Tuesday, December 18, 2007

ಹೊಸ (technical) ಕನ್ನಡ ಪದಗಳು

ತಾಂತ್ರಿಕವಾದ ಇಂಗ್ಲೀಷ್ ಶಬ್ದಗಳನ್ನು ಕನ್ನಡೀಕರಣ ಮಾಡುವಾಗ ಸಂಸ್ಕೃತದ ಮೊರ ಹೋಗುತ್ತೇವೆ, ತಪ್ಪಲ್ಲ. ಆದರೆ ಸಂಸ್ಕೃತ ಕನ್ನಡವನ್ನು ತುಂಬ ಭಾರ ಮಾಡುತ್ತದೆ ಮತ್ತು ಮಾತಾಡುವಾಗ ಅಡ್ಡಬರುತ್ತದೆ, ಆದ್ದರಿಂದ ನಾವು ಮಾತಾಡುವಾಗ ಭಾಷಾಂತರಿಸಿದ ಸಂಸ್ಕೃತವನ್ನು ಉಪಯೋಗಿಸದೇ ಮೂಲ ಇಂಗ್ಲೀಷನ್ನೇ ಉಪಯೋಗಿಸುತ್ತೇವೆ. ಕನ್ನಡದಲ್ಲಿ ಸಂಸ್ಕೃತವನ್ನಾಗಲೀ, ಇಂಗ್ಲೀಷನ್ನಾಗಲೀ, ಉರ್ದು, ಪಾರ್ಸಿ, ಎನ್ನಾವುದೇ ಭಾಷೆಯನ್ನಾಗಲಿ ಉಪಯೋಗಿಸುವುದರ ವಿರುದ್ಧವೇನಲ್ಲ ನಾನು. ಹಾಗೆ ನೋಡಿದರೆ ಇಂಗ್ಲೀಷ್ ಭಾಷೆಯಲ್ಲಿ ಮೂಲ ಇಂಗ್ಲೀಷ್ ಪದಗಳು ಎಷ್ಟಿವೆ? ಆದರೂ ತಾಂತ್ರಿಕ ಪದಗಳಿಗೆ ಹೊಸದಾಗಿ ಕನ್ನಡ ಪದಗಳನ್ನು ಹುಟ್ಟುಹಾಕುವ, ಸಂಪದದಿಂದ ಕಡ ತಂದು ಒಟ್ಟು ಮಾಡುವ ಯೋಚನೆ ನನದು. ಹೊಸಪದಗಳು ಇಂಗ್ಲೀಷಿನ ಭಾಷಾಂತರವಾಗ ಬೇಕಿಲ್ಲ, ಮೂಲಕ್ಕೆ ಹತ್ತಿರ ಅರ್ಥ ಬಂದರಾಯಿತು.

B:
Blog: ಜಾಲ-ಜಗುಲಿ = ಜಗುಲಿ

C:
CD (Compact Disc): ಒತ್ತಟ್ಟೆ (ಒತ್ತಾಗಿರುವ ತಟ್ಟೆ), ಬಿಲ್ಲೆ
Chat room: ಹರಟೆಕಟ್ಟೆ
Computer: ಎಣಿ (ಎಣಿಸುವುದು ಯಾವುದೋ ಅದು ಎಣಿ), ಸಂಸ್ಕೃತ: ಗಣಕಯಂತ್ರ

L:
Laptop: ಪುಟ್ಟೆಣಿ (ಪುಟ್ಟ ಎಣಿ). Laptop ಸಣ್ಣ ಕಂಪ್ಯೂಟರ್ ತಾನೆ? ಗುರುಪ್ರಸಾದ್ ಕಾಗಿನೆಲೆ ತಮ್ಮ ’ಬಿಳಿಯ ಚಾದರ’ ಕಾದಂಬರಿಯಲ್ಲಿ ’ತೊಡೆಮೇಲಿಗ’ ಅಂತ ಕರೆದಿದ್ದಾರೆ.
Link: ಕೊಂಡಿ, ಎಳೆ

M:
Mobile: ಜಂಗಮ

P:
Palmtop: ಕೈಯೆಣಿ (ಕೈ ಎಣಿ)

R:
Radio: ಬಾಂದನಿ (ಬಾನ್-ದನಿ), ಬಾನುಲಿ

S:
Satellite Navigator (GPS): ಬಾನ್ಸೂಚಿ, ದಾರಿಣಿ (ದಾರಿ ತೋರಿಸುವ ಯಂತ್ರ)

W:
Web: ಜಾಲ, ಬಲೆ

6 comments:

  1. ಚೆನ್ನಾಗಿದೆ. 'ಸ್ವಯಂವರಲೋಕ’ ನಾಟಕದಲ್ಲಿ ಕೆ.ವಿ.ಅಕ್ಷರ ಅವರು "ತೊಡೆಗಣಕ’ ಅಂದಿದ್ದಾರೆ ಗೊತ್ತೆ?!

    ReplyDelete
  2. ಹಾಗೇನಿಲ್ಲ ಸ್ವಾಮೀ ನಾನೂ ಕನ್ನಡದಲ್ಲಿ ಬರಿತೇನೆ.
    http://raguks.blogspot.com/2006/07/blog-post.html
    http://haadugalu.blogspot.com/

    ನಿಮ್ಮ ಜಗುಲಿ! ಚೆನ್ನಗಿದೆ. ನನ್ನ ತಲೆಗೆ ಹೊಳೆದವೊ೦ದಷ್ಟನ್ನ ಹೇಳ್ತೀನಿ:

    web log anna ಜಾಲ ಪಟ್ಟಿ ಅಥವಾ ಜಾಪಟ್ಟಿ ಅನ್ನಭುದೇನೋ.

    Indigestion ಗೆ ನಾವು ಅಜೀರ್ಣ ಅ೦ತಾನೂ ಹೇಳ್ತೀವಿ.
    loungue = ಕೈಸಾಲೆ
    stand = ನಾಗ೦ದಿಗೆ.

    ಸಾದ್ಯ ಆದ್ರೆ ಯೆಲ್ಲಾಸೇರಿ ಒ೦ದು ಪಟ್ಟಿ ಮಾಡೋಣ ಯೇನ೦ತೀರಾ?

    ReplyDelete
    Replies
    1. kannadadlli iththeechege sakastu padaglu thappu thappagi balakeyaguththive. avugala bagege swalpa kelasa madbeku kanri.

      Delete
  3. ರಘು,
    ಧನ್ಯವಾದಗಳು,
    ಈ ಕೆಲಸವನ್ನು ಇಲ್ಲಿಗೇ ನಿಲ್ಲಿಸುವುದು ಬೇಡ.
    ನಿಮ್ಮ ಜಗುಲಿಗೂ ಬರುತ್ತೇನೆ
    ಕೇಶವ

    ReplyDelete
  4. ಕೇಶವ,

    ಬಾಂದನಿ ಯಾಕ? ಈಗಾಗಲೆ ಬಾನುಲಿ(ಬಾನು+ಉಲಿ) ಎಂಬ ಪದ ಚಾಲ್ತಿಯಲ್ಲಿದೆಯಲ್ಲ. ಬಹುಶಃ ಇದನ್ನು ನೀನು ಇಂಗ್ಲೀಷ್ ದಾಳಿಗೆ ಸಿಲುಕಿದ ಪದಕ್ಕೆ ಸೇರಿಸಬೇಕು.

    ReplyDelete
  5. ಹೌದು ರಾಧಿಕಾ, ಖರೆವಂದ್ರೂ ಖರೆ
    ಕೇಶವ

    ReplyDelete