Friday, June 22, 2012

ಮಾವು

'ಮಾವು' ಎಂದೆ ನೋಡಿ 
ಮನೆಯೆಲ್ಲ ಮನವೆಲ್ಲ 
ಕಂಪು ಬಣ್ಣ ಸ್ವಾದ ನಾರು ಗೊರಟ 
ಜೊತೆಗೆ ಭಾರತ 

ಗೆಳೆಯ, 
ಮಾವಿನ ಸಿಹಿ ಗೊತ್ತಿದ್ದೂ ಒಗರು ಗೊತ್ತಿದ್ದೂ 
’I am not missing it' ಎಂದು 
ವೈನು ಹಿಡಿದು ಕೂತಿದ್ದೇನೆ 

ನಿದ್ದೆಗೆ ಜಾರುವಾಗ, ನಿದ್ದೆಯ ಕನಸಿನಲ್ಲಿ 
ಬೆನ್ನುಹುರಿಯಲ್ಲಿ ಅಳುಕಿದಂತಾಗಿ 
ಎದೆಯೆಲ್ಲ ಹಿಂಡಿದಂತಾಗಿ 
ಹುಳಿದ್ರಾಕ್ಷಿಯ ತೇಗಿನಲ್ಲೂ 
ಮಾವಿನ ವಾಸನೆ 

ತ್ರಿಶಂಕುವಿನ ಸ್ವರ್ಗದಲ್ಲಿ 
ಮಾವು ಸಿಗುವುದಿಲ್ಲ 
ಸಿಕ್ಕರೂ ತಿಂದಂತಾಗುವುದಿಲ್ಲ 

ಅಭಿಮನ್ಯುವಿನ ಚಕ್ರವ್ಯೂಹವಿದು 
ಎಂದು ಯಾರಿಗೆ ಗೊತ್ತಿತ್ತು? 

ಮಾವನ್ನು ದಿಟ್ಟಿಸುತ್ತ ಕೂತಿದ್ದೇನೆ 
ಇಂಟರ್ನೆಟ್ಟಿನ ಮುಂದೆ 
ಇನ್ನು ಒಂದೇ ಕ್ಲಿಕ್ಕು 
ಆನ್‍ಲೈನ್ ಆರ್ಡರು 
ರತ್ನಾಗಿರಿಯಿಂದ ಸೀದಾ ಮನೆಗೆ ಆಪೂಸು!

5 comments:

  1. ಮಾವು!!ಹೆಸರು ಕೇಳಿದರೇ ಖುಷಿ ಕೊಡುತ್ತದೆ!ಅದರ ಸ್ವಾದ,ಸೊಗಸು!!!ನಿಜಕ್ಕೂ ಅದು ಹಣ್ಣುಗಳ ರಾಜನೇ ಸರಿ.ಅದರ ಎಲ್ಲಾ ಸ್ವಾದವನ್ನೂ ನಿಮ್ಮ ಕವನದಲ್ಲಿ ತುಂಬಿದ್ದೀರಿ.ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.

    ReplyDelete
    Replies
    1. ಡಾಕ್ಟ್ರೇ, ಕವನ ಓದಿ ಮೆಚ್ಚಿಕೊಂಡಿದ್ದಕ್ಕೆ ತುಂಬ ಧನ್ಯವಾದಗಳು. ನಿಮ್ಮ ಬ್ಲಾಗು ನನ್ನ ಗೂಗಲ್ ರೀಡರಿನಲ್ಲಿ ಭದ್ರವಾಗಿದೆ.

      Delete
    2. This comment has been removed by the author.

      Delete
  2. ಮಾವು ಮತ್ತು ವೈನುಗಳ ಉಲ್ಲೇಖದಿಂದ ನಮಗೂ ಹುಚ್ಚೆಬ್ಬಿಸಿದ ನಿಮಗೆ ಶರಣು.

    ReplyDelete
    Replies
    1. ತುಂಬ ಧನ್ಯವಾದಗಳು. ನೀವು ಕವಿಗಳು. ನಿಮ್ಮ ಕವಿ ಮನಸ್ಸಿಗೆ ಖುಷಿಯಾಗಿದ್ದಕ್ಕೆ ನನ್ನ ನಮನಗಳು.

      Delete