Wednesday, December 15, 2010

ನೀಲು ೪೧

ಹತ್ತು ವರುಷದ ಹಿಂದೆ

ನದಿ ತಟದಲ್ಲಿ ಕೂತು

ಓದಿದ ರೋಮ್ಯಾಂಟಿಕ್ ಕವಿತೆಯನ್ನು

ಮತ್ತೊಮ್ಮೆ ಕೇಳೋಣ ಅನಿಸಿತು

ಅವನ ದನಿಯಲ್ಲೂ ನಡುಕವಿರಲಿಲ್ಲ

ನನ್ನ ರೋಮವೂ ನಿಮಿರಲಿಲ್ಲ

11 comments:

  1. ಮತ್ತೊಂದು ಇಪ್ಪತ್ತು ವರ್ಷಗಳ ನಂತರ:...
    ಹಲ್ಲಿನ ಸೆಟ್ಟನ್ನು ತರಲು ಮರೆತಿದ್ದರಿಂದ, ಕವಿತೆಯನ್ನು ಸರಿಯಾಗಿ ಓದಲೂ ಆಗಲಿಲ್ಲ;ಹಿಯರಿಂಗ ಏಡ್ ಇಲ್ಲದೆ ಸರಿಯಾಗಿ ಕೇಳಲೂ ಆಗಲಿಲ್ಲ!

    ReplyDelete
  2. kkaaladondige kaleva sambhandhada nirupane chutukinalli chennaagi mudide.

    ReplyDelete
  3. ಎಲ್ಲವೂ ಕಾಲದ ಮಹಿಮೆ!
    ಹ್ಹ ಹ್ಹ ಹ್ಹಾ.....

    ReplyDelete
  4. ಕೇಶ್ವಣ್ಣಾ ..ಹಹಹ..:-)

    ReplyDelete
  5. ಸುನಾಥ, ವ್ಹಾ, ವ್ಹಾ, ತುಂಬಾ ಚೆನ್ನಾಗಿ ಹೇಳಿದಿರಿ.

    ಮತ್ತೆ ಮೆಚ್ಚಿಕೊಂಡ ಎಲ್ಲರಿಗೂ ತುಂಬ ಥ್ಯಾಂಕ್ಸ್!

    ReplyDelete
  6. ಸತ್ಯವಲ್ಲವೇ ಸರ್,

    ReplyDelete