Tuesday, March 16, 2010

ಮತ್ತೇಕೆ ಯುಗಾದಿ ಬರುತಿದೆ?

ಯುಗ ಯುಗಾದಿ ಕಳೆದರೂ
ಮತ್ತೇಕೆ ಯುಗಾದಿ ಬರುತಿದೆ?

ಹೊಸ ವರುಷ ನಮಗೆ ಜನೆವರಿ ಒಂದಾಗಿ
ಆಗಲೇ ಇದು ಎರಡನೇ ತಲೆಮಾರು

ವಸಂತ ಮಾಸ ಯಾಕೆ ಯಾವಾಗಲೂ
ಮಾರ್ಚ್ ಯಾ ಎಪ್ರಿಲ್ ಒಂದನೇ ತಾರೀಖು
ಶುರುವಾಗಬಾರದು?
ಎನ್ನುವ ಜನಾಂಗ ನಾವು

ಹೊಂಗೆ ಹೇಗಿರುತ್ತೇಂತ ನೋಡಿಲ್ಲ
ಭೃಂಗ ಕಚ್ಚಿದ್ದು ಮಾತ್ರ ಗೊತ್ತು

ಬೇವಿನ ಮರ ಬಿಡಿ
ಜಾಲಿ ಮರಕ್ಕೂ
ಈ ನಗರಗಳಲ್ಲಿ ಜಾಗವಿಲ್ಲ
ಅಷ್ಟಕ್ಕೂ ಬೇವಿನ ಮರ ಹೂ ಬಿಟ್ಟಿದೆ ಅಂದುಕೊಳ್ಳಿ
ಅದಕ್ಕೇನಿ ವೆನಿಲಾದ ರೇಟಿದೆಯೇ?

ಮಾವಿನ ಹಣ್ಣಿಗೆ ವಸಂತ ಬರಲು
ಕಾಯಬೇಕಾಗಿಲ್ಲ
ವರ್ಷದ ಹನ್ನೆರಡೂ ತಿಂಗಳೂ
ಫ್ರೂಟಿ ಲಭ್ಯ


ನಮಗೆ ವಸಂತ ಅಂದು ಅಂದು ಕನ್ಫೂಸ್ ಮಾಡಬೇಡಿ
ಚೈತ್ರ ಅಂದರೆ ಹುಡುಗಿ ಹೆಸರು ಅಂದುಕೋತೀವಿ
ನಿಯತ್ತಾಗಿ ’ಸ್ಪ್ರಿಂಗ್’ ಎನ್ನಲು ಆಗೋದಿಲ್ಲವೇ?

ಅದೆಲ್ಲ ಬೇಂದ್ರೆ ಕಾಲವಾಯಿತು
ಈಗ ನಮಗೂ ಹೊಸ ಜನ್ಮ
ಹೊಸ ಮುಖ ಹೊಸ ತಿಕ
ಐವತ್ತರ ಮೆಡೋನಾ ಕೂಡ
ಕಾಸ್ಮೆಟಿಕ್ ಸರ್ಜರಿಯಲ್ಲಿ
ಮೂವತ್ತರ ಬೆಡಗಿ

ಒಂದು ಜನ್ಮದಲ್ಲಿ ಒಂದೆ ಬಾಲ್ಯ
ಆದರೆ ಸಾಯುವವರೆಗೂ ಹರೆಯ
ಮುದಿತನದಲ್ಲಿ ವಯಾಗ್ರ
ಸಾವಿನ ಕಟೆಕಟೆಯಲ್ಲಿ ಕೂಡ
ನಮಗೆ ಸನತ್ಕುಮಾರ
ನೆನಪಾಗುವುದಿಲ್ಲ ಬಿಡಿ

ಇಷ್ಟೆಲ್ಲ ಆದ್ರೂ
ಮತ್ತೇಕೆ ಯುಗಾದಿ ಬರುತಿದೆ?
ನಾವು ನಿನ್ನ ಮರೆತಾಗಿದೆ

13 comments:

  1. ಕೇಶವ,
    ಬೇಂದ್ರೆ ಕಾಲಕ್ಕೂ, ಈ ನಮ್ಮ ಕಾಲಕ್ಕೂ ಇರುವ ವ್ಯತ್ಯಾಸವನ್ನು ಚಾಟಿ ಏಟು ಬೀಸಿದಂತೆ ಗುರುತಿಸಿರುವಿರಿ!

    ReplyDelete
  2. ನೀವು ಬರೆದಿರುವುದು ಎಷ್ಟು ಸತ್ಯ ಅಲ್ವಾ ಸರ್?
    ಚೆನ್ನಾಗಿ ಬರೆದಿರುವಿರಿ...

    ReplyDelete
  3. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.Good Poem!

    ReplyDelete
  4. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete
  5. ಸರ್.. ತಲೆ ಬಾಗಿದೆ..
    ಮತ್ತೇನು ಹೇಳಲಾರೆ..

    ನಿಮ್ಮೊಲವಿನ
    ಸತ್ಯ.

    ReplyDelete
  6. ಸುನಾಥ, ಶಿವು, ಭಟ್ಟ, ಹೆಗಡೆ ಮತ್ತು ಪಕ್ಕದ ಮನೆ ಹುಡುಗಾ,

    ಈ ಕವನ ಮೆಚ್ಚಿದ ನಿಮ್ಮೆಲ್ಲರಿಗೂ ಈ ಪರದೇಸಿಯ ಥ್ಯಾಂಕ್ಸ್!

    - ಕೇಶವ

    ReplyDelete
  7. ಯುಗಾದಿ ಕುರಿತಂತೆ ಬೇಂದ್ರೆ ಪದ್ಯವನ್ನು ಈ ಹೊತ್ತಿನ ಕಣ್ಣಲ್ಲಿ ನೋಡಿದ ನಿಮ್ಮ ನೋಟ ಸಕಾಲಿಕ. ಪದ್ಯದಲ್ಲಾದರೂ ಚೈತ್ರ, ವಸಂತ, ಕೋಗಿಲೆಯ ಕುಹು ಕುಹು ನೋಡೋಣ ಏನಂತೀರಿ? ಹೊಸ ವರ್ಷದ ಶುಭಾಷಯಗಳು.

    ReplyDelete
  8. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಚೆನ್ನಾಗಿ ಹೇಳಿದ್ದಿರಿ
    ಉಗಾದಿಯ ಶುಭಾಶಯಗಳು

    ReplyDelete
  9. ಸತ್ಯಚರಣ, ಬೆಂಕಿಕಡ್ಡಿ ಮತ್ತು ಸಾಗರದಾಚೆಯ ಇಂಚರ ಬ್ಲಾಗಿಗರೇ,
    ನಿಮಗೆಲ್ಲ ಥ್ಯಾಂಕ್ಸ್.
    - ಕೇಶವ

    ReplyDelete