Sunday, July 18, 2010

ಪ್ರತಾಪಸಿಂಹರಿಗೊಂದು ಚಿಕ್ಕ ಪತ್ರ

ಪ್ರತಾಪ ಸಿಂಹ ಅವರ ಅಂಕಣಕ್ಕೆ ಪ್ರತಿಕ್ರಿಯೆ(http://pratapsimha.com/2010/07/18/hindu-terror/)


ಪ್ರತಾಪ,

ಪ್ಯಾಲಸ್ಟೇನ್ ನಲ್ಲಿ ಮುಸ್ಲೀಮರ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ಕಂಡು ಮರುಗಿದ ಮಹಾನ್ ಚಿಂತಕ ಒಸಾಮಾ ಸೆಪ್ಟೆಂಬರ್ ೧೧ ರ ನಂತರ ಹೇಳಿದ್ದೂ ಅದನ್ನೇ, We reacted.

ನಾನೂ ಒಬ್ಬ ಹಿಂದು ಆಗಿಯೇ ಇದನ್ನೆಲ್ಲ ಹೇಳುತ್ತಿದ್ದೇನೆ, ಪ್ರತಾಪ. ಹಿಂದುಗಳು ರಿಯಾಕ್ಟ್ ಮಾಡಬೇಕು, ಆದರೆ ಬಾಂಬಿನಿಂದಲ್ಲ. ಭಾಂಬು ಸಿಡಿಸಿ, ಜನರನ್ನು ಕೊಂದರೆ, ಅವರು ಯಾವ ಧರ್ಮದವರೇ ಆಗಲಿ, ಅವರು ಟೆರರಿಸ್ಟುಗಳೇ, ಭಯೋತ್ಪಾದಕರೇ. ಇಸ್ಲಾಂ ಹೆಸರಿನಲ್ಲಿ ಜಗತ್ತಿನ ತುಂಬೆಲ್ಲೆ ಬಾಂಬು ಸಿಡಿಸಿ, ಇಡೀ ಮುಸ್ಲಿಂ ಸಮುದಾಯವನ್ನು ಸಂಶಯದ ಕಣ್ಣಿಂದ ನೋಡುವಂತೆ ಮಾಡಿರುವ ಮುಸಲ್ಮಾನ್ ಮೂಲಭೂತವಾದಿಗಳಿಗೂ ನಿಮಗೂ ಹೆಚ್ಚೇನೂ ವ್ಯತ್ಯಾಸ ನನಗೆ ಕಾಣುತ್ತಿಲ್ಲ. ನೀವು ಕೈಯಲ್ಲಿ ಲೇಖನಿ ಹಿಡಿದು ಲಕ್ಷಾಂತರ ಕನ್ನಡಿಗರ (ಹಿಂದೂ ಮತ್ತು ಮುಸ್ಲಿಂ) ಮನಸ್ಸಿನಲ್ಲಿ ಕೊಚ್ಚೆ ವಿಚಾರವನ್ನು ತುಂಬುತ್ತಿದ್ದೀರಿ, ಅವರು ಕೈಯಲ್ಲಿ ಎ.ಕೆ ೪೭ ಹಿಡಿದಿದ್ದಾರೆ ಅಷ್ಟೇ!


ನೀವೇ ಬರೆದಿರುವಂತೆ (‘ಇತ್ತೀಚೆಗೆ ಫ್ರಾನ್ಸ್, ಸ್ಪೇನ್, ಬ್ರಿಟನ್, ಜರ್ಮನಿ ಹಾಗೂ ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆ ಏನು ಹೇಳುತ್ತದೆ ಗೊತ್ತೆ? ಸರಿಸುಮಾರು 82 ಪರ್ಸೆಂಟ್ ಫ್ರಾನ್ಸ್ ಜನರು ಬುರ್ಖಾವನ್ನು ನಿಷೇಧಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಷಯದಲ್ಲಿ ಫ್ರಾನ್ಸ್‌ನ ನಂತರದ ಸ್ಥಾನದಲ್ಲಿರುವ ಜರ್ಮನಿಯ ಶೇ 71ರಷ್ಟು ಜನರು ಬುರ್ಖಾಕ್ಕೆ ನೋ ಎಂದಿದ್ದಾರೆ. ಬ್ರಿಟನ್‌ನ ಶೇ. 62ರಷ್ಟು ಹಾಗೂ ಸ್ಪೇನ್‌ನ ಶೇ. 59ರಷ್ಟು ಜನರು ಬುರ್ಖಾ ಮೇಲೆ ಬ್ಯಾನ್ ಹಾಕಬೇಕೆಂದು ಹೇಳಿದ್ದಾರೆ. ಇಷ್ಟು ಮಾತ್ರವಲ್ಲ, ಡೆನ್ಮಾರ್ಕ್ ದೇಶ ಮುಸ್ಲಿಮರನ್ನೇ ದೃಷ್ಟಿಯಲ್ಲಿಟ್ಟುಕೊಂಡು, ವಲಸೆ ಬರುವವರ ಮದುವೆ ವಯಸ್ಸನ್ನು 24ಕ್ಕೆ ನಿಗದಿ ಪಡಿಸಿದೆ. ಹಾಲೆಂಡ್ ತನ್ನ ನೆಲಕ್ಕೆ ವಲಸೆ ಬರುವವರಿಗಾಗಿ ಭಾಷೆ ಹಾಗೂ ಸಾಂಸ್ಕೃತಿಕ ಪರೀಕ್ಷೆಯನ್ನಿಟ್ಟಿದೆ. ಮಿನಾರ್‌ಗಳ (ಮುಸ್ಲಿಮರು ನಿರ್ಮಿಸುವ ಗೋಪುರ) ನಿರ್ಮಾಣದ ಮೇಲೆ ಸ್ವಿಜರ್‌ಲ್ಯಾಂಡ್ ನಿಷೇಧ ಹಾಕಿದೆ. ಬುರ್ಖಾ ನಿಷೇಧಿಸಿ ಬೆಲ್ಜಿಯಂ ಸಂಸತ್ ವಿಧೇಯಕ ಪಾಸು ಮಾಡಿದೆ. ಪೋಲೆಂಡ್ ಮತ್ತು ಆಸ್ಟ್ರಿಯಾದಲ್ಲಿ “Down with Jehad” ಎಂಬ ಭಿತ್ತಿಪತ್ರಗಳನ್ನು ಹಿಡಿದು ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆದಿದೆ. ಏಕೆ?‘) ಈ ಮೇಲ್ಕಂಡ ದೇಶದವರಾರೂ ಮುಸಲ್ಮಾನರನ್ನು ಬಾಂಬು ಸಿಡಿಸಿ ಕೊಂದಿಲ್ಲ, ಬೆಂಕಿ ಹಚ್ಚಿ ಸಾಯಿಸಿಲ್ಲ, ಪೋಲೀಸರ ಎದುರೇ ಸಹಸ್ರಾರು ಮುಸಲ್ಮಾನರನ್ನು ಕೊಚ್ಚಿ ಕೊಂದಿಲ್ಲ (ಪೋಸ್ಟ್ ಗೋಧ್ರಾ ನೆನಪಿಸಿಕೊಳ್ಳಿ), ಬದಲು ಸಂವಿಧಾನಿಕವಾಗಿ, ಕಾನೂನುಬದ್ಧವಾಗಿ ನಡೆದುಕೊಂಡಿದ್ದಾರೆ.


ಒಂದು ಕಣ್ಣು ತೆಗೆದರೆ, ಎರಡು ಕಣ್ಣು ಕಿತ್ತು ಹಾಕುವ ಮಾತಾಡುತ್ತೀರಿ, ಎರಡು ಕಣ್ಣು ಕಳೆದುಕೊಂಡವ ನಮ್ಮ ಎರಡೂ ಕಾಲು ಕತ್ತರಿಸುತ್ತಾನೆ, ನಾವು ಅವರ ಎರಡು ಕೈ ಕತ್ತರಿಸೋಣ, ನಂತರ ಅವರು ನಮ್ಮ ಹೊಟ್ತೆಗೆ ಚೂರಿ ಹಾಕಲಿ, ನಾವು ಅವರ ಹೃದಯ ಬಗೆಯೋಣ. ಸಹಸ್ರಾರು ಅಮಾಯಕರ ಚಂಡ ಮುಂಡಗಳು ಧರ್ಮದ ಹೆಸರಿನಲ್ಲಿ ರಸ್ತೆ ತುಂಬೆಲ್ಲ ಚೆಲ್ಲಲಿ. ಶಾಲೆಗೆ ಹೋದ ಮಕ್ಕಳು ಮನೆಗೆ ಹಿಂತಿರುಗಿ ಬರದಿರಲಿ. ಕೆಲಸಕ್ಕೆ ಹೋದ ಅಪ್ಪ-ಅಮ್ಮನಿಗಾಗಿ ಮನೆಯಲ್ಲಿ ಕಾಯುತ್ತ ಕೂರಲಿ ಮಕ್ಕಳು ಮತ್ತು ವೃದ್ಧರು. ಇಷ್ಟಕೆಲ್ಲ ಟೆರರಿಸಂ ಅನ್ನಲಿಕ್ಕಾಗುತ್ತದೆಯೇ? ಅದು ಬರೀ ರಿಯಾಕ್ಷನ್ ಅಷ್ಟೇ!!

9 comments:

 1. ಒಂದು ಪ್ರತಿಕ್ರಿಯೆ....(ಕ್ಷಮಿಸಿ ಅದೇ ಪದ ಬಳಸಬೇಕಾಯ್ತು....ಪದಗಳ ಕೊರತೆ ಇದೆ!)


  ಸಿಂಹವೂ ಅಲ್ಲದ...ಪ್ರತಾಪದ ಲವಲೇಶವೂ ಇಲ್ಲದ ಉಗ್ರ ಪ್ರತಾಪಿಗಳೇ...ಸರಿಯಾದ ಮಾತಿನಲ್ಲಿ ನೇರವಾಗಿ ಹೇಳಿರುವ ಮೇಲಿನ ಮಾತುಗಳನ್ನ ಸ್ವಲ್ಪ ಗಮನವಿಟ್ಟು ಓದಿ.

  ನಿಮ್ಮ ಕಟ್ಟಾ ಅಭಿಮಾನಿ ದೇವರುಗಳಿಗೆ ಬಹುಷಃ ಮೇಲಿನ ಸಾಲುಗಳು ಹೊಟ್ಟೆಕಿಚ್ಚಿನ ಕಿಡಿಗಳಾಗಿ ಕಾಣಿಸ ಬಹುದು.ಸಾಮಾಜಿಕ ಕಳಕಳಿಯನ್ನು ಬರೇ ವ್ಯಕ್ತಿಗತ ಕಾಮಾಲೆ ಕಣ್ಣಿನಲ್ಲಿ ನೋಡುವವರಿಗೆ ಹಾಗೆ ಕಂಡರೆ ಅದು ಅವರ ದೃಷ್ಟಿ ದೋಷವೇ ಹೊರತು ಕ್ರೀಡಾ ಮನೋಭಾವದಿಂದ ವಾದಿಸುವವರದ್ದಲ್ಲವಲ್ಲ.ತರ್ಕಬದ್ಧವಾಗಿ ಮಂಡಿಸುವ ವಾದವನ್ನ ಶುದ್ದ ತರ್ಕಬದ್ದವಾಗಿಯೇ ಖಂಡಿಸುವ ಹಾಗು ಒಂದುವೇಳೆ ತಮ್ಮ ಎದುರಾಳಿಯ ವಾದದಲ್ಲಿ ತಪ್ಪು ತಿಳುವಳಿಕೆ ಇದ್ದರೆ ಅದನ್ನು ತಿದ್ದುವ ನೈತಿಕತೆಯ ಕೊರತೆಯಿಂದ ನರಳುತ್ತಿರುವವರಿಗೆ ಅದು ಹಾಗೆ ಕಾಣೋದು ಸಹಜ ಕೂಡ.ತಮ್ಮ ಅನುಕೂಲದ ಪ್ರಶ್ನೆ ಎದುರಾದಾಗ ಕಾನೂನಿನ,ನಾಗರೀಕ ನಡುವಳಿಕೆಗಳ ನೆನಪು ಮಾಡಿಕೊಳ್ಳುವ ಇಂಥವರು ನಿಮ್ಮ ಅಭಿಮಾನಿಗಳಾಗಿಯೇ ಇರಲಿ.( ತರಲೆ ಮೇಕೆಯ ತಲೆ ಬಗ್ಗಿಸಿ ಹಿಂಬಾಲಿಸುವ ಕುರಿಗಳ ಹಿಂಡಿನ ನೆನಪಾಗುತ್ತಿದೆ).ಈ ನೆಲದ ಕಾನೂನಿನ ಬಗ್ಗೆ ಸಂವಿಧಾನದ ಬಗ್ಗೆ ಇನ್ನೂ ನಂಬಿಕೆ ಕಳೆದುಕೊಂಡಿರದ ನನ್ನಂತ ಕೆಲವು ಹುಚ್ಚರು ( ನಿಮ್ಮ ಅಭಿಮಾನಿಗಳೇ ಕೊಟ್ಟ ಅಭಿದಾನ ) ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಗಳಾಗಿಯೇ ಇರುತ್ತೇವೆ ಬಿಡಿ. ನಮ್ಮ ಮತದ ಸ್ವಾಭಿಮಾನವನ್ನ ಉಳಿಸಿಕೊಳ್ಳಲು ನಮಗೆ ಈ ಕಾನೂನಿನ ನೇರವಾದ ರಾಜಮಾರ್ಗವಷ್ಟೇ ಸಾಕು,ನಿಮ್ಮ ಬಾಂಬಿನ ಅಡ್ಡಬೀದಿಗಳನ್ನ ನೀವೆ ಇಟ್ಟುಕೊಳ್ಳಿ.ತಡವಾಗಿಯಾದರೂ ಗುರಿ ಮುಟ್ಟುವ ಭರವಸೆ ನಮಗಿದೆ. ಆದರೆ ಬಾಂಬುಗಳನ್ನು ಬಳಸುವ ಭಂಡತನಕ್ಕೆ ಕಂಡವರ ಮಕ್ಕಳನ್ನ ಛೂ ಬಿಡುವ ನಿಮ್ಮ ನೆರಳಾದರೂ ಗುರಿಮುಟ್ಟುವ ತಿರುಕನ ಕನಸನ್ನ ಕಾಣಲಾಗುತ್ತದೆಯೇ ಸ್ವಾಮೀ?

  ReplyDelete
 2. ಎಲ್ಲರಿಗೂ ಥ್ಯಾಂಕ್ಸ್!

  ReplyDelete
 3. Can't put it better. ಚೊಕ್ಕವಾಗಿ ಹೇಳಬೇಕಾದ್ದನ್ನು ಹೇಳಿದ್ದೀರಿ; ಕೇಳುವವರೋ!

  ReplyDelete
 4. Hindugalige hindugale dweshi annodakke ee nimma ಪ್ರತಾಪಸಿಂಹರಿಗೊಂದು ಚಿಕ್ಕ ಪತ್ರ
  saakshi. Vandusaari deshada uddagalakku kannu hayeesi. Bhayotpadane yawa mattige berooride.

  ReplyDelete
 5. ಪ್ರತಾಪ ಸಿಂಹ ಅರೆ ಬೆಂದ ಮಡಿಕೆ ಅದು ಏನೂ ಅರಿಯದು ಹಿಂದೆ ಬರೆದಂದೆ ಪಾರ್ಲಿಮೆಂಟಿನಲ್ಲಿ ಹೀಗೆ ಮಾತನಾಡಬೇಡಿ ಅದು ಕರ್ನಾಟಕ್ಕೆ ಕರ್ನಾಟಕದವರು ಅರಿವಿಲ್ಲದವರು ಎಂದಾರು.

  ReplyDelete
 6. Muni, Sep.27,2014 Saturday
  ಪ್ರತಾಪ ಸಿಂಹ ಅಕ್ಷರಗಳನ್ನು ಹೇಲುತ್ತಾನೆ, ಅಕ್ಷರ ಲೋಕದ ಭಯೋತ್ಪಾದಕ ಅವನು. ಬುಡೇನ್ ಸಾಬರ ದೊಡ್ಡಿಯಲ್ಲಿರುವ ಹಿಂದುಗಳನ್ನು ಅವನು ನೋಡಿಲ್ಲ, ತಿಮ್ಮಸಂದ್ರದಲ್ಲಿರುವ ಲಾಳ ಕಟ್ಟುವ ಸಾಬಿಗಳನ್ನು ಆನು ನೋಡಿಲ್ಲ.

  ReplyDelete