Thursday, February 05, 2009

ಥೇಟ್ ನಿಮ್ಮಂತೆ

ಥೇಟ್ ನಿಮ್ಮಂತೆ


"ಜೀವನದ ಕ್ಷಣಕ್ಷಣವೂ ಬದುಕಬೇಕು ತೀವ್ರವಾಗಿ ನಿನ್ನ ಜೊತೆ " ಎಂದು
ತುರಿದ ಗಡ್ಡದ ಗದ್ದದಿಂದ
ನನ್ನ ಹಾಲುಗಲ್ಲ ಸವರಿದಾಗ
ಜಗತ್ತಿನಲ್ಲಿ ನನ್ನಷ್ಟು ಅದೃಷ್ಟಶಾಲಿ
ಯಾರಿದ್ದರು?

ಕನಸುಗಳ ಗುಡ್ಡೆಕಟ್ಟಿ ಡಿಗ್ರಿ ಮುಗಿಸಿ
ಬಿಜಾಪುರಕೆ ಬೈಬೈ ಹೇಳಿ
ಬೆಂಗಳೂರಿನಲ್ಲೊಂದು ಪುಟ್ಟ ಬಾಡಿಗೆ
ಮನೆಯಲೊಂದು ಪುಟ್ಟ
ಸ್ವರ್ಗಕ್ಕೆ ಮೂರುಗೇಣು
ಅನ್ನದವರಾರು?ಸೈಟು
ಮನೆ
ಆಳು
ಕಾರು

ಮಗುವಿನ ಸ್ನಾನ ಮಗುವಿನ ಸ್ಕೂಲು
ಮಗುವಿನ ಹೋಂವರ್ಕು ಮಗುವಿನ ಕರಾಟೆ
ಮಗುವಿನ ಸ್ವಿಮಿಂಗು ಮಗುವಿನ ಟೆನಿಸ್ಸು
ಮಗುವಿನ ಎಕ್ಸಾಮು ಮಗುವಿನ ವೆಕೇಷನ್ನು

ಎಲ್ಲದಕ್ಕು ನಾನೇ ಬೇಕು
ನೀನು ಮಾತ್ರ ಪತ್ತೆಗಿಲ್ಲ ನೋಡು
ಹೌಸ್ ವೈಫು ಸುಖಿ
ಅಂದವರಾರು?ಅಡಿಗೆಯವಳ ಅಡಿಗೆ ಮನೆಕೆಲಸದವಳ ಕ್ಲೀನಿಂಗು
ಮಗ ಸ್ಕೂಲಿಗೆ ಹೋದ ಮೇಲಿನ್ನೇನಿದೆ?
ಇನ್ನರ್‌ವೀಲು ಬ್ಯೂಟಿಪಾರ್ಲಲು
ಎಂಜಿರೋಡು ಬ್ರಿಗೇಡ್ ರೋಡು
ಸೆಂಟ್ರಲ್ ಗರುಡಾಮಾಲು
ವೀಕೆಂಡಲ್ಲಿ ನಾರ್ತಿಂಡಿಯನ್ ಚೆನೀಸ್ ಕಾಂಟಿನೆಂಟಲ್ ನಾಗಾರ್ಜುನ ಅಮೀಬಾ
ಹೆಜ್ಜೆಗೊಂದು ಇರುವ ಥರಾವರಿ ಪಬ್ಬುಗಳು

ಇಷ್ಟೆಲ್ಲ ಆದ್ರೂನೂ...
ಸೋಫಾದಲ್ಲಿ ಕುಸಿದು ಕೂತು
ರಿಮೋಟ್ ಹಿಡಕೊಂಡರೆ ಸಾಕು
ಶುರುವಾಗುತ್ತದೆ ವರಾತ, ಜೀವನ ನರಕ
ಅಲ್ಲವೆಂದವರಾರು?ಮಗು ಗಂಡ ಮನೆ ಅಂತಸ್ತು
ಡಯಟ್ಟು ಜಿಮ್ಮುಗಳಲ್ಲಿ
ಕಳೆದು ಹೋಗುತ್ತಿರುವ ಚಿಲುಮೆ

ಲೋನು ಫೀಸು
ಟ್ಯಾಕ್ಸು ಪ್ರಮೋಷನ್ನು
ಕಾಂಪಿಟೀಷನ್ನುಗಳಲ್ಲಿ ಉಸಿರುಕಟ್ಟಿಸುವ
ಬೆಂಗಳೂರಿನ ಬವಣೆ

ಗೊತ್ತು
ತಪ್ಪು ನಿನ್ನದೂ ಅಲ್ಲ
ತಪ್ಪು ನನ್ನದೂ ಅಲ್ಲ
ಆದರೆ ಇಬ್ಬರೂ ಸರಿ ಇಲ್ಲ

ಪ್ರತಿಬೆಳಗನ್ನು ಹೊಸಜೀವನ ಮಾಡಲು ಗೊತ್ತಿಲ್ಲದ
ಬದುಕಿನ ಹುಚ್ಚುತನಕ್ಕೆ ಒಡ್ಡಿಕೊಳ್ಳಲು ಗೊತ್ತಿಲ್ಲದ
ಮನದ ಒಂಟಿತನದಲ್ಲಿ ಹೊಸಲೋಕ ಗೊತ್ತಿಲ್ಲದ
ಎಲ್ಲ ಇದ್ದೂ ಏನೂ ಇಲ್ಲದ ಖಾಲಿತನದ

ಕತೆ ಬರೀ ನಮ್ಮದಲ್ಲ ಆನ್ನುವುದೇ
ನಮಗೆ ಸಮಾಧಾನ
ಹಳಸಿ ಹೋಗಿರುವ ಧಾರಾವಾಹಿಗಳಂತಾದರೂ ಸರಿ
ಇನ್ನೂ ಬದುಕು ಸಾಗಿಸುತ್ತಿದ್ದೇವೆ
ಥೇಟ್ ನಿಮ್ಮಂತೆ


ಟಿಪ್ಪಣೆ: ಸಾಂಗತ್ಯ ಬ್ಲಾಗಿನಲ್ಲಿ ಋತ್ವಿಕ್ ಘಟಕ್‍ರ ಜುಕ್ತಿ ಟಕೋ ಆರ್ ಗಪ್ಪೋ ಸಿನೆಮಾದ ಬಗ್ಗೆ ಚೇತನಾ ಮತ್ತು ಇತ್ತೀಚೆ ಬಿಡುಗಡೆಯಾದ "revolutionary road" ಎಂಬ ಸಿನೆಮಾದ ವಿಮರ್ಶೆ ಒಂದೇ ದಿನ ಓದಿದ್ದರ ಪರಿಣಾಮ ಈ ಕವನ.

14 comments:

 1. ಸರ್,

  ಪಕ್ಕಾ ನಿಜವಾದ ಚಿತ್ರವನ್ನೇ ನಿಮ್ಮ ಕವನದಲ್ಲಿ ಕೊಟ್ಟಿದ್ದೀರಿ...

  ಅದ್ರೂ ಅಲ್ಲಲ್ಲಿ ಖುಷಿಯ ಮಿಂಚುಗಳನ್ನರಿಸಿ ಮಾಯಾವಾಗಿಸಬೇಕೆತ್ತು ಅಂತ ನನಗನ್ನಿಸುತ್ತೆ....
  ಒಟ್ಟಾರೆ ಕವನ ಚೆನ್ನಾಗಿದೆ....

  ReplyDelete
 2. ಶಿವು,
  ಕವಿತೆ ಓದುವವರರೇ ಕಡಿಮೆಯಾಗಿರುವಾಗ, ನಿಮ್ಮ ಪ್ರತಿಕ್ರಿಯೆ, ಥ್ಯಾಂಕ್ಸ್!
  - ಕೇಶವ

  ReplyDelete
 3. "ಪ್ರತಿಬೆಳಗನ್ನು ಹೊಸಜೀವನ ಮಾಡಲು ಗೊತ್ತಿಲ್ಲದ
  ಬದುಕಿನ ಹುಚ್ಚುತನಕ್ಕೆ ಒಡ್ಡಿಕೊಳ್ಳಲು ಗೊತ್ತಿಲ್ಲದ
  ಮನದ ಒಂಟಿತನದಲ್ಲಿ ಹೊಸಲೋಕ ಗೊತ್ತಿಲ್ಲದ
  ಎಲ್ಲ ಇದ್ದೂ ಏನೂ ಇಲ್ಲದ ಖಾಲಿತನದ"

  ಆಧುನಿಕ ಜೀವನಕ್ಕೊಂದು ಉತ್ತಮ ಭಾಷ್ಯ!

  ReplyDelete
 4. ಸುನಾಥ್,
  ಭಾಷ್ಯ ಬರೆಯಲು ನಾನಾರು? ಕವಿತೆ ಓದಿದ್ದಕ್ಕೆ ಧನ್ಯವಾದಗಳು.
  - ಕೇಶವ

  ReplyDelete
 5. ``ಕಥೆ ಬರೀ ನಮ್ಮದಲ್ಲ ಅನ್ನುವುದೇ ಸಮಾಧಾನ"...
  ಈ ಕವಿತೆ ನಮ್ಮದೂ ಆಗಿದೆ.
  ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ. ಧನ್ಯವಾದ.
  ವಂದೇ,
  ಚೇತನಾ ತೀರ್ಥಹಳ್ಳಿ

  ReplyDelete
 6. Please read and participate

  http://thepinkchaddicampaign.blogspot.com/

  ReplyDelete
 7. ಸಾರ್..ತುಂಬಾನೇ ಇಷ್ಟವಾಯಿತು. ಖುಷಿಯಿಂದ ಅನುಭವಿಸಿದೆ..ಬರೆಯಲು ತಿಳಿಯದಿದ್ದರೂ..!
  -ಚಿತ್ರಾ

  ReplyDelete
 8. ಚೇತನಾ ಮತ್ತು ಚಿತ್ರಾ,
  ಥ್ಯಾಂಕ್ಸ್.
  -ಕೇಶವ

  ReplyDelete
 9. kulakarNiyavare,
  kavite manassannu tumbaa taTTitu.
  "kate baree nammadalla annuvude namage samaadhana !!"

  vaastavavannu kelave shabdagaLalli atyanta saraLavaagi barediddeeri.

  iti,
  archana

  ReplyDelete
 10. This comment has been removed by the author.

  ReplyDelete
 11. ಅರ್ಚನಾ,
  ಧನ್ಯವಾದಗಳು.
  ಕೇಶವ

  ReplyDelete
 12. ಜೀವನದ ಕಹಿ ಸತ್ಯ..ಕ(ವಿ)ತೆ ತು೦ಬಾ ಚೆನ್ನಾಗಿದೆ ಸರ್

  ReplyDelete
 13. ಪ್ರಮೋದ,
  ಧನ್ಯವಾದಗಳು.
  -ಕೇಶವ

  ReplyDelete