Monday, January 16, 2012

ಮನ್ಯಾಗ ಯಾರೂ ಇಲ್ಲಾ

ಮನ್ಯಾಗ ಯಾರೂ ಇಲ್ಲಾ
( ಮರಾಠಿ ಕವಿ ಬರೆದ " ದೂರ ದೇಶಿ ಗೇಲಾ ಬಾಬಾ" ಕನ್ನಡ ಅವತರಣಿಕೆ - ನನ್ನ ತಮ್ಮ ಮಾಧವ ಮಾಡಿದ್ದು)

ದೂರ ದೇಶಕ್ಕ ಹೊಗ್ಯಾನ ಅಪ್ಪಾ
ನೌಕರಿಗೆ ಹೊಗ್ಯಾಳ ಅವ್ವಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ

ಗುಬ್ಬಿಯಂಥ ಜೀವಾ
ಒದ್ದ್ಯಾಡಿ ಹಾರಾಡಿ ಸುಸ್ತಾದರೂ
"ಸಾಕು , ಮಲಕೋ ಪುಟ್ಟಾ"
ಅಂತ ಹೇಳೋರೂ ಯಾರೂ ಇಲ್ಲಾ
ಮನ್ಯಾಗ ಯಾರೂ ಇಲ್ಲಾ

ಎದಕೋ ಏನೋ ಯಾರಿಗೆ ಗೊತ್ತು
ಕೊಡತಾರ ಯಾಕ ಸಾಲಿಗಿ ಸುಟ್ಟಿ
ಮಾತಾಡ್ಲಿಕ್ಕೂ ಯಾರೂ ಇಲ್ಲಾ
ನನಗ ನಾನ ಹೇಳೀನಿ ಕತಿ ಕಟ್ಟೀ
ಆಟಗಿ ಎಲ್ಲಾ ಹಚ್ಚಿಟ್ಟೀನಿ
ಆಡವರೂ ಯಾರೂ ಇಲ್ಲಾ
ಮನ್ಯಾಗ ಯಾರೂ ಇಲ್ಲಾ

ಹೊರಗಿನ ಜಗಾ ಕಿಡಿಕ್ಯಾಗಿಂದ
ಕಾಣಸ್ತದ ಭಾಳ ಛಂದ
ಬಾಗಲಾ ತಗದು ಹೊರಹೋಗಬೇಕಂದ್ರ
ನನ್ನ ಮುಷ್ಟ್ಯಾಗ ಯಾರದೂ ಬೆರಳಿಲ್ಲಾ
ಮನ್ಯಾಗ ಯಾರೂ ಇಲ್ಲಾ

ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ

7 comments:

 1. ಪಾಪದ ಪುಟ್ಟ, ಅನಿವಾರ್ಯತೆಗೆ ಹೊ೦ದಿಕೊಳ್ಳದೇ ಮಾರ್ಗವೇ ಇಲ್ಲ. ಕವನ ಚೆನ್ನಾಗಿದೆ. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಬನ್ನಿ.

  ReplyDelete
 2. ಕೇಶವ,
  ಇದು ಮನ ಕರಗಿಸುವ ಕವನ. ಆಧುನಿಕ ಜೀವನದ ಕೊರಗು ಪುಟ್ಟನ ವ್ಯಥೆಯಲ್ಲಿ ವ್ಯಕ್ತವಾಗಿದೆ. ನಿಮ್ಮ ತಮ್ಮ ಮಾಧವರು ಉತ್ತರ ಕರ್ನಾಟಕದ ಕನ್ನಡವನ್ನು ಸಮರ್ಥವಾಗಿ ಬಳಸಿದ್ದಾರೆ. ಅವರಿಗೆ ಅಭಿನಂದನೆಗಳು.

  ReplyDelete
 3. ಮರಾಟಿ ಸಮೃದ್ಧ ಸಾಹಿತ್ಯದ ನನ್ನ ಹಸಿವಿಗೆ ಈ ಕವನ ಚಿಲುಮೆಯಂತಿದೆ.

  ಕವಿಯೆಯ ಲಾಲಿತ್ಯತೆ ಮತ್ತು ಅದು ನನ್ನನ್ನು ಸೆಳೆದ ರೀತಿ ಅಮೋಘ.

  ನನ್ನ ಬ್ಲಾಗಿಗೂ ಸ್ವಾಗತ...

  ReplyDelete
 4. ತುಂಬಾ ಚೆನ್ನಾಗಿದೆ.
  ಓದಿದಾಗ ಒಂದು ಮಗುವೇ ಜ್ಞಾಪಕ ಆಗುತ್ತೆ.
  ಸ್ವರ್ಣಾ

  ReplyDelete
 5. ತುಂಬಾ ಚೆನ್ನಾಗಿದೆ. ಕಣ್ಣು ಎದರು ನಡೆಯೋ ಹಾಗೆ ಬರೆದಿದ್ದಿರಾ .

  ReplyDelete
 6. ಎಲ್ಲರಿಗೂ ಧನ್ಯವಾದಗಳು. ನನ್ನ ತಮ್ಮನಿಗೆ ತಿಳಿಸುವೆ.

  ReplyDelete