Thursday, February 14, 2008

ವೆಲೆಂಟೈನ್ ಡೇ ದಿನ ಕೆ.ಎಸ್ ಹಾಡು


ವೆಲೆಂಟೈನ್ ಡೇ ದಿನ ಕೆ.ಎಸ್.ನರಸಿಂಹಸ್ವಾಮಿಯವರ ಈ ಕವನವನ್ನು ನಿಮ್ಮ ಜೊತೆಗಾತಿ (ರ) ಯೊಡನೆ ಹಾಡಿನೋಡಿ:


ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ

ಬರುವ ಕಂಪಿನ ಹೆಸರು ಪ್ರೇಮವೆಂದು

ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ

ಕಣ್ಣ ಸನ್ನೆಯ ಹೆಸರು ಪ್ರೇಮವೆಂದು


ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ

ದೂರದಿಂಪಿನ ಹೆಸರು ಪ್ರೇಮವೆಂದು

ಮಾಲುಗಣ್ಣಿನ ಹೆಣ್ಣೆ, ನಿನ್ನ ತುಟಿಯಿಕ್ಕೆಲದ

ಮಂದಹಾಸದ ಹೆಸರು ಪ್ರೇಮವೆಂದು


ಯಾವುದೋ ಕನಸಿನಲಿ ಯಾರೋ ಹಾಡಿದ ಹಾಡು

ಮಿಡಿದ ಹೃದಯದ ಹೆಸರು ಪ್ರೇಮವೆಂದು

ಬಳಿಗೆ ಬಾರೆನ್ನವಳೆ, ಬಿಗಿದಪ್ಪಿ ಮಾತಾಡು

ನಾನದನೆ ಕರೆಯುವೆನು ಪ್ರೇಮವೆಂದು


ಬಾರೆನ್ನ ಮನದನ್ನೆ ಬರಲಿ ಹತ್ತಿರ ಕೆನ್ನೆ

ಮುತ್ತಿನಲಿ ಒಂದಾಗಲೆರಡು ಜೀವ

ಬಾಳಿನೇರಿಳಿತಗಳ ಮುಗಿವಿರದ ಪಯಣಕ್ಕೆ

ಶುಭವ ಕೋರಲಿ ಸುಳಿದು ಧನ್ಯಭಾವ

1 comment: