Monday, January 10, 2011

ಒಲವೆಂಬ ಹೊತ್ತಿಗೆ

ಬೇಂದ್ರೆಯವರ ಈ ಪುಟ್ಟ ಸರಳ ಕವನ (ಬೇಂದ್ರೆಯವರ ಬಹಳಷ್ಟು ಕವನಗಳು ಮೊದಲ ಓದಿಗೆ ದಕ್ಕುವುದಿಲ್ಲ, ಆದರೆ ಈ ಪದ್ಯ ಅಂಥದಲ್ಲ) ನನಗೆ ತುಂಬ ಇಷ್ಟ. ಕವನ ಸರಳ, ಆದರೆ ವ್ಯಾಪ್ತಿ ಅಪಾರ!

ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ!
ಹಗಲಿರುಳು ದುಡಿದರೂ, ಹಲುಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆವೆಚ್ಚ.

ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು
ನೆತ್ತರದಿ ಬರೆದುದಕೆ ಲೆಕ್ಕವಿಲ್ಲ.
ಚಿತ್ರ ಚಿತ್ರಾಕ್ಷರದ ಲಕ್ಷ ಪತ್ರಗಳುಂಟು;
ನಕ್ಷತ್ರ ಓದುತಿವೆ ಮರೆತು ಸೊಲ್ಲ.

ಏನಿಹುದೋ ಎಂತಿಹುದೋ ಸಂಸಾರಸಾರ!
ಕಂಡವರು ಯಾರದರ ಅಂತಪಾರ?
ಹೃದಯಸಂಪುಟದಲ್ಲಿ ಒಲವ-ಲೆಕ್ಕಣಿಕೆ
ಮಾಡಿ, ಬರೆಯಲೊ, ಹುಡುಗ, ನಿನ್ನ ಒಕ್ಕಣಿಕೆ.

4 comments:

  1. ಇದು ನನಗೂ ಇಷ್ಟದ ಪದ್ಯ..

    ReplyDelete
  2. ಕೇಶವ,
    ಕವನ ಸರಳವಾದರೂ ವ್ಯಾಪ್ತಿ ಅಪಾರ ಎನ್ನುವ ಹೇಳಿಕೆಯೊಂದಿಗೆ, ಈ ಕವನದ ಬಗೆಗೆ ಸಮಂಜಸ ವ್ಯಾಖ್ಯಾನ ಮಾಡಿರುವಿರಿ!

    ReplyDelete
  3. ಚೆನ್ನಾಗಿದೆ, ಶುಭಾಶಯಗಳು

    ReplyDelete
  4. ಕೇಶವ್ ಸರ್,
    ನನಗೆ ತುಂಬಾ ಇಷ್ಟವಾದ ಕವನವಿದು.ಮತ್ತೆ ಉಣಬಡಿಸಿದ್ದಕ್ಕೆ ಥ್ಯಾಂಕ್ಸ್. ಹೊಸವರ್ಷ ಹಾಗು ಸಂಕ್ರಾಂತಿಯ ಶುಭಾಶಯಗಳು.

    ReplyDelete