Sunday, October 28, 2012

ಕನ್ನಡದಲ್ಲಿ ಇ-ಬುಕ್ಕು

Spread Kendasampige Affiliate Buttonನನಗೂ ನನ್ನ ಹೆಂಡತಿಗೂ ವಾದ ಶುರುವಾಗುವುದು ನಾವು ಭಾರತದಿಂದ ಹೊರಡುವಾಗ, ಲಗೇಜನ್ನು ಪ್ಯಾಕ್ ಮಾಡಲು ಶುರು ಮಾಡುವಾಗ. ಪ್ರತಿ ಜನಕ್ಕೆ ೨೦-೩೦ ಕೆಜಿ ಮೇನ್ ಬ್ಯಾಗೇಜು. ಅದರಲ್ಲಿ ನನ್ನ ಹೆಂಡತಿ ತನಗೆಂದು, ನನಗೆಂದು, ಮಗನಿಗೆಂದು, ಮನೆಗೆಂದು ತೆಗೆದುಕೊಂಡ ಸಾಮಾನುಗಳಿಗೇ ಜಾಗವಿರುವುದಿಲ್ಲ, ಇನ್ನು ನಾನೊಬ್ಬನೇ ಓದುವ ನನ್ನ ಬಡಪಾಯಿ ಕನ್ನಡ ಪುಸ್ತಕಗಳಿಗೆ ಜಾಗವೆಲ್ಲಿಂದ ಸಿಗಬೇಕು? ಕನ್ನಡ ಪುಸ್ತಕಗಳನ್ನು ಬೆಲೆಯಲ್ಲಿ ಅಲ್ಲ, ತೂಕದಲ್ಲಿ ಅಳೆಯುವ ವ್ಯಕ್ತಿ ಬಹುಷಃ ನಾನೊಬ್ಬನೇ ಇರಬೇಕು. ಹಾಗೂ ಹೀಗೂ ಕಷ್ಟಪಟ್ಟು ನಾಕಾರು ಪುಸ್ತಕಗಳನ್ನು ಅಲ್ಲಿ ಇಲ್ಲಿ ತೂರಿಸಿ, ಕೆಲವೊಂದನ್ನು ಕದ್ದು ತುರುಕಿಸಿ ಇಂಗ್ಲಂಡಿಗೆ ಸ್ಮಗಲಿಂಗ್ ಮಾಡಿ ಲಗೇಜಿನಿಂದ ಕನ್ನಡ ಪುಸ್ತಕಗಳನ್ನು ತೆಗೆದು ಜೋಡಿಸಿ ಇಡುತ್ತಿದ್ದರೆ ಖುಷಿಯೋ ಖುಷಿ. ರಾತ್ರಿ ಮಗ ಮಲಗಿದ ಮೇಲೆ ರಾತ್ರಿಯ ನೀರವತೆಯಲ್ಲಿ ಕೈಲೊಂದು ಕನ್ನಡ ಪುಸ್ತಕ ಹಿಡಿದುಕೊಂಡು ಓದುತ್ತ ಕೂತರೆ ನಾಳೆಯ ದಿನ ಕೆಲಸಕ್ಕೆ ಹೋಗಲು ಬೇಗ ಏಳಬೇಕು ಎನ್ನುವು ಕೂಡ ಮರೆತು ಹೋಗಿರುತ್ತದೆ. ತಂದ ಪುಸ್ತಕಗಳು ಎರಡೇ ತಿಂಗಳಲ್ಲಿ ಮುಗಿದು ಹೋಗುತ್ತವೆ. ಮತ್ತೆದೇ ರಾತ್ರಿ, ಅದೇ ಇಬುಕ್ ರೀಡರು, ಅದೇ ಇಂಟರ್ನೆಟ್ಟು, ಅದೇ ಬೇಜಾರು!

ಮುಂದೆ ಓದಲು ಇಲ್ಲಿ ಒತ್ತಿ

No comments:

Post a Comment