Saturday, March 29, 2008

ಹರವಬೇಡ ಕೂದಲು

ಇದು ನಾನು ಬರೆದ ಶಾಯ್ರಿ ಅಲ್ಲ, ನನ್ನ ತಂದೆ ಬರೆದದ್ದು. ಅವರ ೭೦ನೇ ವರ್ಷದ ನೆನಪಿನಲ್ಲಿ ಅವರು ಆಗಾಗ ಬರೆದ ಸಾಲುಗಳನ್ನು ಜೋಡಿಸಿ ನನ್ನ ಅಣ್ಣ ಪುಸ್ತಕ ಮಾಡಿಸುತ್ತಿದ್ದಾನೆ. ಅದರಲ್ಲಿನ ಒಂದು ಶಾಯ್ರಿ ಇಲ್ಲಿದೆ, ನನಗೆ ಇಷ್ಟವಾಯಿತು.

ಹೀಗೆ ಹರವ ಬೇಡ ನಿನ್ನ ಕೇಶರಾಶಿ
ನಾಚಿ ರಾತ್ರಿ ಎಲ್ಲಿಗೆ ಹೋಗಬೇಕು?

ನಾನು ಯೋಚಿಸಿದೆ ಪಡ್ಡೆಹುಡುಗರ ಸ್ಥಿತಿ ಏನಾಗಬೇಕು
ಒಂದು ವೇಳೆ ನೀನು ಹೆರಳನ್ನು ಸಡಿಲಿಸಿದರೆ


ಯಾರಾದರೂ ಚಂದ್ರ ಉದಯಿಸುವ ರೀತಿ ಕೇಳಿದರೆ
ಕೇಶರಾಶಿಯನ್ನು ಮುಖದಿಂದ ಸರಿಸಿಬಿಡು

ಮುಂಜಾನೆ ಕೇಶವನ್ನು ಹೀಗೆ ಹರವಬೇಡ
ಜನರು ರಾತ್ರಿಯೆಂದು ಭ್ರಾಂತರಾದಾರು!


ನದಿಯಲ್ಲಿ ಮಿಂದು ಕೂದಲಿಗೆ ಗಂಟಾಕಿದೆ
ನನ್ನ ಮನದಲ್ಲಿ ಏನೋ ವಿಚಾರ ಬಿಚ್ಚುತ್ತಿದೆ"


8 comments:

  1. Wonderful! ಶಾಯರಿಗಳನ್ನು ಕನ್ನಡದಲ್ಲಿ ಸಹಸಾ ಓದಿರುವದಿಲ್ಲ. ಮನೋಹರವಾದ ಈ ಕನ್ನಡ ಶಾಯರಿ ಓದಿ ಖುಶಿಯಾಯ್ತು. ಉಳಿದ ಶಾಯರಿಗಳನ್ನೂ ದಯವಿಟ್ಟು ಪ್ರಕಟಿಸಿ.

    ReplyDelete
  2. ಚೆನ್ನಾಗಿದೆ. ಇನ್ನೂ ಇದ್ದರೆ ಪ್ರಕಟಿಸಿ, ಓದಲು ತಯಾರು.

    ReplyDelete
  3. ರಘು, ಸುನಾಥ್ ಮತ್ತು ಸುಪ್ತದೀಪ್ತಿ,

    ನನ್ನ ತಂದೆಯವರಿಗೆ ಖಂಡಿತ ನಿಮ್ಮ ಅಭಿಪ್ರಾಯ ತಿಳಿಸುವೆ. ಪ್ರೋತ್ಸಾಹಕ್ಕೆ ಧನ್ಯವಾದಗಳು.

    ಕೇಶವ

    ReplyDelete
  4. namskara,

    On the occasion of 8th year celebration of Kannada saahithya. com we are arranging one day seminar at Christ college.

    As seats are limited interested participants are requested to register at below link.

    Please note Registration is compulsory to attend the seminar.

    If time permits informal bloggers meet will be held at the same venue after the seminar.

    For further details and registration click on below link.

    http://saadhaara.com/events/index/english

    http://saadhaara.com/events/index/kannada


    Please do come and forward the same to your like minded friends

    ReplyDelete
  5. doosra maate illa sir.nimma baraha ondankinta ondu khushi kodta ide.:)

    ReplyDelete