Saturday, March 01, 2008

ಎರಡು ಬ್ರಾಹ್ಮಣ ಕತೆಗಳು

ಈ ಕತೆಯನ್ನು ಓದದ ಕನ್ನಡ ಓದುಗನಿಲ್ಲ ಎನ್ನುವಷ್ಟು ಪ್ರಸಿದ್ಧವಾದ ಕತೆ ಖಾಸನೀಸರ "ತಬ್ಬಲಿಗಳು". ಇನ್ನೊಂದು ಹೊಸ ಪೀಳಿಗೆಯ ವಸುಧೇಂದ್ರ ಬರೆದ ಸೀಳುಲೋಟ .

ಈ ಎರಡೂ ಕತೆಗಳಲ್ಲಿ ಇರುವ ಸಾಮ್ಯತೆ ಮತ್ತು ವ್ಯತ್ಯಾಸ ಅಗಾಧವಾದದ್ದು. ಎರಡು ಕತೆಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣಸಿಗುವ ಮಾಧ್ವ ಬ್ರಾಹ್ಮಣರ ಕತೆಗಳು. ಒಂದು ಕತೆ ಮಂತ್ರಾಲಯ, ಇನ್ನೊಂದು ಕತೆ ತಿರುಪತಿ! ಈ ಎರಡೂ ಜಾಗಗಳು ಮಾಧ್ವ ಬ್ರಾಹ್ಮಣರಿಗೆ ಬಹಳ ಪುಣ್ಯಕ್ಷೇತ್ರಗಳು - ಸರ್ವರುಗಾಪಹಾರಿ ರಾಘವೇಂದ್ರ ಸ್ವಾಮಿಗಳು ಮಂತ್ರಾಲಯದಲ್ಲಿ, ಮನೆದೇವರು ತಿರುಮಲದಲ್ಲಿ.

"ತಬ್ಬಲಿಗಳು" ಕತೆ ತುಂಬ ಗಂಭೀರ, ಮೊದಲಿನಿಂದ ಕೊನೆವರೆಗೂ; ಬ್ರಾಹ್ಮಣರ ಯಾವ ರೀತಿ ರಿವಾಜುಗಳನ್ನೂ ಹೆಚ್ಚಿಗೇನೂ ಹೇಳದೇ, ಆ ಮನಸ್ಸುಗಳ ಒಳಗನ್ನು ನಿಧಾನವಾಗಿ ಯಾವ ಭಿಡೆಯಿಲ್ಲದೇ ನಿಭಾವುಕವಾಗಿ ಬಿಚ್ಚುತ್ತಾ ಎಲ್ಲರ ಬದುಕನ್ನೂ ತಬ್ಬಲಿಯಾಗಿಸುತ್ತದೆ. "ಸೀಳುಲೋಟ" ಕತೆ ನವಿರು ಹಾಸ್ಯದಲ್ಲಿ, ಬ್ರಾಹ್ಮಣರ ರೀತಿ ರಿವಾಜುಗಳನ್ನು ಬಿಚ್ಚುತ್ತಾ ಅವರ ಬದುಕಿನ ಸುತ್ತ ನಡೆಯುವ ಘಟನೆಗಳ ಮೂಲಕ ಬಿಚ್ಚಿಕೊಳ್ಳುತ್ತದೆ.ಎರಡೂ ಕತೆಗಳನು ಓದಿದ ಮೇಲೆ ಅನಿಸುವುದು, ಮಾಧ್ವ ಬಾಹ್ಮಣರ ಬದುಕು ಬೇರೆಯವರ ಬದುಕಿಗಿಂತ ಯಾವ ರೀತಿಯಲ್ಲೂ ಭಿನ್ನವಾಗಿಲ್ಲ ಎಂಬುದು. ಅವರ ನಂಬಿಕೆಗಳು, ದೇವರುಗಳನ್ನು ಪೂಜಿಸುವ ರೀತಿ, ಮಂತ್ರ-ತಂತ್ರ ಬೇರೆಯಿರಬಹುದು. ಆದರೆ ಭಾರತದ "ಬಹುಜನ"ರ ಬಡತನ, ಕೀಳರಿಮೆ, ಚಟಗಳು, ಕಾಯಿಲೆಗಳು; ಮತ್ತು ಒಡಲಾಳದಲ್ಲಿರುವ ಭಯ, ನೋವು, ಕಾಯಿಲೆ ಎಲ್ಲ ಒಂದೇ. ಮೇಲ್ಜಾತಿಯೆಂದು ಕರೆದು ಬ್ರಾಹ್ಮಣರನ್ನು ಬೇರೇ ಗೃಹಗಳ ಜನರೆಂದು, ದುಡ್ಡಿಗೆ ಯಾವತ್ತೂ ಕೊರತೆಯಿರದವರೆಂದು, ಓದಿಗೆ ತುಂಬ ಪ್ರಾಮುಖ್ಯತೆ ಕೊಡುತ್ತಾರೆ ಎಂದು ಸುಳ್ಳು ಸುಳ್ಳೇ ನಂಬಿದ "ಬಹುಜನ" ಈ ಕತೆಗಳನ್ನು ಓದಿದರೆ ಚರಿತ್ರೆಯ ಇನ್ನೊಂದು ಮಗ್ಗಲು ತೆರೆದುಕೊಳ್ಳುತ್ತದೆ. ಚರಿತ್ರೆಕಾರರು ಮಾಡದ ಕೆಲಸವನ್ನು ಈ ಎರಡು ಕತೆಗಳು ಯಾವ ಪೂರ್ವಾಗ್ರಹವಿಲ್ಲದೇ ಮಾಡಿ ಮುಗಿಸುತ್ತವೆ.

ನಾನೊಬ್ಬ ಮಾಧ್ವ ಬ್ರಾಹ್ಮಣ, ಅದಕ್ಕೇ ಹೀಗನಿಸಿರಬೇಕು ಎಂದು ನೀವೆಂದುಕೊಂಡರೆ ಅದು ನನ್ನ ತಪ್ಪಲ್ಲ. ಕಳೆದ ಮೂವತ್ತು ವರ್ಷಗಳಿಂದ ಕೆಲವು ಕರ್ಮಠ ಮಾಧ್ವ ಬಾರ್ಹ್ಮಣರ ಕುಟುಂಬಗಳನ್ನು ಹತ್ತಿರದಿಂದ ನೋಡಿದ್ದೇನೆ. ಅಡಿಗರ "ಆಗಬೋಟಿ" ಕವನದಂತೆ ಒಂದು ಕಡೆ ಇವರ ಬದುಕು ಪಶ್ಚಿಮದ ಝಂಝಾವಾತದಿಂದ ಅಲುಗಾಡುತ್ತಿದೆ; ಇನ್ನೊಂದು ಕಡೆ ಸಮಾಜದಿಂದ, ಸರಕಾರದಿಂದ "ಮೇಲ್ಜಾತಿಯವರು" ಎಂಬ ಹಣೆಪಟ್ಟಿಯಿಂದಾಗಿ ತುಳಿಸಿಕೊಂಡು ನಲುಗುತ್ತಿದೆ; ಮುಗದೊಂದು ಕಡೆ ಇತ್ತ ಹಳ್ಳಿಯೂ ಅಲ್ಲದ ಸಿಟಿಯೂ ಅಲ್ಲದ ಊರುಗಳಲ್ಲಿ ಬಡತನದಲ್ಲಿ ಹರಿನಾಮ ಜಪಿಸುತ್ತಿದ್ದಾರೆ, ರಾಘವೇಂದ್ರಾ ಎಂದು ಬಾಯ್ಬಿಡುತ್ತಿದ್ದಾರೆ.

(ಚಿತ್ರಗಳು ಹಿಂದೂ ಮತ್ತು ಅವಧಿಯಿಂದ)

7 comments:

 1. This comment has been removed by a blog administrator.

  ReplyDelete
 2. ಪ್ರಿಯ ಕೇಶವ ಕುಲಕರ್ಣಿಯವರೇ,

  ನಮಸ್ಕಾರ. ಹೇಗಿದ್ದೀರಿ?

  ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

  ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

  ಡೇಟು: ೧೬ ಮಾರ್ಚ್ ೨೦೦೮
  ಟೈಮು: ಇಳಿಸಂಜೆ ನಾಲ್ಕು
  ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

  ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

  ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

  ಅಲ್ಲಿ ಸಿಗೋಣ,
  ಇಂತಿ,

  - ಅಮರ

  ReplyDelete
 3. ನಿಜ ಕೇಶವ್,
  ಎರಡೂ ಉತ್ತಮ ಕಥೆಗಳು...
  ತಬ್ಬಲಿಗಳು ಕಥೆಯ೦ತೂ ಈಗಲೂ ನನ್ನನ್ನ ಕಾಡುತ್ತಲೇ ಇದೆ.

  ReplyDelete
 4. ಸುನಾಥ,

  ಪ್ರತಿಕ್ರಿಯೆಗೆ ಧನ್ಯವಾದಗಳು.

  ಕೇಶವ

  ReplyDelete
 5. This comment has been removed by the author.

  ReplyDelete
 6. ನಾನು ಖಾಸನೀಸರ ತಬ್ಬಲಿಗಳನ್ನು ಓದಿದ್ದೆನೆ, "ಸೀಳುನೋಟ" ಇನ್ನೂ ಓದಿಲ್ಲ. ನಿಮ್ಮ ಮಾತು ನಿಜ ಅವು ಮಾಧ್ವರ ಬದುಕನ್ನ ಬಿಂಬಿಸುತ್ತೆ ಅನ್ನೊದು.... ಹಾಗೆ ಎಸ್ ಎಲ್ ಭೈರಪ್ಪನವರ "ಗೃಹಭಂಗ" ಕೂಡ ಇತ್ತ ಬೆಳಕು ಚಲ್ಲುತೆ ಅನ್ನಿಸುತ್ತೆ.
  -ಅಮರ

  ReplyDelete
 7. ಅಮರ್,

  ಸೀಳುನೋಟದ ಲಿಂಕ್ ಈ ಬ್ಲಾಗ್ ಲೇಖನದಲ್ಲಿ ಕೊಟ್ಟಿದ್ದೇನೆ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೌದು, ಗೃಹಭಂಗ ಕೂಡ ಈ ಪಟ್ಟಿಗೆ ಸೇರುತ್ತದೆ.

  ಕೇಶವ

  ReplyDelete