯ ಹಾರೂಕೇರಿ ಅಂತ ತಮಾಷೆ ಮಾಡುತ್ತೇವೆ) ದಲ್ಲಿ. ಇಲ್ಲಿ ಜಾಸ್ತಿ ಜನ ಭಾರತೀಯರು, ಪಾಕಿಸ್ತಾನದವರು ಮತ್ತು ಶ್ರೀಲಂಕದವರು. ಮೊನ್ನೆ ನಮ್ಮ ಮನೆಗೆ ಬಂದವರನ್ನು (ಅವರು ಇಂಗ್ಲಂಡಿಗೆ ಬಂದು ೧೦ ವರ್ಷವಾದವು) ಕರೆದುಕೊಂಡು ಹ್ಯಾರೋ-ಅನ್-ದ-ಹಿಲ್ ನ ಶಾಪಿಂಗ್ ಮಾಲ್ ಗೆ ಹೋಗಿದ್ದೆವು. ಅಲ್ಲಿ ವಿಂಡೊ ಷಾಪಿಂಗ್ ಮಾಡುತ್ತಿರುವಾಗ, ಅವರು ಹೇಳಿದರು, " ಅಯ್ಯೋ, ಎಷ್ಟು ಕೆಟ್ಟದಾಗಿದೆ ಈ ಶಾಪಿಂಗ್ ಜಾಗ, ಬರೀ ಇಂಡಿಯನ್ಸ್".

ಮನೆಗೆ ಬಂದು ಮಾತಾಡುತ್ತ ಕುಳಿತಿದ್ದೆವು, ಅಮೇರಿಕದ ಬಗ್ಗೆ ಮಾತು ಬಂತು. ಆಗ ಅವರು ಹೇಳಿದರು, " ಅಯ್ಯೊ, ನಾನಂತೂ ಅಮೇರಿಕಕ್ಕೆ ಹೋಗುವುದಿಲ್ಲ, ಅಮೇರಿಕನೂ ಇಂಡಿಯಾದಂತೆ, ತುಂಬ ಒರಟು ಜನ. ಇಂಗ್ಲಂಡಿನ ಜನ ಆರ್ಟಫಿಸಿಯಲ್ ಆದರೂ ಎಷಟು ಚೆನ್ನಾಗಿ ಬಿಹೇವ್ ಮಾಡುತ್ತಾರೆ".

(ಈ ಮೇಲಿನ ಫೋಟೊ ೧೯೭೦ ರಲ್ಲಿ ಲಂಡನ್ನಿನ್ನ ಸೌಥ್-ಹಾಲ್ ನಲ್ಲಿ ತೆಗೆದ ಚಿತ್ರ, ನೆಟ್ಟಿಂದ)

2 comments: