Sunday, May 09, 2010

ನೀಲು ೩೫

ಕಾವ್ಯಗಳಲ್ಲಿ ಕತೆ ಕಾದಂಬರಿಗಳಲ್ಲಿ

ಹೆಣ್ಣನ್ನು ವರ್ಣಿಸುವ

ಉಪಮಾನ ರೂಪಕ ಉತ್ಪ್ರೇಕ್ಷಗಳೆಲ್ಲ

ಬ್ರಿಗೇಡ್ ರೋಡಿನ ಸಂಜೆಹೊತ್ತಲ್ಲಿ

ತುಂಬ ಸಪ್ಪೆ ಎನಿಸಿದವು

8 comments:

  1. ತುಂಬಾ ಚೆನ್ನಾಗಿದೆ....

    ಕವಿಯೊಬ್ಬ..
    ಕನಸಲ್ಲಿ..
    ಕಂಡ
    ಕನ್ನಿಕೆ
    ಬಾಳಸಂಗಾತಿಯಾದಾಗ..
    ಕಾವ್ಯ
    ಬರೆದು
    ಅರ್ಥಮಾಡಿಕೊಂಡ..

    ReplyDelete
  2. ಕಾವ್ಯದ ಕನ್ನಿಕೆ ಬ್ರಿಗೇಡ್ ರೋಡಿನಲ್ಲಿ ವಾಸ್ತವವಾಗಿದ್ದಾಳೆ!

    ReplyDelete
  3. ನೀಲು..ಬ್ರಿಗೇಡಿನ ಬೆರಗಿಗೆ ಬೆರಗಾಗದವರು ಯಾರು..ನಮ್ಮ ಕಾಲೇಜ್ ದಿನಗಳಲ್ಲಿ ಭಾನುವಾರ ಅದರಲ್ಲೂ ಕ್ರಿಸ್-ಮಸ್ ಸಮಯದ ದಿನಗಳು ನೆನೆಪಾದವು....ನಿಮ್ಮ ಈ ಚುಟುಕದಿಂದ...

    ReplyDelete
  4. ಇಷ್ಟು ಚಿಕ್ಕ ನೀಲುವಿಗೆ ಇಷ್ಟೊಂದು ಪ್ರತಿಕ್ರಿಯೆಗಳು! ನೀಲು ಉಬ್ಬಿ ಹೋಗಿದ್ದಾಳೆ!! ಅವಳಿಗೊಂದು ಸೂಜಿ ಚುಚ್ಚಿ ಠುಸ್ ಮಾಡಿ..

    ಪ್ರತಿ ಊರಲ್ಲೂ ಬ್ರಿಗೇಡ್ ರೋಡಿನಂಥ ರೋಡೊಂದಿರುತ್ತೆ, ಅದು ಪಡ್ಡೆ ಹುಡುಗರಿಗೆ ಗೊತ್ತಿರುತ್ತೆ, ಕವಿಗಳಿಗೆ ಗೊತ್ತಿರಲ್ಲ ಅಂತಾಳೆ ನೀಲು!

    - ಕೇಶವ

    ReplyDelete