Wednesday, May 12, 2010

ಆಸೆಯೇ ದುಕ್ಕದ ಮೂಲ, ನನಗೋ ಈ ಆಸೆಯೇ ಸುಖದ ಮೂಲ!

"What is more important? To satisfy one thousand desires, or to conquer just one?" – 'ಸಂಸಾರ' ಸಿನೆಮಾದಲ್ಲಿ ಈ ಮಾತಿದೆಯಂತೆ.

'ಆಸೆಯೇ ದುಃಖದ ಮೂಲ, ಅದನ್ನು ಬಿಡಬೇಕು' ಎನ್ನುವುದು ಬುದ್ಧನ ಆಸೆ! ಆಸೆಗಳನ್ನೇ ಕೊಲ್ಲುವ ಆಸೆ! ಇದಕ್ಕಿಂದ ದೊಡ್ಡ ಆಸೆ ಉಂಟೇ ಪ್ರಪಂಚದಲ್ಲಿ?

'ವಸುಧೈವ ಕುಟುಂಬಕಮ್' ಎಂದರಂತೆ ವೈದಿಕರು. ಇಡೀ ಪ್ರಪಂಚವೇ ತನ್ನ ಮನೆ ಎಂದುಕೊಳ್ಳುವ ಆಸೆ! ಎದಕ್ಕಿಂತ ದೊಡ್ಡ ಆಸೆ ಉಂಟೇ ಪ್ರಪಂಚದಲ್ಲಿ?

ನನಗೋ ದಿನವೆಲ್ಲ ಕೂತು ಜಾಲ ಜಾಲಾಡಿಸುವಾಸೆ, ಅದೇ ವೇಳೆ ಕುವೆಂಪು ತರಹ ದಪ್ಪ ದಪ್ಪ ಪುಸ್ತಕಗಳನ್ನು ಬರೆಯುವ ಆಸೆ! ಒಂದನ್ನು ನೆಂಜಿಕೊಂಡರೆ ಇನ್ನೊಂದರ ಸಾವು. ಆದರೆ ಎರಡರಲ್ಲಿ ಒಂದನ್ನು ಮಾಡಲೂ ನನಗೆ ದಿನದಲ್ಲಿ ಸಿಗುವುದು ಬರೊಬ್ಬರಿ ಒಂದು ಗಂಟೆ :(

ಪುಸ್ತಕಗಳ ಮೇಲೆ ಪುಸ್ತಕ ಬರೆದು, ಕತೆಗಳ ಮೇಲೆ ಕತೆ ಬರೆದು, ವಾರ ವಾರವೂ ಅಂಕಣ ಬರೆದು ಓದುಗರನ್ನು ಗೋಳು ಹೊಯ್ದುಕೊಳ್ಳುವ ಒಳ್ಳೊಳ್ಳೆಯ ಲೇಖಕರ ಬರಹಗಳನ್ನು ಓದುವಾಗಲೆಲ್ಲೆ ಹೊಟ್ಟೆ ಉರಿಯುತ್ತದೆ. ನನಗೂ ಅವರಂತೆ ಬರೆಯಲು ಬರಬಾರದಿದಿತ್ತೇ? ನನಗೂ ಅವರಂತೆ ಅಷ್ಟೊಂದು ವೇಳೆ ಇರಬಾರದಿತ್ತೇ? 

ಆಸೆ, ಆಸೆಯೇ ದುಃಖದ ಮೂಲ, ಅದನ್ನು ತೊರೆಯಬೇಕು ಎಂದು ಬುದ್ಧನ ಮಾತನ್ನು ಪಾಲಿಸಿದ್ದರೆ ಈಗ ಬರೆಯುವಷ್ಟನ್ನೂ ಬರೆಯುತ್ತಿರಲಿಲ್ಲ.

ಬುದ್ಧ, ನಿನ್ನ ಮಾತು ಎಕ್ಕುಟ್ಟೋಗ! ನನ್ನ ಆಸೆ ಹೀಗೇ ಇನ್ನೂ ಬೆಳೆಯಲಿ. ಚಿಕ್ಕ ಚಿಕ್ಕ ನೀಲುವಿಗೇ ನನ್ನ ಬರಹಗಳು ಮುಗಿಯದಿರಲಿ. ದಿನದಿನವೂ ಏನಾದರೊಂದು ಅರಳುತ್ತಲಿರಲಿ. ಓದುಗರು ನರಳುತ್ತಲಿರಲಿ. ನನ್ನ ಬರಹಗಳನ್ನು ಓದಿ, ನನ್ನ ದೈತ್ಯ ಶಕ್ತಿಗೆ ಬೆಕ್ಕಸ ಬೆರಗಾಗಿ, ಈಗ ನಾನು ಹೊಟ್ಟೆ ಉರಿಸಿಕೊಳ್ಳುತ್ತಿರುವಂತೆಯೇ ತುಂಬಾ ಜನ ಹೊಟ್ಟೆ ಉರಿಸಿಕೊಳ್ಳಲಿ!

11 comments:

  1. ನಿಮ್ಮ ಆಸೆಗಳೆಲ್ಲಾ ಪೂರೈಸಲಿ ಎಂಬುದೇ ನಮ್ಮೆಲ್ಲರ ಆಸೆ!

    ReplyDelete
  2. ಎಷ್ಟೊಂದ್ ಆಸೆ ಪಡ್ತೀರಪಾ ನೀವು !

    ReplyDelete
  3. ಬುದ್ಧನಿಗೆ ಬುದ್ಧಿ ಇಲ್ಲ. ನಮ್ಮೆಲ್ಲರ ಸಾವಿರಾರು ಆಸೆಗಳು ಫಲಿಸಲಿ ಎನ್ನುವದು ನನ್ನ ಆಸೆ.

    ReplyDelete
  4. ದು:ಖ ಬೇಡವೆನ್ನುವ..ಆಸೆ ಯಾವುದಕ್ಕೆ ಮೂಲ??

    ReplyDelete
  5. ಆಸೆ..
    ಕನಸು..
    ಬದಿಕಿನ ಮೂಲ..

    ವಿರಕ್ತ...
    ಪರಿತ್ಯಕ್ತನಾಗಬೇಕೆಂಬುದೂ..
    ಕೂಡ..
    ಒಂದು ಆಸೆ.. !!

    ಒಳ್ಳೆಯ ಚಿಂತನೆ..
    ಅಭಿನಂದನೆಗಳು...

    ReplyDelete
  6. "ಆಸೆಯೇ ನಮ್ಮ ನಾಳೆಗಳಿಗೆ ಮೂಲ" ಅಂತ ನನ್ನ ಅಭಿಪ್ರಾಯ. ಈ ಆಸೆಗಳಿಂದಾನೇ ನಾವು ಸ್ಫೂರ್ಥಿಯಿಂದ ನಾಳೆಗಳನ್ನ ಬರಮಾಡಿಕೊಳ್ಳುತ್ತೇವೆ. ನಮ್ಮ ಜೀವನಕ್ಕೆ ಒಂದು ಅರ್ಥ ಇರತ್ತೆ, ಒಂದು ಗುರಿ ಬರತ್ತೆ. ಇಲ್ಲದಿದ್ದರೆ ನಮಗೂ ಕಲ್ಲು ಮಣ್ಣಿಗೂ ಏನು ವ್ಯತ್ಯಾಸ? so, ಖಂಡಿತ ಆಸೆ ಪಡಿ. ನಿಮ್ಮ ಆಸೆಗಳೆಲ್ಲಾ ಪೂರ್ಣವಾಗಲಿ ಅಂತ ಹಾರೈಸುತ್ತೇನೆ

    ಆಸೆಯೇ ನಾಳೆಗಳಿಗೆ ಮೂಲ. ದುರಾಸೆಯೇ ದುಃಖಕ್ಕೆ ಮೂಲ :)

    ReplyDelete
  7. ಆಸೆ ಬಿಟ್ಟಅವ ಕೆಟ್ಟ!
    ಬುದ್ಧನಿಗಿಲ್ಲ ಬುದ್ಧಿ ದಿಟ!
    ನಾವು ನೀವು ಆಸೆ ಬಿಡುವುದೇ ಬೇಡ.......
    ಆದರೆ ಭುದ್ಧನಿಗೆ ಅಷ್ಟೊಂದು ಬಯ್ಯಬಾರದಿತ್ತು!

    ReplyDelete
  8. ಆಸೆಯೇ ಬದುಕಿಗೆ ಮೂಲ- ಇದು ನಿಮಗೆ ಮತ್ತು ನಮಗೆ,
    ಇರಲಿ ಬಿಡಿ ಬುದ್ಧ ಬುದ್ಧಿ ಹೇಳಲು ಪಕ್ಕದ ಮನೆಗೆ!
    ಕಾಸಿದ್ದರೆ ಕೈಲಾಸ ಎಂಬುದೇ ದಿನ ಈಗ-ಇದು ಮಾನಸ ಸರೋವರದ್ದು
    ಕಾಸಿಲ್ಲದಿದ್ದರೂ ಕೈಲಾಸ -ಇದು ಶಿವನ ಪಾದದ್ದು !
    ಎಲ್ಲರಿಗೂ ಒಂದೊಂಥರಾ ಆಸೆ, ಯಾಕಾದರೂ ಆಗಬೇಕು ನಿರಾಸೆ
    ಬರೆಯಿರಿ ಬರೆಯಿರಿ ಹೊಹಲಿ ಗಾಡಿ ಮುಂದೆ

    ReplyDelete
  9. This comment has been removed by the author.

    ReplyDelete
  10. ಆಸೆ ಬಗ್ಗೆ ದಿ. ವಿ. ಜಿ ಅವರ ಒಂದು ಕಗ್ಗವನ್ನು ನಾವು ಇಲ್ಲಿ ಸ್ಮರಿಸಬಹುದು.

    ಭ್ರಾಂತಿಯೋ ಸಂಪೂರ್ಣ ಸುಖದಾಶೆ ಬಾಹ್ಯದಲಿ ।ಸಾಂತ ಲೋಕದ ಸೌಖ್ಯ, ಖಂಡಖಂಡವದು ॥
    ಸ್ವಾಂತಕೃಷಿಯಿಂ ಬ್ರಹ್ಮವೀಕ್ಷೆ ಲಭಿಸಿರ್ದೊಡೇ- ।
    ಕಾಂತ ಪೂರ್ಣಾನಂದ – ಮಂಕುತಿಮ್ಮ ॥ ೮೮೯ ॥

    “It is an illusion that one can find complete happiness in the external world. Happiness in this world always has an end. It comes in pieces (followed by pieces of grief). When one realizes the (gets the sight of) universal truth by his own efforts, then he will get a taste of complete happiness – that only he can enjoy.” – Mankutimma
    ನಿಮಗೆ ಆ "ಪೂರ್ಣಾನಂದ" ದೊರಕಲಿ ಅಂತ ಆಶಿಸುತ್ತೇನೆ.
    SuriShiva KUmar

    ReplyDelete
  11. Hello Mr. Keshav Kulkarni
    I am providing my email address and extending my hand in friendship.
    SuriShiva.kumar@gmail.com. If you like, please reply.
    With best wishes
    Yours Sincerely
    suriShiva KUmar

    ReplyDelete