Friday, May 25, 2012

ಕೊಲೆ

ಆಗ ಭೇಟಿ ನೋಟ ಮಾತು
ಪ್ರೀತಿ. ಆತ ಪೂರ್ತಿ ನನ್ನವನಾಗಿದ್ದ
ನಾನೂ ಅಷ್ಟೇ, ಪೂರ್ತಿ.

ಮೂರನೇ ವ್ಯಕ್ತಿಯ ಆಗಮನ
ಹೆಣ್ಣು. ಮೊದಲ ಭೇಟಿಯ ಮಾತಿನ ಮಿಂಚಲ್ಲೇ
ನನ್ನ ಗೆಳತಿಯ ಬಗ್ಗೆ ಗೊತ್ತಾಗಿ ಹೋಗಿತ್ತು

ಆದರೂ ನೋಡೇ ಬಿಡೋಣ ಎಂದು
ಗೊತ್ತಿಲ್ಲದಿರುವ ಹಾಗಿದ್ದೆ
ಬೇಕು ಬೇಕೆಂದು ಮತ್ತೆ ಮತ್ತೆ ಮನೆಗೆ ಬಂದಳು
ನನ್ನ ಜೊತೆ ಹರಟೆ ಹೊಡೆಯುವ ನೆವ

ಮಧ್ಯಂತರದಲ್ಲಿ ಚಿತ್ತ ಪೂರ್ತಿ ಅಸ್ತತ್ವ
ಟಾಯ್ಲೆಟ್ಟಿನಲ್ಲಿ ಚಿಲಕ ಹಾಕಿ
ತಂಪು ಟೈಲುಗಳ ಮೇಲೆ ಸಾಂತ್ವನ

ಬೆಳಗಿನ ನಾಕಕ್ಕೇ ಎದ್ದು
ಮಂಜು ಸವಿಯುವ ನೆಪ ಮಾಡಿ
ನನ್ನೊಡನೆ ಮಾತಿಗಿಳಿದೆ
ನೊಂದ ಹೆಣ್ಣು ಇನ್ನೇನು ಮಾಡಬಲ್ಲಳು
ಶಬ್ದಗಳಲ್ಲಿ ಕವನ ಹುಡುಕುವುದನ್ನು ಬಿಟ್ಟು

ಏಳು ಗಂಟೆಗೆ ಮನೆಗೆ ಮರಳಿದೆ
ಬೆಡ್ಡಿನಲ್ಲಿ ಆರು ವರುಷದ ಮಗ ಮಲಗಿದ್ದ ನಿರುಮ್ಮಳ
ಏನೂ ಆಗದೇ ಇರುವ ತರಹ ಗೊರಕೆ ಹೊಡೆಯುತ್ತಿರುವ ಗಂಡ

ಕೊಲೆಯಾಗುವುದು
ಕೊಲೆಮಾಡುವುದು
ಎರಡೂ ಒಂದೇ!

3 comments:

  1. "ನೊಂದ ಹೆಣ್ಣು ಇನ್ನೇನು ಮಾಡಬಲ್ಲಳು
    ಶಬ್ದಗಳಲ್ಲಿ ಕವನ ಹುಡುಕುವುದನ್ನು ಬಿಟ್ಟು"
    ಅದ್ಭುತ ಕವನ. ಪಾಶ್ಚಾತ್ಯ ಜೀವನಶೈಲಿಯೊಡನೆ ಭಾರತೀಯ ಮನೋಧರ್ಮವನ್ನೂ ಸಹ ಮೈಗೂಡಿಸಿಕೊಂಡ ಕವನ!

    ReplyDelete
  2. ಭಾವನಾ ಚಿತ್ರಫಲಕ ಈ ಕವನ.

    ReplyDelete