Tuesday, October 27, 2009

ನೀಲು ೨೯


ಆಡಿದ್ದನ್ನೇ ಆಡುವ
ಏಳುವ-ಕೂಡುವ-ಮಲಗುವ
ಏಕತಾನದ ಯಾಂತ್ರಿಕ ಜಡತ್ವಕ್ಕೆ
ಮೊದಲ ನೋಟದ ಮೊದಲ ಸ್ಪರ್ಶದ
ನಾಚಿಕೆ-ಕುತೂಹಲ-ರೋಮಾಂಚನದ
ನೆನಪು ಕೂಡ
ಬಾಲಿಷವೆನಿಸುವುದು
ಬದುಕಿನ ವಿಪರ್ಯಾಸವಲ್ಲವೇ?

8 comments:

  1. ಕೇಶವ್ ಸರ್...

    ಕೆಲವೇ... ಶಬ್ಧಗಳು...
    ಭಾವಗಳ ಹಲವು ಮುಖತೋರಿಸಿ...
    ಸತ್ಯ ಬಿಚ್ಚಿಡುತ್ತವೆ....

    ಸುಂದರ ಸಾಲುಗಳಿಗೆ ನನ್ನ ನಮನಗಳು...

    ReplyDelete
  2. ಚಿಕ್ಕ ಚಿಕ್ಕ ಶಬ್ಧಗಳಲ್ಲಿ ಎಷ್ಟೋಂದು ಅರ್ಥ ಅಡಗಿವೆಯಲ್ಲಾ ಸರ್...

    ReplyDelete
  3. ಹದಿನಾರಾಣೆ ಸತ್ಯ.

    ReplyDelete
  4. ಸಿಮೆಂಟು, ಸುನಾಥ, ಶಿವು, ಗೌತಮ, ಬಸವರಾಜು,

    ನಿಮ್ಮ ಚಿಕ್ಕ ಚಿಕ್ಕ ಪ್ರತಿಕ್ರಿಯೆಗಳೇ ದೂರದಲ್ಲಿ ಕೀಲಿ ಕುಟ್ಟುತ್ತಿರುವ ನನಗೆ ಸ್ಪೂರ್ತಿ.

    - ಕೇಶವ

    ReplyDelete