Sunday, December 16, 2007

ನೀಲು ೧೦


ಜಾತಿ ಧರ್ಮ ವರ್ಣ ಗಡಿ

ಇತಿಹಾಸದುದ್ದಕ್ಕೂ

ಚೆಲ್ಲಿದ ರಕ್ತ ದ್ವೇಷ ವೈಷಮ್ಯ ಕುರಿತು

ತಲ್ಲಣಗೊಂಡು ಮಾತಾಡುತ್ತಿದ್ದರೆ

ತನ್ನ ತುಂಬಿದ ಹೊಟ್ಟೆಯ ಮೇಲೆ

ನನ್ನ ಕೈಯಿಟ್ಟು 'ಭವಿಷ್ಯ' ಎಂದು

ನಿದ್ದೆ ಹೋದಳು

No comments:

Post a Comment