![]() |
| (image from: http://autoraiders.com) |
ಈ ಬ್ಯೂಟಿಫುಲ್ ಹುಡ್ಗೀರು ಬಿಎಂಟಿಸಿ ಬಸ್ಸಿದ್ದಂಗೆ
ಕಾದಿದ್ದೂ ಕಾದಿದ್ದೇ!
ಅಗೋ ಒಂದು
ಬಂತು
ನಿಂತು
ಅನ್ನುತ್ತಿರುವಾಗಲೇ
ಒಂದರ ಹಿಂದೆ ಮತ್ತೊಂದು ಮುಗದೊಂದು!
ಯಾವುದು ಫುಲ್ಲು ಯಾವುದು ಎಂಪ್ಟಿ
ಯಾವುದು ಹೋಗೋದು ಎಲ್ಲಿಲ್ಲಿಗೆ
ಟೈಮು ಬಹಳಷ್ಟಿಲ್ಲ ಡಿಸೈಡು ಮಾಡೊಕ್ಕೆ
ಒಂಚೂರು ಮಿಸ್ಟೀಕು ಆಯ್ತೋ
ಆಯ್ತು!
ಏನ್ಮಾಡೋಕಾಗುತ್ತೆ?
ಜಂಪ್ ಮಾಡಿದ್ರೆ ಕಾಲ್ ಮುರೀಬೌದು
ಫುಲ್ ಇದ್ರೆ ನಿಂತು ಕಾಲ್ ನೋಯಬೌದು
ತಪ್ಪು ಬೋರ್ಡಾಗಿದ್ರೆ ಮುಂದಿನ ಸ್ಟಾಪು ಇಳಿಬೌದು
ಖಾಲಿ ಇದ್ರೆ ನಿದ್ದೆ ಮಾಡಬೌದು
ಇಲ್ಲಾ ಕಿಟಕಿಯಿಂದ
ಮಾರುತಿಯಿಂದ ಹಿಡಿದು ಬೆಂಜ್ವರೆಗೆ
ಸಾಗುವ ನೂರಾರು ಕಾರುಗಳನ್ನು
ನೋಡುತ್ತ
ಹೊಟ್ಟೆ ಉರಿಸಿಕೊಳ್ಳಬಹುದು
(ಪ್ರೇರಣೆ: Wendy Cope ಬರೆದ 'Serious Concerns' ಸಂಕಲನದ ’Bloody men' ಕವನ)

ಕೇಶವ,
ReplyDeleteನಕ್ಕು ನಗಿಸುವ ಕವನಕ್ಕಾಗಿ ಧನ್ಯವಾದಗಳು. ಕವನದ ಧಾಟಿ ಸಹ ಈ ಬಸ್ಸುಗಳ ಥರಾನೇ ಇದೆ.
ಒಂದು ಸಲಹೆ: ‘ಸಿಕ್ಕದ್ದೇ ಶಿವಲಿಂಗ’ ಅಂದುಕೊಂಡು ಬಸ್ಸಿನಲ್ಲಿ ಜಂಪ್ ಮಾಡಿಬಿಡೋದು ಒಳ್ಳೇದು!
ಸುನಾಥ,
ReplyDeleteತುಂಬಾ ಥ್ಯಾಂಕ್ಸ್!
ಕೇಶವ
yella bus gunu board irutteri... elli reach aagbekuntaa....
ReplyDeleteಕುಲಕರ್ಣಿಯವರೆ...
ReplyDeleteನಮಗೆ ಬೇಕಾಗಿರೋ ಬಸ್ಸಲ್ಲಿ ಸೀಟು ಸಿಕ್ರೆ ಸಾಕಿತ್ತು..
ಕಾಲೇಜಿನ ದಿನಗಳು ನೆನಪಾದವು...
ಇಬ್ಬರೂ ಹೆಗಡೆಯವರಿಗೆ,
ReplyDeleteಕೊಮೆಂಟಿಸಿದ್ದಕ್ಕೆ ಥ್ಯಾಂಕ್ಸ್! :-)
ಕೇಶವ
'jump madidre..' e para thumba ishta aithu...its somehow reality
ReplyDeleteThanks Girish! I found your blog because of the comment!!
ReplyDelete- Keshav
ಕೇಶವ ಕುಲಕರ್ಣಿ ಸರ್,
ReplyDeleteತುಂಬಾ ಚೆನ್ನಾಗಿದೆ..ಓದಿ ನಗು ಬಂತು..
ಹಾಸ್ಯಭರಿತ ಕವನ, ಚೆನ್ನಾಗಿದೆ. ಅಭಿನ೦ದನೆಗಳು.
ReplyDeletePrabhamanu Nagaraja, tumbaa thanks! Sorry for the delayed reply.
ReplyDelete