ನಾನು ಇತ್ತೀಚೆ ಏನೂ ಬರೆದೇ ಇಲ್ಲ, ಒಂದಿಷ್ಟು ನೀಲುಗಳನ್ನು ಬಿಟ್ಟು. ಜಾಸ್ತಿ ಓದುತ್ತಲೂ ಇಲ್ಲ. ಹಾಗಾಗಿ ಈ ’ನಾಕು ಸಾಲುಗಳು’. ಒಂದಕ್ಕೊಂದು ಸಂಬಂಧವಿಲ್ಲದ ನಾಕು ಸಾಲುಗಳ ನವೋದಯ ಮಾದರಿಯ ಪುಟ್ಟ ಕವನಗಳು ಇನ್ನು ಮುಂದೆ ಆಗಾಗ ಕಾಣಿಸಿಕೊಳ್ಳುತ್ತವೆ, ಬೇಸರಿಸಿಕೊಳ್ಳದೇ ಓದಿ ಟೀಕಿಸಿ! ಕೆಲವು ಗಜಲ್ ಕೇಳುತ್ತ (ಭಾವಾನುವಾದ), ಕೆಲವು ಹಾಗೇ, ಕೆಲವು ಅಕ್ಷರದ ತೀಟೆಗೆ, ಕೆಲವು ತಮಷೆಗೆ...
---------------------------------------
ಕವಿತೆ ಕೊರೆಯುತಿದೆ ಎದೆಯ
ಪದಗಳ ಹುಡುಕಾಟದಲಿ
ಕೂತಂತೆ ಮಾಡಿ ಹಾರಿ ಹೋಗಿವ ಚಿಟ್ಟೆ
ಕಾಗದದ ಮೇಲೆ ಕಾಣುವುದೇ ಇಲ್ಲ
---------------------------------------
ಹಗಲು ಆಗದೆ ಇರಲಿ ರಾತ್ರಿ ಕಳೆಯದೆ ಇರಲಿ
ಚುಕ್ಕೆ ಎಣಿಸುವ ಆಟ ಮುಗಿಯದಿರಲಿ
ಮೋಡ ಚಂದಿರನಾಟ ತಂಪು ತಿಂಗಳ ಬೇಟ
ನಿದ್ದೆ ರೆಪ್ಪೆಯ ಬಳಿಗೆ ಬಾರದಿರಲಿ
---------------------------------------
ಕೈಗಳ ಹೊಚ್ಚಲೇ ಕಾಲನು ಮುಚ್ಚಲೇ
ಎದೆಯಲಿ ಮೊಗವನು ಹೊದುಗಿಸಲೇ
ಬೆನ್ನನು ಸವರಲೇ ತಲೆಯನು ತಟ್ಟಲೇ
ಜೋ ಜೋ ಮಗುವೇ ಜೋಗುಳ ಹಾಡಲೇ
---------------------------------------
ಮುಂಗುರುಳು ಹಾರಿ ಹಾರಿ
ಗಾಳಿ ಘಂ ಎಂದಿತು
ಕಣ್ಣಂಚಿನ ಚಂಚಲತೆಗೆ
ಎದೆಯೆ ಝಲ್ ಎಂದಿತು
---------------------------------------
ಏನೆಲ್ಲ ಓದಿದರೂ ಏನೆಲ್ಲ ಕೇಳಿದರೂ
ಮನ ಮುಚ್ಚಿಕೊಂಡರೆ ಏನು ದಕ್ಕುವುದು?
ಏನೆಲ್ಲ ಕಂಡರೂ ಏಸು ಅನುಭವಿಸಿದರೂ
ಮನನವಿರದಿದ್ದರೆ ಏನು ಉಕ್ಕುವುದು?
---------------------------------------
ಕಣ್ಣ ಬಟ್ಟಲ ತುಂಬ
ನಶೆ ತುಂಬಿದ ನೋಟ
ತುಟಿಯ ಕೆಂಬೇಲಿಯಲಿ
ದಾಳಿಂಬೆ ತೋಟ
---------------------------------------
ಕೇಶವ,
ReplyDeleteಇವುಗಳಿಗೆ ಗಝಲ್ ಅನ್ನಿ, ಚೌಪದಿ ಅನ್ನಿ, ಯಾವುದೇ ಹೆಸರಿನಿಂದ ಕರೆದರೂ ಇವುಗಳಲ್ಲಿಯ ಕವಿಹೃದಯದ ಪರಿಮಳ ಓದುಗನನ್ನು ತಟ್ಟುತ್ತದೆ.
Especially,
`ತುಟಿಯ ಕೆಂಬೇಲಿಯಲಿ
ದಾಳಿಂಬೆ ತೋಟ'
ತುಂಬ ಸೊಗಸಾಗಿದೆ.
ಎಷ್ಟೋ ವರುಷಗಳ ನಂತರ ಒಂದು ಸೊಗಸಾದ ರೂಪಕವನ್ನು ಓದಿದ ಅನುಭವವಾಯಿತು!
ಕೊನೆಯವೆರಡು ತುಂಬಾ ಇಷ್ಟವಾಯಿತು........
ReplyDeleteಶ್ಯಾಮಲ
ಕೇಶವ ಅವರೇ,
ReplyDeleteನೀವೇನೋ ಟೀಕಿಸಿ ಅಂತ ಹೇಳಿದಿರಿ, ಇಷ್ಟೊಳ್ಳೆ ಚುಟುಕುಗಳನ್ನು ಟೀಕಿಸುವ ಮನಸ್ಸು ಬರ್ತಾ ಇಲ್ಲ!
ಸೂಪರ್
channagive ellla :)
ReplyDeleteಕುಲಕರ್ಣಿ ಸರ್,
ReplyDeleteತುಂಬಾ ದಿನವಾಯ್ತು ನೀವು ಬ್ಲಾಗಿಗೆ ಬರೆದು. ನಾಲ್ಕು ಪುಟ್ಟ ಸಾಲಿನ ಚೆಂದದ ಪದ್ಯಗಳು ಇಷ್ಟವಾದವು.
ಕೊನೆಯ ಎರಡು ಪ್ಯಾರಾ ತುಂಬನೇ ಇಷ್ಟವಾಯ್ತು..
ReplyDeletevery nice..
ReplyDeleteಎಲ್ಲವೂ ಇಷ್ಟವಾದವು.ಇದು ನಿಮ್ಮ ಬ್ಲಾಗಿಗೆ ನನ್ನ ಮೊದಲನೇ ಭೇಟಿ. ಎಲ್ಲವೂ ಸೊಗಸಾಗಿದೆ, ರಸವತ್ತಾಗಿವೆ ಹಾಗೂ ವಿಭಿನ್ನವಾಗಿವೆ. ಖುಷಿಯಾಯಿತು.
ReplyDeleteನಮಸ್ಕಾರಗಳೂ೦ದಿಗೆ,
ನಿಮ್ಮವ ನಾವಡ.
ಬೆನ್ನುತಟ್ಟಿ ಹುರಿದುಂಬಿಸುತ್ತಿರುವ ಎಲ್ಲರಿಗೂ ತುಂಬ ಧನ್ಯವಾದಗಳು!
ReplyDeleteಒಂದಕ್ಕಿಂತಾ ಒಂದು ಚೆಂದವಿವೆ ಮರಂದದ ಹನಿಗಳಂತೆ.
ReplyDeleteಇನ್ನು ಬರಲಿ.