Tuesday, December 29, 2009

ಇನ್ನಿಲ್ಲವಾಯಿತೇ...

(ನನ್ನ ತಮ್ಮ ಮಾಧವ ಕುಲಕರ್ಣಿ ನನ್ನ ಮಿನ್ನೋಲೆಗೆ ಕಳಿಸಿದ ಸಿ ಅಶ್ವಥ್ ಕವನಾಂಜಲಿಯನ್ನು ಇಲ್ಲಿ ಬರೆಯದೇ ಇರಲಾಗಲಿಲ್ಲ)


ಇನ್ನಿಲ್ಲವಾಯಿತೇ ಆ ದನಿ
ಸರಿಗಮದ ಅಮೃತ ಹನಿ


ಭಾವ ಕೊಳದ ತಳಕ್ಕೆ ತಳುಹಿ
ಮೌನಕ್ಕೆ ಮಾತು ಹೇಳಿಕೊಡುವ
ಭಾವತ್ರಪ್ತ ದನಿ


ಪುಸ್ತಕದಿಂದ ಮಸ್ತಕಕ್ಕೆ ಇಳಿಯುವಹಾಗೆ
ಪ್ರತಿ ಪದಗಳಿಗೆ ಭಾವಮೂರ್ತಿ ಕೆತ್ತುವ
ಮಹಾಶಿಲ್ಪಿ ದನಿ


ಭಾವಸಮುದ್ರದ ಧುಮ್ಮಿಕ್ಕುವ ಅಲೆಗಳ ಮಹಾಪೂರ
ಗುಡುಗುಡಿಸುವ ಶಬ್ದತಾಳಗಳ ಮೇಳ


ಇನ್ನು ಭಾವಕವಿಗಳ ಕವನಗಳೆಲ್ಲ ಯಾಕ?
ಆ ದನಿಯಿಲ್ಲದೇ ಪದಪುಂಜಗಳೆಲ್ಲ ಮೂಕ

(image courtesy: The Hindu)

http://kannada-nudi.blogspot.com/2006/07/opinion-c-aswath-kannada-literature.html
ನಾನು ಜುಲೈ ೨೦೦೬ರಲ್ಲಿ ಸಿ ಅಶ್ವಥ್ ಬಗ್ಗೆ ಬರೆದ ಲೇಖನ ಇಲ್ಲಿದೆ, ಅದನ್ನು ಮುಟ್ಟದೇ ಇಲ್ಲಿ ಮತ್ತೊಮ್ಮೆ ಕೊಂಡಿ ಕೊಡುತ್ತಿದ್ದೇನೆ.

7 comments:

  1. ಅಶ್ವತ್ಥ್ ಇನ್ನಿಲ್ಲವೆಂಬ ವಿಚಾರ ಕೇಳಿ ನನಗರಿವಿಲ್ಲದಂತೆ ಕಣ್ತುಂಬಿ ಬಂದವು.

    ReplyDelete
  2. This comment has been removed by a blog administrator.

    ReplyDelete
  3. ಅವರ ಅಗಲಿಕೆ ತುಂಬಲಾರದ ನೋವು
    ಅವರಿಗೆ ನಮ್ಮ ನಮನಗಳು

    ReplyDelete
  4. Very good poem and it was sad that we have such a kind of singer no more ,may his soul rest in peace.
    nataraj k r

    ReplyDelete
  5. This comment has been removed by a blog administrator.

    ReplyDelete