Friday, February 27, 2009

ನೀಲು ೨೦




ಹದಿನಾಕರ ಹರಯದಲ್ಲಿ ಪ್ರೇಮಿಸಿದ್ದ

ಹುಡುಗನನ್ನು ನನ್ನ ನಲವತ್ತೈದನೇ ವಯಸ್ಸಿಗೆ

ಮದುವೆಯಾದ ರಾತ್ರಿ

ಅವನ ಕಿವಿಯಲ್ಲಿ ಪಿಸುಗುಟ್ಟಿದೆ

"ನೀನೇ ನನ್ನ ಮೊದಲ ಮತ್ತು ಕೊನೆಯ ಪ್ರೇಮಿ"

ಆತ ಖುಷಿಯಲ್ಲಿ ಕರಗಿಹೋದ

ನಡುವೆ ಬಂದು ಹೋದವರ ಲೆಕ್ಕ

ನಾನೂ ಹೇಳಲಿಲ್ಲ

7 comments:

  1. ಸುನಾಥ,
    ಇದು ಇಲ್ಲಿನ ನ್ಯೂಸ್ ಪೇಪರ್‍ನಲ್ಲಿ ಓದುತ್ತಿದ್ದ ಲೇಖನವೊಂದರ ಪ್ರೇರಣೆ! ನನ್ನದೇನೂ ತಪ್ಪಿಲ್ಲ :-)
    - ಕೇಶವ

    ReplyDelete
  2. ಕುಲಕರ್ಣಿ ಸರ್,

    ನಿಮ್ಮ ಚುಟುಕು ಲೇಖನ ಆಷ್ಟೇ ಚುಟುಕಾಗಿ ಕುಟುಕುತ್ತದೆ...

    ಮತ್ತೆ ನನ್ನ ಹೊಸ ನಡೆದಾಡುವ ಭೂಪಟಗಳನ್ನು ನೋಡಲು ಬರುವುದಿಲ್ಲವೇ ಸರ್...ಬೇಗ ಬನ್ನಿ...ಮನಸಾರೆ ನಗಲು...

    ReplyDelete
  3. ಶಿವು ಮತ್ತು ಸಂತೋಷ,
    ಥ್ಯಾಂಕ್ಸ್, ನಿಮ್ಮ ಪ್ರೋತ್ಸಾಹವಿರಲಿ.
    - ಕೇಶವ

    ReplyDelete