Saturday, January 12, 2008

ಕ್ರಿಸ್ಮಸ್ ಮತ್ತು ರಂಜಾನ್



ಕ್ರಿಸ್ಮಸ್ ಹಬ್ಬದಲ್ಲಿ ನಮ್ಮ ದೇಶದ ಜನರ (ಮಕ್ಕಳಿರುವ) ಸರಿಸುಮಾರು ಎಲ್ಲರ ಮನೆಮುಂದೆ ದೀಪಗಳ ತೋರಣ, ಮನೆಯಲ್ಲಿ ಕೃತಕವಾದ ಕ್ರಿಸ್ಮಸ್ ಗಿಡ, ಆ ಗಿಡಗಳ ಸುತ್ತ ಸಾಂಟಾಕ್ಲಾಸನೆಂಬ ಬಿಳಿ ಗಡ್ಡದ ಮುದುಕ ತಂದು ಕೊಡುವ ಗಿಫ್ಟ್ ಗಳು, ಮಕ್ಕಳ ಖುಷಿಗೆ ಮೇರೆಯೇ ಇರಲಿಲ್ಲ. ಇದಕ್ಕೆ ಆ ಮಕ್ಕಳ ತಂದೆ ತಾಯಂದಿರು ಕೊಡುವ ಕಾರಣ ತುಂಬ ಸರಳ - ಮಕ್ಕಳಿಗೆ ಬೇಜಾರು ಆಗಬಾರದು, ಪಕ್ಕದ ಮನೆಯವರಿಗೆ ಬೇಜಾರು ಆಗಬಾರದು. "Be a Roman in Rome" ಎಂಬ ಗಾದೆ ಮಾತುಗಳಿಂದ ಸಮಜಾಯಿಷಿ.



ನಾನು ಸೈದಿ ಅರೇಬಿಯಾದಲ್ಲಿದ್ದಾಗ, ಒಂದೇ ಒಂದು ಮುಸಲ್ಮಾನರ ಹಬ್ಬವನ್ನು ಯಾವ ಮುಸಲ್ಮಾನನಲ್ಲದ ಭಾರತೀಯನೂ ತಮ್ಮ ಮನೆಯಲ್ಲಿ ಆಚರಿಸಿದ್ದನ್ನು ಕಾಣೆ. ಕೇರಳದ ಮುಸ್ಲಿಂ ಗೆಳೆಯರು ತುಂಬು ಪ್ರೀತಿಯಿಂದ ತಂದು ಕೊಡುವ ಕೋಳಿ-ಬಿರಿಯಾನಿಯನ್ನು ಮಾತ್ರ ಚಪ್ಪರಿಸಿ ಸುಮ್ಮನಾಗುತ್ತಿದ್ದೆವು. ಮಕ್ಕಳಿಗೆ ಬೇಜಾರು ಆಗಬಾರದು, "be a Roman in Rome" ಎಂಬ ಮಾತುಗಳು ಇಲ್ಲಿ ಅನ್ವಯಿಸುವುದಿಲ್ಲವೇ?



(ಇದಕ್ಕೆಲ್ಲ ಉದ್ದುದ್ದ ರಾಜಕೀಯದ, ಜಾಗತೀಕರಣದ, ಜನಾಂಗೀಯ, ಧಾರ್ಮಿಕ ವಿವರಣೆಗಳನ್ನು ಅವರವರ ಭಾವಕ್ಕೆ ತಕ್ಕಂತೆ ಕೊಡಬಹುದು - ಅದೆಲ್ಲ ತಮತಮಗೆ ಬಿಟ್ಟಿದ್ದು)

No comments:

Post a Comment