Monday, December 01, 2008

ಈಶ್ವರ ಅಲ್ಲಾ

ಈಶ್ವರ ಅಲ್ಲಾ ನಿನ್ನಯ ಜಗದಿ
ದ್ವೇಷವಿದೇಕೆ ಛಲವೇಕೆ?
ನಿನ್ನಯ ಮನವು ಆಲದ ಮರವು
ಮನುಜನ ಮನವು ತೃಣವೇಕೆ?

ಅಡಿಗಡಿಗೊಂದು ಗಡಿಗಳು ಏಕೆ
ನಿನ್ನದೇ ಅಲ್ಲವೇ ಜಗವೆಲ್ಲಾ?
ನೇಸರ ನಮ್ಮನು ಸುತ್ತುತಲಿದ್ದರೂ
ಕತ್ತಲಲಿ ನಮ್ಮಯ ಬದುಕೇಕೆ?
ಭೂಮಿಯ ಸೀರೆಯ ಅಂಚಿನ ತುಂಬ
ಮನುಜನ ರಕುತದ ಕಲೆ ಏಕೆ?

ಕಿವಿಗಪ್ಪಳಿಸಿವೆ ಹಾಹಾಕಾರ
ಒಲುಮೆಯ ಮಾತು ಕೇಳಿಸದು
ನುಚ್ಚುನೂರಾದವು ಸಾವಿರ ಕನಸು
ಜೋಡಿಪರಾರೂ ಕಾಣಿಸರು
ಮನದ ಬಾಗಿಲಿಗೆ ಬಿದ್ದಿದೆ ಬೀಗ
ಬೀಗಕೆ ಹಿಡಿದಿದೆ ತುಕ್ಕೇಕೆ?


(ಜಾವೇದ್ ಅಖ್ತರ್ 1947-EARTH ಚಿತ್ರಕ್ಕೆ ಬರೆದು, ಎ ಆರ್ ರೆಹಮಾನ್ ಸಂಗೀತ ನೀಡಿದ ಹಾಡಿದು. ಶ್ರೀಯವರ ಬ್ಲಾಗಿನಲ್ಲಿ (ಈಶ್ವರ್ ಅಲ್ಲಾ...) ಓದಿ ಭಾವಾನುವಾದ ಮಾಡಿದೆ)

1 comment: