Sunday, June 28, 2009

ಇಂದು ಎಸ್.ಪಿ ಭೂಪ ರಾಗದ ಗುಂಗನ್ನು ಹಿಡಿಸಿದ್ದು

ಇವತ್ತು ಈ-ಟಿವಿಯಲ್ಲಿ ಒಂದು ಹುಡಿಗಿ "ನಾಗಮಂಡಲ"ದ ಸಂಗೀತಾ ಕಟ್ಟಿ ಹಾಡಿರುವ "ಈ ಹಸಿರು ಸಿರಿಯಲಿ ಮನಸು ನಲಿಯಲಿ ನವಿಲೇ" ಎಂಬ ಹಾಡು ಹಾಡಿದಳು.ಈ ಹಾಡಿನ ನಂತರ ಎಸ್.ಪಿ ಇದು ರಾಗ್ ಭೂಪ್ (ಭೂಪಾಲಿ ಅಂತಲೂ ಕರೆಯುತ್ತಾರೆ) ಎಂದು ರಾಗದ ಚಲನವನ್ನು ಹಾಡಿ ತೋರಿಸಿದರು. ನಂತರ, ಈ ರಾಗದಲ್ಲಿ ತುಂಬ ಚಂದದ ಹಾಡುಗಳನ್ನು ಹೊಸೆದ ಭೂಪೇನ್ ಹಜಾರಿಕಾರನ್ನು ನೆನೆಸಿಕೊಂಡಿದ್ದು ತುಂಬ ಚೆನ್ನಾಗಿತ್ತು. ಭೂಪ ರಾಗ ನಸುಕಿನ ರಾಗ, ಭೂಪೇನ್ ಆಸಾಮಿನವರು, ಭಾರತದಲ್ಲಿ ಮೊಟ್ಟಮೊದಲು ನೇಸರ ಕಾಣಿಸುವ ಪ್ರದೇಶದವರು, ಅದಕ್ಕೇ ಅವರಿಗೆ ಭೂಪ ರಾಗ ತುಂಬ ಇಷ್ಟವಿರಬಹುದೇ ಎಂದು ತಮ್ಮಲ್ಲಿಯೇ ನಕ್ಕರು. (ಆದರಿದು ನಸುಕಿನ ರಾಗವಲ್ಲ, ಸಂಜೆ ರಾಗವಂತೆ - ಕಮೆಂಟು ನೋಡಿ)  "ರುಡಾಲಿ" ಚಿತ್ರದ "ದಿಲ್ ಹುಂ ಹುಂ ಕರೇ" ಹಾಡು ಕೂಡ ಇದೇ ರಾಗದ್ದು ಎಂದು ಹೇಳಿದರು.ಭೂಪ ರಾಗ ಕೇವಲ ಐದು ಸ್ವರಗಳ ರಾಗ "ಸಾ ರೆ ಗ ಪ ಧ ಸಾ"ರಾಗದ ಏರಿಳಿತಗಳು ತುಂಬ ಇಂಪು. ರಾಗದ ಒಂದು ರಚನೆ ಇಲ್ಲಿ ಹಾರ್ಮೋನಿಯಂನಲ್ಲಿ:ಈ ರಾಗ ನಸುಕಿನ ರಾಗ ಎಂದು ಹೇಳಿದೆನಷ್ಟೇ. ರಾಗ್ ಭೂಪದ ಈ ಕೊಳಲನ್ನು ಕೇಳಿ, ನಿಜ ಅನ್ನಿಸದಿರದು.ಹಿಂದಿಯಲ್ಲಿ ಈ ರಾಗದಲ್ಲಿ ತುಂಬ ಹಾಡುಗಳಿವೆ:

ಭೂಪ ರಾಗ ಹಿಂದುಸ್ಥಾನಿ ಸಂಗೀತದಲ್ಲಿ ಬಹಳಷ್ಟು ಕಡೆ ಮೊಟ್ಟಮೊದಲು ಹೇಳಿ ಕೊಡುವ ರಾಗ. ಈ ಸಿನೆಮಾ ಹಾಡನ್ನು ಹಿಂದುಸ್ಥಾನಿ ಪಾಠಮಾಡುವವರೂ ಹೇಳಿಕೊಡುತ್ತಾರೆ. ಲತಾ ಮಂಗೇಶ್ಕರ್ ಹಾಡಿದ ಈ ಹಳೆಯ ಹಾಡು ಇನ್ನೂ ಸಂಗೀತ ಕಲಿಯುವವರ ಬಾಯಲ್ಲಿ ನಲಿದಾಡುತ್ತದೆ, "ಜ್ಯೋತಿ ಕಲಶ ಛಲಕೆ"ಹೆಣ್ಣು ನೋಡಲು ಬಂದಾಗ, ಇದೇ ರಾಗದಲ್ಲಿ ನಮ್ಮ ಮಾಮಿ "ಯೋಗಿ ಮನೆಗೆ ಬಂದ" ಎಂದು ಹಾಡಿ ನಮ್ಮ ಮಾಮಾನ ಮನೆ ಗೆದ್ದದ್ದು ನನಗಿನ್ನೂ ಚೆನ್ನಾಗಿ ನೆನಪಿದೆ.ಹಂಸಾನಂದಿಯವರು ಟ್ವಿಟರಿನ ಮೂಲಕ ಈ ಕೆಳಗಿನ ಎರಡು ಭೂಪರಾಗದ ಹಾಡುಗಳನ್ನು ಟ್ವೀಟಿಸಿದ್ದಾರೆ, ಮತ್ತು ನನ್ನ ತಪ್ಪುಗಳನ್ನು ತಿದ್ದಿದ್ದಾರೆ.

ರೇಡಿಯೋ ಕಾಲದಲ್ಲಿ "ಅಭಿಲಾಷೆ"ಯಲ್ಲಿ ಪ್ರತಿಸಲ ಬರುತ್ತಿದ್ದ ವೈದ್ಯನಾಥನ್ ಸಂಗೀತದ "ಏಳು ಸುತ್ತಿನ ಕೋಟೆ" ಚಿತ್ರದ "ಸಂತಸ ಅರಳುವ ಸಮಯ"ಕನ್ನಡದ ಇನ್ನೊಂದು anthem ಆಗಿಹೋದ ರಾಜಕುಮಾರ ಹಾಡಿದ "ಜೇನಿನ ಹೊಳೆಯೋ" ಕೂಡ ಭೂಪರಾಗ.(ತಪ್ಪಿದ್ದಲ್ಲಿ ಸಂಗೀತ ಗೊತ್ತಿದ್ದವರು ತಿದ್ದಬೇಕು)
(ವಂದನೆಗಳು: ಯುಟ್ಯೂಬಿನಲ್ಲಿ ಈ ಸುಂದರ ಹಾಡುಗಳನ್ನು ಹಾಕಿದ ಎಲ್ಲರಿಗೂ)

Share/Save/Bookmark

11 comments:

 1. ಇದೇ ಭೂಪಾಲಿ/ಭೋಪಾಲಿ ರಾಗದ ತುಣುಕನ್ನು ನಮ್ಮ ಕನ್ನಡದ ಹುಡುಗನೊಬ್ಬ ಅದ್ಭುತವಾಗಿ ಝೀ ಸರಿಗಮ - ೧೯೯೮ ರಲ್ಲಿ ಅದ್ಭುತವಾಗಿ ಹಾಡಿದ್ದ . ಇದನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೋಹನ ರಾಗ ಎಂದು ಹೇಳುತ್ತಾರಂತೆ (ನನಗೂ ಶಾಸ್ತ್ರೀಯ ಸಂಗೀತದ ಬಗ್ಗೆ ಹೆಚ್ಚು ತಿಳಿದಿಲ್ಲ ) . ಕನ್ನಡದ ವಿಜಯ್ ಪ್ರಕಾಶ್ ಹಾಡಿದ ಕೊಂಡಿಯನ್ನು ಇಲ್ಲಿ ಕೊಡುತ್ತಿದ್ದೇನೆ .

  http://www.youtube.com/watch?v=ENZ1QLE66z0

  ಇದೇ ವಿಜಯ್ ಪ್ರಕಾಶ್ ಹಾಡಿದ ಕನಕದಾಸರ ' ಬಾರೋ ಕೃಷ್ಣಯ್ಯ '

  http://www.youtube.com/watch?v=PvTGlRUmNkE&feature=channel_page

  ReplyDelete
 2. ಈ ಪೋಸ್ಟ್ ಗೆ ಇರೋ ಕಾಮೆಂಟುಗಳನ್ನ ಈಗ ನೋಡಿದೆ; ಹ್ಮ್... ವಿಜಯ ಪ್ರಕಾಶ್ ಒಳ್ಳೇ ಹಾಡುಗರರೇ - ಆದ್ರೆ ಅವರಿಗೆ ಹಾಡೋಕೆ ಕೇಳಿದ್ದು ಭೂಪಾಲಿ, ಆದ್ರೆ ಅವರು ಹಾಡಿದ್ದು ಶುದ್ಧಕಲ್ಯಾಣ್! ಅವರು ಹಾಡಿರೋ ತಿಲ್ಲಾನವೂ ಮೋಹನಕಲ್ಯಾಣಿಯೇ! ಸ್ವರಗಳನ್ನ ಹಾಕಿರೋದು ಮೋಹನ ಆದ್ರೂ, ಅದು ಸರೀ ಕಾಣ್ತಿಲ್ಲ ನನಗೆ.

  ReplyDelete
 3. ಕೇಶವ ಕುಲಕರ್ಣಿ ಅವರೆ ನಿಮ್ಮ ಬ್ಲಾಗೆ ಗೆ ಮೊದಲ ಭೇಟಿ ನೀಡುತ್ತಿರುವೆ, ಗೀತೆಗಳ ವಿಶ್ಲೇಷಣೆ ಚೆನ್ನಾಗಿದೆ ನನಗೆ ಈ ರಾಗ ಅಷ್ಟು ತಿಳಿಯುವುದಿಲ್ಲ ಆದರೆ ಒಂದು ವಿಶೇಷ ಇದೆ ಅದೆಂದರೆ " ಜ್ಯೋತಿ ಕಲಶ ಛಲಕೆ..." ಇದು ಸುಧೀರ ಫಡಕೆ ಕಂಪೋಸಿಶನ್
  ಹಾಗೂ ಲತಾ ಹಾಗೂ ಅವರು ಕೂಡಿ ಬಹಳ ಕಮ್ಮಿ ಕೆಲಸ ಮಾಡಿದ್ದಾರೆ.. ಹಾಗೂ ಇದೇ ಧಾಟಿಯ "ಯೋಗಿ ಮನೆಗೆ ಬಂದ..."
  ನಾ ಸಣ್ಣಾವಿದ್ದಾಗ ನಮ್ಮ ಓಣಿಯಲ್ಲಿಯೇ ಇದ್ದ ಕಾಂಚನ ಜೋಶಿ ಎನ್ನೋ ಹುಡುಗಿ ಬಹಳ ಛಂದ ಹಾಡತಿದ್ಲು
  ನಿಮ್ಮ ಲೇಖ ಓದಿ ಹಳೇ ನೆನಪುಗಳು ತಾಜಾ ಆದ್ವು...
  ನಿಮಗೆ ಬಿಡುವಿದ್ದರೆ usdesai.blogspot.com ಗು ಭೇಟಿ ಕೊಡ್ರಿ

  ReplyDelete
 4. ಆಹ್- ಸುಂದರ ಹಾಡುಗಳು, ಸುಂದರ ರಾಗ, ಸುಂದರ ಬರಹವೂ..!

  ReplyDelete
 5. Bhoop is an evening Raaga. It is sung between 6 pm - 9 pm. Where as Deshkar , a Raaga of Bhilawal That, has same Arohana and Avarohana as that of Bhoop and is a morning Raaga. It is sung between 6 am - 9 am.

  In Carnatic, there is only one Raaga Mohanam matching the Arohana and Avarohana of Bhoop.

  Please correct if wrong.

  ReplyDelete
 6. Dear Praveen,

  I don't know much about Hindustani or Karnataki music. SPB on that day told that bhoop is a morning raag. I will check the details given by you, and post the comment again. Thanks for visiting my blog and putting the comment.

  Keshav

  ReplyDelete
 7. ನೀವು ಹೇಳಿದ್ದು ನಿಜ, ಭೂಪ ರಾಗ ಸಂಜೆ ರಾಗ. ಎಸ್ಪಿ ಅದನ್ನು ಮುಂಜಾವಿನ ರಾಗ ಎಂದರು. ನನ್ನ ಸಂಗೀತ ಜ್ಯಾನ ಅಷ್ಟಕಷ್ಟೇ! ಕ್ಷಮಿಸಿ.
  - ಕೇಶವ

  ReplyDelete
 8. Sir, I have just begun learning Hindustani music. I had read about Bhoopali Raag here. Thank you for replying.

  ReplyDelete
 9. Adbhutha Prayatna... Dhanyavaadagalu...

  ReplyDelete