ಇದು ಹೂರೆ ಲೂಇಸ್ ಬೋರ್ಹೇಸ್ (ಇಂಗ್ಲೀಷಿನಲ್ಲಿ ಬರೆಯುವುದು Jorge Luis Borges ಎಂದು ಆದರೆ ಉಚ್ಛಾರ ಮಾತ್ರ ಬೇರೆ) ಎಂಬ ಅರ್ಜಂಟೈನಾದ ಸಾಹಿತಿಯ ೧೧೨ನೇ ಹುಟ್ಟುಹಬ್ಬದ ನೆನಪಿಗೆ ಗೂಗಲ್ಲಿನ ಡೂಡಲ್ಲು ಇದು. ಆತನ ಬಗ್ಗೆ ಓದಲು ಇಲ್ಲಿ ಒತ್ತಿ: ವಿಕಿಯಲ್ಲಿ Jorge_Luis_Borges
ಆತನ ಒಂದು ಪ್ರಸಿದ್ಧ ಕವನವನ್ನು ಇಲ್ಲಿ ಇಂಗ್ಲೀಷಿನಿಂದ ಅನುವಾದಿಸಿದ್ದೇನೆ:
ಕ್ಷಣಗಳು
ನಾ ಮತ್ತೆ ಬದುಕಬಲ್ಲೆನಾದರೆ
ನನ್ನ ಯತ್ನವೆಲ್ಲ ಆಗ
ಇನ್ನೂ ಹೆಚ್ಚು ತಪ್ಪು ಮಾಡುವುದು
ಈಗಿನಷ್ಟು ಒಳ್ಳೆಯವನಾಗದಿರುವುದು
ಇನ್ನೂ ಹೆಚ್ಚು ಆರಾಮವಾಗಿರುವುದು
ಈಗಿನಕ್ಕಿಂತ ಹೆಚ್ಚು ತುಂಬಿಕೊಂಡಿರುವುದು
ನಿಜಾಂದ್ರೆ, ಕಡಿಮೆ ಗಂಭೀರನಾಗಿರುವುದು
ಹೆಚ್ಚು ಕೊಳಕಾಗಿರುವುದು
ಹೆಚ್ಚು ಓಡಾಡುವುದು
ಹೆಚ್ಚೆಚ್ಚು ಸಂಜೆಬಾನು ನೋಡುತ್ತ ಕೂರುವುದು
ಹೆಚ್ಚೆಚ್ಚು ಬೆಟ್ಟ ಗುಡ್ಡ ಹತ್ತುವುದು
ಇನ್ನೂ ಕಂಡರಿಯದ ಜಾಗಕ್ಕೆ ಹೋಗುವುದು
ತುಂಬ ಐಸ್ಕ್ರೀಮು ತಿನ್ನುವುದು
ಕಡಿಮೆ ಬೀನ್ಸು ತಿನ್ನುವುದು
ಅಸಲಿ ಸಮಸ್ಯೆಗಳನ್ನು ಜಾಸ್ತಿ, ಕಾಲ್ಪನಿಕವಾದವುಗಳನ್ನು ಕಡಿಮೆ
ಮಾಡಿಕೊಳ್ಳುವುದು
ನಾನೊಬ್ಬ ದೂರದೄಷ್ಟಿಯ ಜಾಗರೂಕ ನಾಗರಿಕ
ಬದುಕಿನ ಪ್ರತಿ ನಿಮಿಷದಲ್ಲೂ!
ಹಾಗಂತ ಬದುಕಲ್ಲಿ ನಲಿವಿನ ಕ್ಷಣಗಳ ಕಂಡಿಲ್ಲ ಎಂದೇನಿಲ್ಲ
ಮರಳಿ ಹೋಗುವೆನಾದರೆ ನನಗಿನ್ನೂ ಅಂಥ ಕ್ಷಣಗಳೇ ಬೇಕು
ನಿನಗೆ ಗೊತ್ತಿಲ್ಲದಿದ್ದರೆ ಕೇಳು - ಬದುಕು ಎಂದರೆ ಅದೇ-
’ಈಗ’ನ್ನು ಕಳೆದುಕೊಳ್ಳಬೇಡ
ನಾನೀಗ ಎಲ್ಲಿಗೆ ಹೋದರೂ
ಜ್ವರ ಮಾಪಕ ಬೇಕು
ಬಿಸಿನೀರು ಇರಬೇಕು
ಕೊಡೆ ಬೇಕು, ಗಾಳಿಕೊಡೆ ಕೂಡ
ಮತ್ತೆ ಜೀವಿಸಬಲ್ಲೆನಾದರೆ ನನ್ನದು ಬೆಳಕಿನ ಪಯಣ
ಮತ್ತೆ ಬದುಕಬಲ್ಲೆನಾದರೆ ನನ್ನದು ಬರಿಗಾಲ ದುಡಿತ
ವಸಂತನಿಂದ ಹೇಮಂತ ಬರುವವರೆಗೂ.
ಬಂಡಿ ಓಡಿಸುತ್ತೇನೆ ತುಂಬ ಸಲ
ಮೂಡಲದಲ್ಲಿ ನೇಸರನಿಗಾಗಿ ಕಾಯುತ್ತೇನೆ ತುಂಬ ಸಲ
ಮತ್ತೆ ಮಕ್ಕಳೊಡನೆ ಆಡುತ್ತೇನೆ ತುಂಬ ಹೊತ್ತು
ಮತ್ತೆ ಬದುಕನ್ನು ಇನ್ನೊಂದು ಸಲ ಬದುಕಬಲ್ಲೆನಾದರೆ...
ಆದರೆ... ನನಗೀಗ ವರ್ಷ ಎಂಬತ್ತೈದು
ಇನ್ನೆಷ್ಟು ದಿನ ನಾನು ಬದುಕಬಲ್ಲೆ?
(ಇಂಗ್ಲೀಷ್ ಅವತರಣಿಕೆ ಇಲ್ಲಿದೆ: http://www.poemhunter.com/poem/instants/)

super sir! :-)
ReplyDeleteಥ್ಯಾಂಕ್ಸ್ ಸುಶ್ರುತ!
ReplyDeleteeshtu saty allava avara kavana
ReplyDeleteinnondu baduku anta idre ella manada bhaavangalannu telibidabeku anno aase alvaa
ಕೇಶವ,
ReplyDeleteನಿಮ್ಮ ಅನುವಾದವನ್ನು ಓದಿದ ಬಳಿಕ ಹೂರೆಯವರ ಕವನವನ್ನೂ ಓದಿದೆ. ಮಸ್ತ ಕವನದ ಮಸ್ತ ಅನುವಾದ. ‘ಹಿಪ್ ಹಿಪ್ ಹೂರೆ!’ ಎಂದು ಕೂಗಬೇಕೆನ್ನಿಸಿತು. ಸಾಧ್ಯವಿದ್ದರೆ ನಾನೂ ಸಹ ಹೂರೆ ಅಂದುಕೊಂಡಂತೇ ಬದುಕಬಯಸುತ್ತೇನೆ!
ಸಾಗರದಾಚೆಯಿಂಚರ, ಥ್ಯಾಂಕ್ಸ್.
ReplyDeleteಸುನಾಥ, ತುಂಬ ಧನ್ಯವಾದಗಳು. ಮತ್ತೆ ಬದುಕಬಲ್ಲೆನಾದರೆ ಬದುಕನ್ನು ಹೊಸ ರೀತಿಯಲ್ಲಿ ಬದುಕುತ್ತೇನೆ ಎನ್ನುವುದು ಒಂದು ದೊಡ್ಡ ಭ್ರಮೆ ಇರಬಹುದೇ?
- ಕೇಶವ
ಕೇಶವ್ ಸರ್;ತುಂಬಾ ಸುಂದರ ಕವನ.ಇಷ್ಟವಾಯಿತು.ನನ್ನ ಬ್ಲಾಗಿಗೊಮ್ಮೆ ಬನ್ನಿ.
ReplyDeleteಕೃಷ್ಣಮೂರ್ತಿಯವರೇ, ನಿಮ್ಮ ಬ್ಲಾಗು ನನ್ನ ಗೂಗಲ್ ರೀಡರಿನಲ್ಲಿದೆ. ತಪ್ಪದೇ ಓದುತ್ತಿದ್ದೇನೆ. ನಿಮ್ಮ ಇತ್ತಿಚಿನ ’ಮಜ್ಜಿಗೆ ಎನಿಮಾ’ ಗೂಗಲ ಬಜ್ಜಿನಲ್ಲಿ ಓಡಾಡಿದ್ದೇ ಓಡಾಡಿದ್ದು!
ReplyDeleteಏನಕ್ಕೋ ತುಂಬಾ ದಿನಗಳ ಬಳಿಕ ಒಂದು ಒಳ್ಳೆಯ ಅನುವಾದಿತ ಕವಿತೆ ಓದಿದಂತೆನಿಸಿತು.. ಸೂಪರ್ ಆಗಿದೆ.. ಧನ್ಯವಾದಗಳು .
ReplyDeleteಏನಕ್ಕೋ ತುಂಬಾ ದಿನಗಳ ಬಳಿಕ ಒಂದು ಒಳ್ಳೆಯ ಅನುವಾದಿತ ಕವಿತೆ ಓದಿದಂತೆನಿಸಿತು.. ಸೂಪರ್ ಆಗಿದೆ.. ಧನ್ಯವಾದಗಳು .
ReplyDeleteಧನ್ಯವಾದಗಳು ಈಶ್ವರ ಭಟ್ಟರೇ!
ReplyDeleteಕುಲಕರ್ಣಿಯವರೇ ನಿಮ್ಮ ಅನುವಾದ ಸೊಗಸಾಗಿದೆ. Made my day.
ReplyDeleteThanks Manjunatha Hollegala!
ReplyDelete