Friday, October 12, 2007

ಇಷ್ಟು ದಿನಗಳ ವಿಶ್ರಾಂತಿ!!


ಇಷ್ಟು ದಿನಗಳು ನಾನು ಏನನ್ನೂ ಬರೆಯದೇ ಇರಲು ಕಾರಣ, ಈ ಬಾರಿ, ಖಂಡಿತ ನನ್ನ ಸೋಮಾರಿಯತನವಲ್ಲ. ಲಂಡನ್ನಿನಿಂದ ಬರ್ಟನ್ ಏಂಬ ಊರಿಗೆ ಹೊಸ ಕೆಲಸಕ್ಕಾಗಿ ಗಂಟುಮೂಟೆ ಕಟ್ಟಿಕೊಂಡು ಬರುವ ಕೆಲಸ ಹತ್ತಿರ ಹತ್ತಿರ ನನ್ನ ಒಂದು ತಿಂಗಳನ್ನು ತಿನ್ನುತ್ತದೆ ಏಂದು ನಾನು ಅಂದುಕೊಂಡಿರಲಿಲ್ಲ.ಇದರ ನಡುವೆ ನನ್ನ ಮನೆಯ ಜಾಲ ಬೇರೆ ತಗಿಸಿದ್ದೆ. ಹೊಸ ಮನೆಗೆ ಇನ್ನೂ ಬಂದಿಲ್ಲ. ಆಸ್ಪತ್ರೆಯಲ್ಲಿ ಜಾಲದಿಂದ ಬರಹವನ್ನು ಇಳಿಸಿಕೊಳ್ಳಲು ಬಿಡುವುದಿಲ್ಲ. ಹಳೆಯ ಆಸ್ಪತ್ರೆಯಲ್ಲಿ ಬ್ಲಾಗಿಸುವುದನ್ನು ನಿಷೇದಿಸಿದ್ದರು. ನನಗೆ ರೇಗಿ ಹೋಗಿತ್ತು. ಈ ಹೊಸ ಆಸ್ಪತ್ರೆಯಲ್ಲಿ ಇನ್ನೂ ಬ್ಲಾಗಿಸಲು ಬಿಡುತ್ತಾರೆ. ಗೂಗಲ್-ನಲ್ಲಿ ಹುಡುಕಿ ಆನ್-ಲೈನ್ ಟೈಪಿಸುವ ಜಾಲದಲ್ಲಿ ಈಗ ಬರೆಯುತ್ತಿದ್ದೇನೆ, ನನ್ನ ಖುಶಿಗೆ ಮೇರೆಯೇ ಇಲ್ಲ. ಇನ್ನು ಮುಂದೆ ಆಸ್ಪತ್ರೆಯಿಂದಲೂ ಬ್ಲಾಗಿಸಬಹುದು, till they block blogging from the hospital site.

No comments:

Post a Comment