Monday, December 29, 2008

ಸಿನೆಮಾ, ಸಂಗೀತ ಮತ್ತು ಸಾಹಿತ್ಯ - ೨೦೦೮

೨೦೦೮ ಮುಗಿಯುತ್ತಿದೆ ಎನ್ನುವುದು, ೨೦೦೯ ಶುರುವಾಗುತ್ತದೆ ಎನ್ನುವುದು ಎಲ್ಲ ಸಾಪೇಕ್ಷಕ ಎಂದು ಗೊತ್ತಿದ್ದರೂ, ಹಿಂತಿರುಗಿ ನೋಡಲು ಇದು ಒಂದು ನೆವ (ನೆಪ) ಅಷ್ಟೇ!

ಸಿನೆಮಾ:
ಕನ್ನಡ ಮಾತ್ತು ಹಿಂದಿಯ ಸಿಕ್ಕಾಪಟ್ಟೆ ಸಿನೆಮಾಗಳನ್ನು ನೋಡಿದ್ದು ಈ ವರ್ಷದಲ್ಲಿ. ಡಬ್ಬಾದಿಂದ (ದೋಸ್ತಾನಾ)ದಿಂದ ಹಿಡಿದು, ಹೃದಯ ತಟ್ಟುವ ಚಿತ್ರದಿಂದ ಹಾದು (ತಾರೆ ಜಮೀನ್ ಪರ್), ತಲೆಗೆ ಭರ್ಜರಿ ಕೆಲಸ ಕೊಡುವ ಸಿನೆಮಾದವರೆಗೆ (ಖೋಯಾ ಖೋಯಾ ಚಾಂದ್), ಕನಿಷ್ಟ ಏನಿಲ್ಲವೆಂದರೂ ವಾರಕ್ಕೊಂದು ಸಿನೆಮಾ ನೋಡಿದ್ದೇನೆ. ಇಂಗ್ಲೀಷ್ ಸಿನೆಮಾಗಳನ್ನು ಬೇಕೆಂದೇ ಕಡಿಮೆ ಮಾಡಿದ್ದೇನೆ. ಒಂದೆರೆಡು ತಮಿಳು (ಹೆಸರೂ ನೆನಪಿನಲ್ಲಿ ಇಟ್ಟುಕೊಳ್ಳಲು ಯೋಗ್ಯವಿಲ್ಲದವುಗಳು), ನಾಕೈದು ಇಂಗ್ಲೀಷ್ ಅವಕ್ಕೆ ಸೇರುತ್ತವೆ. ಅನುರಣನ್ ಎಂಬ ಸುಂದರ ಬೆಂಗಾಲೀ ಚಿತ್ರವೂ ಇದರಲ್ಲಿದೆ.

ದೂರದ ಇಂಗ್ಲಂಡಿನಲ್ಲಿರುವುದರಿಂದ ಕನ್ನಡ ಚಿತ್ರಗಳು ಮಿಸ್ ಆದವು, ಅದರಲ್ಲೂ "ಕಾಡ ಬೆಳದಿಂಗಳು" ಮತ್ತು ಕಾಸರವಳ್ಳಿಯ ಸಿನೆಮಾ (ಹೆಸರು ನೆನಪಾಗುತ್ತಿಲ್ಲ) ತಪ್ಪಿದವು. ಪುನೀತ್ ಮತ್ತು ಗಣೇಶನ ಎರಡು ಮೂರು ಸಿನೆಮಾ ನೋದಿದರೂ ಯಾವುದು ಯಾವ ಸಿನೆಮಾ ಎಂದು ನೆನಪಿಟ್ಟು ಕೊಳ್ಳದಷ್ಟು ಚೆನ್ನಾಗಿದ್ದವು.

ಹಳೆಯ ಚಿತ್ರಗಳ ವಿಸಿಡಿ ಮತ್ತು ಡಿವಿಡಿಯಲ್ಲಿ ಕಾಸರವಳ್ಳಿಯ "ದ್ವೀಪ", ಕಾರ್ನಾಡರ "ಒಂದಾನೊಂದು ಕಾಲದಲ್ಲಿ", ಸತ್ಯುರವರ "ಬರ" ನೋಡಿದೆ (ಅವುಗಳ ಬಗ್ಗೆ ಮುಂದೆ ಬರೆಯುತ್ತೇನೆ). ರಾಜಕುಮಾರನ "ಬಬ್ರುವಾಹನ", "ಮಯೂರ", "ಕವಿರತ್ನ ಕಾಳಿದಾಸ", "ಹೊಸಬೆಳಕು", "ಹಾಲು ಜೇನು", "ಚಲಿಸುವ ಮೋಡಗಳು" ಮತ್ತು "ಜೀವನ ಚೈತ್ರ" ಮತ್ತೆ ನೋಡಿದೆ.

ಹಿಂದಿಯಲ್ಲಿ ನಾನು ನೋಡಿದ ಅತ್ಯಂತ ಕೆಟ್ಟ ಚಿತ್ರ "ದೋಸ್ತಾನಾ". ಉಳಿದ ಕೆಟ್ಟ ಚಿತ್ರಗಳಲ್ಲಿ ನೆನಪಿನಲ್ಲಿ ಉಳಿದದ್ದು ಯಾವುವೆಂದರೆ "ರಬ್ ನೆ ಬನಾದಿ ಜೋಡಿ (ಒಂದು ಹಾಡು ತುಂಬ ಚೆನ್ನಾಗಿದೆ)", "ಸರ್ಕಾರ್ ರಾಜ್", "ರಾಕ್ ಆನ್"ಗಳು. ನೆನಪಿನಲ್ಲಿ ಉಳಿದದ್ದು, "ತಾರೆ ಜಮೀನ್ ಪರ್", ತಲೆ ತುಂಬಿದ್ದು "ಖೋಯಾ ಖೋಯಾ ಚಾಂದ್" ಮತ್ತು "ಎ ವೆಡ್‍ನೆಸ್‍ಡೆ". "ಆಮೀರ್" ಚಿಕ್ಕ ಕತೆಯನ್ನು ತುಂಬ ಏಳೆದಾಡಿದ್ದಾರೆ ಅನಿಸಿತು. ಸದ್ಯ "ಸಿಂಗ್ ಇಸ್ ಕಿಂಗ್" ನೋಡಲಿಲ್ಲ. ಸಿಲ್ಲಿ ಬ್ರೇನ್‍ಲೆಸ್ ಕಾಮಿಡಿಗಳು ನನಗೆ ಇಷ್ಟ - ೧೨೩, ಸಿ-ಕಂಪನಿ ನಕ್ಕು ನಕ್ಕು ಸಾಕಾಯಿತು.

ಇಂಗ್ಲೀಷಿನಲ್ಲಿ ಬಾಂಡ್, ಬ್ಯಾಟ್‍ಮನ್ ಮತ್ತು ಯಾವುದೇ ಕಾರ್ಟೂನ್ ಸಿನೆಮಾಗಳನ್ನು ನೋಡಲಿಲ್ಲ. ಮಾರ್ಕ್ವೇಜನ "ಲವ್ ಇನ್ ದ ಟೈಮ್ ಆಫ್ ಕಾಲೆರಾ", ಮತ್ತು ಕಾನ್ ಸಹೋದರರ "ನೋ ಕಂಟ್ರಿ ಫಾರ್ ಓಲ್ಡ್ ಮೆನ್" ನೋಡಿದೆ, ಎರಡೂ ಓಕೆ, ನಾಟ್ ಮಸ್ಟ್. "ಕೈಟ್ ರನ್ನರ್" ಪರ್ವಾಗಿಲ್ಲ. ಇನ್ಯಾವ ಇಂಗ್ಲೀಷ್ ಸಿನೆಮಾ ನೆನಪಿಟ್ಟುಕೊಳ್ಳುವಷ್ಟು ಚೆನ್ನಾಗಿಲ್ಲ.

ತಮಿಳಿನಲ್ಲಿ ಮತ್ತು ಮಲಯಾಳಂನಲ್ಲಿ ಬಂದ ಉತ್ತಮ ಸಿನೆಮಾ ನೋಡಲಾಗಿಲ್ಲ, ಲಿಸ್ಟ್ ಮಾಡಿಟ್ಟುಕೊಂಡಿದ್ದೇನೆ.

ಸಂಗೀತ:
ಹಿಂದಿ ಸಿನೆಮಾಗೆ ಹೋಲಿಸಿದರೆ ಕನ್ನಡವೇ ವಾಸಿ. ಸೋನು ನಿಗಂ ಬಹುಷಃ ಕನ್ನಡದಲ್ಲೇ ಈ ವರ್ಷ ಚೆನಾಗಿರುವ ಹಾಡುಗಳನ್ನು ಹೇಳಿದ್ದಾನೆ. "ಸೈಕೊ" ಹಾಡುಗಳು ತುಂಬ ಇಷ್ಟವಾದವು - "ನಿನ್ನ ಪೂಜೆಗೆ...", "ಬೆಳದಿಂಗಳಂತೆ.." ಮತ್ತು "ನಿನ್ನ ನಗು (ಕನ್ನಡದ ಮೊದಲ ರಾಕ್ ಸಾಂಗ್)". ಆಕ್ಸಿಡೆಂಟ್‍ನಲ್ಲಿ ಸೋನುನಿಗಂ ಹಾಡು, ಈ ಬಂಧನದಲ್ಲಿನ "ಅದೇ ಭೂಮಿ", ಸರ್ಕಸ್ಸಿನ "ಪಿಸುಗುಡಲೇ", ಗಾಳಿಪಟದ "ಮಿಂಚಾಗಿ " ಹಾಡುಗಳು ಇನ್ನೂ ನನ್ನ ಕಾರಿನಲ್ಲಿ ಹಾಡುತ್ತಲೇ ಇವೆ. ಎ ಆರ್ ರೆಹಮಾನನ "ಯುವರಾಜ್"ನ ಅಬ್ಬರದ ಆರ್ಕೆಸ್ಟ್ರಾ ಆಗಲಿ, "ಗಜನಿ" ಯ ಮೆಡಿಯಾಕರ್ ಹಾಡುಗಳಾಗಲೀ ಹೆಚ್ಚು ಕಾಲ ನಿಲ್ಲಲಿಲ್ಲ. "ಜಾನೆ ತು ಯಾ ಜಾನೆ ನಾ"ದ "ಕಭೀ ಕಭೀ" ಹಾಡು ಇನ್ನೂ ಹಾಡುತ್ತಲೇ ಇದೆ. ಉಳಿದ ಹಿಂದಿ ಹಾಡುಗಳ ಬಗ್ಗೆ ಬರೆಯದಿರುವುದೇ ಲೇಸು.

ರಷೀದ್ ಖಾನನ ಹಿಂದುಸ್ತಾನಿ ಸಂಗೀತ ಈ ವರ್ಷದ ಗುಂಗು ಹಿಡಿಸಿದೆ. ಜೋಶಿ-ಜಸರಾಜರ ನಂತರ ಬಂದ ಪ್ರಬುಧ್ಧ ಗಾಯಕ. ಕಿಶೋರಿ ಅಮೋಣಕರರನು ತುಂಬ ಕೇಳಿದೆ.

ಸೋನು ನಿಗಂನ "ರಫಿ ಮತ್ತೆ ಬಂದ"ಎನ್ನುವ ಲೈವ್ ಶೋ ನೋಡಿ ಕೇಳಿದೆ, ಬರ್‍ಮಿಂಗ್‍ಹ್ಯಾಮ್‍ನಲ್ಲಿ. ಅದೇ ರೀತಿ ಅಮ್ಜದ್ ಅಲಿ ಖಾನರ ಸರೋದ್ ಕಾರ್ಯಕ್ರಮಕ್ಕೆ ಹೋಗಿದ್ದೆ. ಜಗಜೀತ್ ಸಿಂಗ್ ಕೂಡ ಇಲ್ಲಿ ಬಂದಿದ್ದ, ೩ ಗಂಟೆ ಲೈವ್ ಗಜಲ್ ಕೇಳೆದೆ.

ಸಾಹಿತ್ಯ:
ಕಡಿಮೆ ಬರೆದಷ್ಟು ಒಳ್ಳೆಯದು. ಓದಿದ್ದು ತುಂಬ ಕಡಿಮೆ. ಇದೀಗ ವಿವೇಕ ಶಾನಭಾಗರ "ಒಂದು ಬದಿ ಕಡಲು" ಮುಗಿಸಿ ಟಿಪ್ಪಣೆ ಮಾಡುತ್ತಿದ್ದೇನೆ. "ಕೈಟ್ ರನ್ನರ್" ಓದಿದೆ. ಇನ್ನೂ ಕೆಲವು ಮರೆತು ಬಿಡಬಹುದಾದ ಕನ್ನಡ- ಇಂಗ್ಲೀಷ್ ಪುಸ್ತಕ ಓದಿದ್ದೇನೆ, ಆದರೆ ತುಂಬ ಕಡಿಮೆ. ೨೦೦೯ನಲ್ಲಿ ತುಂಬ ಓದಲು ಟಿಪ್ಪಣೆ ಮಾಡಿಕೊಂಡಿದ್ದೇನೆ.

ಹೊಸ ವರುಷದ ಶುಭಾಶಯಗಳು!

6 comments:

 1. A Wednesday ಒಂದೇ ಚೆನ್ನಾಗಿರುವ ಚಿತ್ರ.

  ReplyDelete
 2. ಚಿಕ್ಕ ಲೇಖನದಲ್ಲಿ ಚೊಕ್ಕ review ಮಾಡಿದ್ದೀರಿ...ಸಾದ್ಯವಾದರೆ ಒಂದು children of heavan ಮತ್ತು life is beautiful [ಒಂದು ಇರಾನಿ ಮತ್ತೊಂದು ಇಟಾಲಿಯನ್ ಸಿನಿಮಾ] ತಪ್ಪಿಸದೆ ನೋಡಿ...

  ReplyDelete
 3. ಸೋನು ನಿಗಮ್ ಕನ್ನಡದವ್ರೇ ಆದ ಕೆಲವು ಗಾಯಕರಿಗಿಂತ ಚೆನ್ನಾಗಿ ಸ್ವರೊಛಾರಣೆ ಮಾಡ್ತಾರ!

  ರಷಿದ ಖಾನ್ ರ ಬಗ್ಗೆ ಎರಡು ಮಾತೆ ಇಲ್ಲ - ಇತ್ತೀಚೆಗಿನ ಅತ್ಯುತ್ತಮ ಗಾಯಕ!

  There are some excellent videos of Pt. Bhimasen Joshi & Ustad Rashid Khan in u-tube -
  http://www.youtube.com/results?search_query=ustad+rashid+khan

  Though Pt. Joshi looks little beyond his prime but they got it done just in right time!

  ರಾಜೇಶ

  ReplyDelete
 4. ಸುನಾಥ,
  ಹೌದು ಒಪ್ಪುತ್ತೇನೆ.

  ಶಿವು,
  life is beautiful ಹಳೆಯ ಇಟಲಿಯನ್ ಚಿತ್ರವಲ್ಲವೇ? children of heaven ನೋಡಿಲ್ಲ, ಥ್ಯಾಂಕ್ಸ್!

  ರಾಜೇಶ,
  ಹೌದು, ಸೋನುನ ಕನ್ನಡ ಉಚ್ಛಾರ ತುಂಬ ಚೆನ್ನಾಗಿದೆ, ಅದಕ್ಕಿಂತ ಸೊಗಸು ಆತನ ಶಾರೀರ, ಅದಕ್ಕಿಂತ ಸೊಗಸು ಆತನ ಧ್ವನಿಯ ವೇರಿಯೇಷನ್ಸ್. ಕನ್ನಡದಲ್ಲಿ ಈಗ ಆತ ನನ್ನ ಅಚ್ಚುಮೆಚ್ಚಿನ ಗಾಯಕ!

  - ಕೇಶವ

  ReplyDelete
 5. ಕೇಶವ್,
  ನೀವು ಹೇಳಿದ ಕಾಸರವಳ್ಳಿ ಚಿತ್ರ ‘ಗುಲಾಬಿ ಟಾಕೀಸ್’ ಇರಬೇಕು. ನಾನೂ ನೋಡಿಲ್ಲ.
  ಶಾನಭಾಗರ ‘ಒಂದು ಬದಿ ಕಡಲು’ ನಿಮ್ಮಲ್ಲಿದ್ದರೆ ನನಗೂ ಒಮ್ಮೆ ಓದಲು ಕೊಡುತ್ತೀರಾ?
  ‘ಬಿಳಿ ಹುಲಿ’ ಬಗ್ಗೆ ಅವರಿವರು ಬರೆದಿದ್ದನ್ನು ನೋಡಿಯೇ ಸ್ವಲ್ಪ ಪೂರ್ವಾಗ್ರಹ ಬಂದುಬಿಟ್ಟಿದೆ.

  -ಚಿನ್ಮಯ

  ReplyDelete
 6. ಚಿನ್ಮಯ,
  "ಒಂದು ಬದಿ ಕಡಲು" ಖಂಡಿತ ಕೊಡುತ್ತೇನೆ. ಕಾಸರವಳ್ಳಿಯ ಚಿತ್ರ "ಗುಲಾನಿ ಟಾಕೀಜ಼್", ನೆನಪಿಸಿದ್ದಕ್ಕೆ ವಂದನೆಗಳು.
  -ಕೇಶವ

  ReplyDelete