Friday, October 02, 2009

ಗಾಂಧಿಯನ್ನು ಕೊಂದಿದ್ದು ಗೋಡ್ಸೆ ಅಲ್ಲ

ಗಾಂಧಿಯನ್ನು ಕೊಂದಿದ್ದು ಗೋಡ್ಸೆಯಲ್ಲ



ಇದ್ದ

ನಮ್ಮಜ್ಜ-ಅಜ್ಜಿಯರ
ನಮ್ಮಪ್ಪ-ಅಮ್ಮರ
ನನ್ನ-ನಿನ್ನ
ನಡುವೆ
ಇದ್ದ


ನಮ್ಮಜ್ಜ
ತನಗೆ ವಾರಸುದಾರರಿಲ್ಲವೆಂದು
ತನ್ನ ಮೂರನೇ ಹೆಂಡತಿಯಲ್ಲಿ
ನನ್ನಪ್ಪನನ್ನು ಬಿತ್ತುವ ವೇಳೆ
ಎದ್ದ



ನನ್ನಪ್ಪ
ಮೆಟ್ರಿಕ್ಯುಲೇಷನ್ನು ಮುಗಿಸಿ
ಬ್ರಿಟೀಷರ ಕೆಳಗೆ
ಮಾಮಲೆದಾರನಾಗಿ
ಸಂಬಳವೆಣಿಸುತ್ತಿರುವಾಗ
ಗೆದ್ದ


ನಾನು
ಪುಗಸಟ್ಟೆ M.B.B.S ಮುಗಿಸಿ
ದೇಶಬಿಟ್ಟು ಇಂಗ್ಲಂಡಿಗೆ
ಬಂದಾಗ
ಬಿದ್ದ


(ಈ ಹಿಂದೆ ಬರೆದ ಕವನವನ್ನು ಮತ್ತೊಮ್ಮೆ ಹಾಕುತ್ತಿದ್ದೇನೆ, ಗಾಂಧಿಯನ್ನು ನೆನೆಯತ್ತಾ)

4 comments:

  1. ತುಂಬಾ ಸೊಗಸಾದ ಕವನ....

    ಸತ್ಯವನ್ನು ಚಂದವಾಗಿ ಬಿಡಿಸಿಟ್ಟಿದ್ದೀರಿ...

    ಬಹಳ ಇಷ್ಟವಾಯಿತು...

    ನಾವೇ ಆ ತಾತನನ್ನು ಕೊಂದಿದ್ದೇವೆ...
    ಕೊಲ್ಲುತ್ತಿದ್ದೇವೆ...

    ReplyDelete
  2. ಚುಟುಕಾಗಿದ್ದರೂ ಅರ್ಥಗಳು ಅಷ್ಟೇ ತೀಕ್ಷ್ಣವಾಗಿವೆ....

    ಸತ್ಯಸಂಗತಿಯನ್ನು ಚೆನ್ನಾಗಿ ಹೇಳಿದ್ದೀರಿ...

    ReplyDelete
  3. ಗಾಂಧಿಯ ಮೇಲೆ ಹಾಗು ನಮ್ಮ ಮೇಲೆ ಉತ್ತಮ ವ್ಯಾಖ್ಯಾನ!

    ReplyDelete
  4. ಸಿಮೆಂಟು, ಶಿವು, ಸುನಾಥ,

    ನಿಮ್ಮ ಹಾರೈಕೆ ನನಗೆ ಇನ್ನಷ್ಟು ಬರೆಯಲು ಹುಮ್ಮಸ್ಸು ಕೊಡುತ್ತದೆ.

    - ಕೇಶವ

    ReplyDelete