Facebook has nearly killed Orkut. Google Buzz died. I have been using Google+ for a few months now.
Facebook has connected innumerable long lost friends and classmates, although various social networking sites tried to achieve the same in the past and failed. Facebook succeeded; call it a hard work, vision or luck, it succeeded. People hate to use more than one service for the same purpose. If G+ is trying is pull people out of Facebook and join G+ in bulk, they are most likely to fail miserably. I am trying to guess that this is not the intention of the G+ team.
Twitter is all about catching the news around the world in one liners. Its also about time-pass chats (whats up twitter world? etc), gossiping (Shahrukh Khan slapgate etc), pulling legs of each other, and joking at life.
G+ platform is interesting. It is trying to connect REAL people who may or may not know each other, but share common interests.
G+ is full of circles. Building your circle and posting in that circle makes more sense than posting everything in public.For example, as a radiologist, I do not want to post something related to radiology in 'public', but post it in 'radiology circle' to have a more meaningful closed communication. All my Kannada related thoughts will be posted only to 'Kannadigaru' cirlce.
But we need a large number of active people who carefully select what to talk where? What to share where?
Will G+ succeed? So far, my experience is not that good. Very few people are active on G+.
ಕಲಸುಮೇಲೋಗರ (KeKu's Blog)
ಕನ್ನಡ-English bilingual blog...
Friday, February 03, 2012
Wednesday, February 01, 2012
ಕ್ಷಮಿಸಿ
ಈಗ್ಗೆ ಸುಮಾರು ವರುಷಗಳಿಂದ ನನ್ನನ್ನು ಪ್ರೋತ್ಸಾಹಿಸಿದ ಕನ್ನಡಿಗರೇ,
ಕ್ಷಮಿಸಿ...
ಏಕೆಂದರೆ
ನನ್ನ ಬ್ಲಾಗುಗಳನ್ನೆಲ್ಲ ಜೋಡಿಸಿಬಿಡುತ್ತಿದ್ದೇನೆ.
ಅಂದರೆ ಇನ್ನು ಮೇಲೆ ನನ್ನ ಇಂಗ್ಲೀಷ್ ಬರಹಗಳೂ ಈ ಬ್ಲಾಗಿನಲ್ಲೇ ಬರಲಿವೆ.
ಆದ್ದರಿಂದ ಕನ್ನಡ ಬ್ಲಾಗಿನಲ್ಲು ಇಂಗ್ಲೀಷು ಸೇರಲಿದೆ, ಜೊತೆಗೆ ನನ್ನ so called ಫೋಟೋಗ್ರಾಫಿಗಳೂ!
ಅದಕ್ಕೆಂದೇ ಬ್ಲಾಗಿನ ಹೆಸರನ್ನು ಬದಲಿಸಿದ್ದೇನೆ, ಆದರೆ ಬ್ಲಾಗಿನ URL ಅನ್ನು ಬದಲಿಸಿಲ್ಲ!
ಚದುರಿ ಹೋಗಿದ್ದ ನನ್ನ ಮೂರೂ ಬ್ಲಾಗುಗಳನ್ನು ಸೇರಿಸಿ, ಇನ್ನು ಮುಂದೆ ಇದೊಂದೇ ಬ್ಲಾಗಿನಲ್ಲಿ ಬರೆಯಲು ರೆಡಿಯಾಗಿದ್ದೇನೆ. ಹೊಸ ವರುಷದ ಹೊಸ ಹುಚ್ಚುತನ!
ಮೊದಲು ನನ್ನ ಇಂಗ್ಲೀಷ್ ಬ್ಲಾಗಿನಿಂದ ಕೆಲವು ಬರಹಗಳನ್ನು ಇಂಪೋರ್ಟ್ ಮಾಡಿ ಇಲ್ಲಿ ಬಿಡುತ್ತೇನೆ. ಜೊತೆಗೆ ನನ್ನ ಫೋಟೋ ಬ್ಲಾಗಿನಿಂದ ಕೂಡ.
ಮುಂದಿನ ಬರಹಗಳು ಕನ್ನಡ ಇಂಗ್ಲೀಷ್ ಎರಡೂ ಭಾಷೆಯಲ್ಲಿ ಇರುತ್ತವೆ.
ಇಂಟರ್ನೆಟ್ಟಿಗೆ ಸಂಬಂಧಿಸಿದ, ಮೊಬೈಲುಗಳಿಗೆ ಸಂಬಂಧಿಸಿದ ನನ್ನ ಅನಿಸಿಕೆಗಳಿ ಇಂಗ್ಲೀಷಿನಲ್ಲಿರುತ್ತವೆ. ಹಾಗೆಯೆ ಕೆಲವು ಸಿನೆಮಾ ಮತ್ತು ಪುಸ್ತಕಗಳ ಬರಹಗಳು ಕೂಡ.
ಕಾಳಿಗಿಂತ ಜೊಳ್ಳೇ ಜಾಸ್ತಿ ಆದರೂ ಹೆಚ್ಚು ಹೆಚ್ಚು ಬರೆಯುವ ಹುಚ್ಚು ಸಾಹಸಕ್ಕೆ ಕೈಹಾಕಲಿದ್ದೇನೆ.

Labels:
ಸುಂಸುಮ್ನೆ
| Reactions: |
Monday, January 16, 2012
ಮನ್ಯಾಗ ಯಾರೂ ಇಲ್ಲಾ
ಮನ್ಯಾಗ ಯಾರೂ ಇಲ್ಲಾ
( ಮರಾಠಿ ಕವಿ ಬರೆದ " ದೂರ ದೇಶಿ ಗೇಲಾ ಬಾಬಾ" ದ ಕನ್ನಡ ಅವತರಣಿಕೆ - ನನ್ನ ತಮ್ಮ ಮಾಧವ ಮಾಡಿದ್ದು)
ದೂರ ದೇಶಕ್ಕ ಹೊಗ್ಯಾನ ಅಪ್ಪಾ
ನೌಕರಿಗೆ ಹೊಗ್ಯಾಳ ಅವ್ವಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ
ಗುಬ್ಬಿಯಂಥ ಜೀವಾ
ಒದ್ದ್ಯಾಡಿ ಹಾರಾಡಿ ಸುಸ್ತಾದರೂ
"ಸಾಕು , ಮಲಕೋ ಪುಟ್ಟಾ"
ಅಂತ ಹೇಳೋರೂ ಯಾರೂ ಇಲ್ಲಾ
ಮನ್ಯಾಗ ಯಾರೂ ಇಲ್ಲಾ
ಎದಕೋ ಏನೋ ಯಾರಿಗೆ ಗೊತ್ತು
ಕೊಡತಾರ ಯಾಕ ಸಾಲಿಗಿ ಸುಟ್ಟಿ
ಮಾತಾಡ್ಲಿಕ್ಕೂ ಯಾರೂ ಇಲ್ಲಾ
ನನಗ ನಾನ ಹೇಳೀನಿ ಕತಿ ಕಟ್ಟೀ
ಆಟಗಿ ಎಲ್ಲಾ ಹಚ್ಚಿಟ್ಟೀನಿ
ಆಡವರೂ ಯಾರೂ ಇಲ್ಲಾ
ಮನ್ಯಾಗ ಯಾರೂ ಇಲ್ಲಾ
ಹೊರಗಿನ ಜಗಾ ಕಿಡಿಕ್ಯಾಗಿಂದ
ಕಾಣಸ್ತದ ಭಾಳ ಛಂದ
ಬಾಗಲಾ ತಗದು ಹೊರಹೋಗಬೇಕಂದ್ರ
ನನ್ನ ಮುಷ್ಟ್ಯಾಗ ಯಾರದೂ ಬೆರಳಿಲ್ಲಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ
Labels:
ಕವಿತೆಗಳು
| Reactions: |
Wednesday, December 28, 2011
ಕೊಲವೇರಿ ಸಾಂಗ್ - ಕನ್ನಡ - ಸ್ಕೂಲ್ ಬಾಯ್ಸ್ ವರ್ಷನ್
ಕೊಲವೇರಿ ಹಾಡು ಎಷ್ಟು ಜನಪ್ರಿಯವಾಗಿದೆ ಎನ್ನುವುದನ್ನು ಹೇಳುವ ಅವಷ್ಯಕತೆ ಇಲ್ಲ
ಎಂದು ಕೊಂಡಿದ್ದೇನೆ. ನನ್ನ ಮಗ, ಕೃಷ್ಣ, ಈ ಹಾಡನ್ನು ಕನ್ನಡದಲ್ಲಿ (ಐ ಮೀನ್ ಕಂಗ್ಲೀಷ್)
ನಲ್ಲಿ ಹಾಡಿ ಕುಣಿದಿದ್ದಾನೆ. ನಾನದಕ್ಕೆ school boys version ಎಂದು
ಹೆಸರಿಟ್ಟಿದ್ದೇನೆ.
ನೋಡಿ, ಆನಂದಿಸಿ. ಇಷ್ಟವಾದರೆ ಜಾಲದಲ್ಲಿ ಗೆಳೆಯರೊಂದಿಗೆ ಹಂಚಿಕೊಳ್ಳಿ.
ನೋಡಿ, ಆನಂದಿಸಿ. ಇಷ್ಟವಾದರೆ ಜಾಲದಲ್ಲಿ ಗೆಳೆಯರೊಂದಿಗೆ ಹಂಚಿಕೊಳ್ಳಿ.
Labels:
ಸುಂಸುಮ್ನೆ
| Reactions: |
Thursday, December 01, 2011
ನೀಲು ೪೭
Labels:
ನೀಲುಗಳು
| Reactions: |
Monday, October 03, 2011
ನೀಲು ೪೬
ಮೊದಲ ಸ್ಪರ್ಷದ
ಮಿಂಚು, ರೋಮಾಂಚನ
ಹರ್ಷ, ತೀವ್ರತೆ
ಹತ್ತು ವರುಷದ ಮೇಲೆ
ಮತ್ತೊಬ್ಬರ ಸ್ಪರ್ಷದಲ್ಲಿ
ಸಿಗಬಹುದೆನ್ನುವ
ಹುಡುಕಾಟದಲ್ಲಿ
Labels:
ನೀಲುಗಳು
| Reactions: |
Monday, September 26, 2011
ಕ್ಷಣಗಳು
೨೪ ಅಗಸ್ಟಿನ ಗೂಗಲ್ ಡೂಡಲ್ ನೋಡಿದ್ದೀರಾ?
ಇದು ಹೂರೆ ಲೂಇಸ್ ಬೋರ್ಹೇಸ್ (ಇಂಗ್ಲೀಷಿನಲ್ಲಿ ಬರೆಯುವುದು Jorge Luis Borges ಎಂದು ಆದರೆ ಉಚ್ಛಾರ ಮಾತ್ರ ಬೇರೆ) ಎಂಬ ಅರ್ಜಂಟೈನಾದ ಸಾಹಿತಿಯ ೧೧೨ನೇ ಹುಟ್ಟುಹಬ್ಬದ ನೆನಪಿಗೆ ಗೂಗಲ್ಲಿನ ಡೂಡಲ್ಲು ಇದು. ಆತನ ಬಗ್ಗೆ ಓದಲು ಇಲ್ಲಿ ಒತ್ತಿ: ವಿಕಿಯಲ್ಲಿ Jorge_Luis_Borges
ಆತನ ಒಂದು ಪ್ರಸಿದ್ಧ ಕವನವನ್ನು ಇಲ್ಲಿ ಇಂಗ್ಲೀಷಿನಿಂದ ಅನುವಾದಿಸಿದ್ದೇನೆ:

ನಾ ಮತ್ತೆ ಬದುಕಬಲ್ಲೆನಾದರೆ
ನನ್ನ ಯತ್ನವೆಲ್ಲ ಆಗ
ಇನ್ನೂ ಹೆಚ್ಚು ತಪ್ಪು ಮಾಡುವುದು
ಈಗಿನಷ್ಟು ಒಳ್ಳೆಯವನಾಗದಿರುವುದು
ಇನ್ನೂ ಹೆಚ್ಚು ಆರಾಮವಾಗಿರುವುದು
ಈಗಿನಕ್ಕಿಂತ ಹೆಚ್ಚು ತುಂಬಿಕೊಂಡಿರುವುದು
ನಿಜಾಂದ್ರೆ, ಕಡಿಮೆ ಗಂಭೀರನಾಗಿರುವುದು
ಹೆಚ್ಚು ಕೊಳಕಾಗಿರುವುದು
ಹೆಚ್ಚು ಓಡಾಡುವುದು
ಹೆಚ್ಚೆಚ್ಚು ಸಂಜೆಬಾನು ನೋಡುತ್ತ ಕೂರುವುದು
ಹೆಚ್ಚೆಚ್ಚು ಬೆಟ್ಟ ಗುಡ್ಡ ಹತ್ತುವುದು
ಇನ್ನೂ ಕಂಡರಿಯದ ಜಾಗಕ್ಕೆ ಹೋಗುವುದು
ತುಂಬ ಐಸ್‍ಕ್ರೀಮು ತಿನ್ನುವುದು
ಕಡಿಮೆ ಬೀನ್ಸು ತಿನ್ನುವುದು
ಅಸಲಿ ಸಮಸ್ಯೆಗಳನ್ನು ಜಾಸ್ತಿ, ಕಾಲ್ಪನಿಕವಾದವುಗಳನ್ನು ಕಡಿಮೆ
ಮಾಡಿಕೊಳ್ಳುವುದು
ನಾನೊಬ್ಬ ದೂರದೄಷ್ಟಿಯ ಜಾಗರೂಕ ನಾಗರಿಕ
ಬದುಕಿನ ಪ್ರತಿ ನಿಮಿಷದಲ್ಲೂ!
ಹಾಗಂತ ಬದುಕಲ್ಲಿ ನಲಿವಿನ ಕ್ಷಣಗಳ ಕಂಡಿಲ್ಲ ಎಂದೇನಿಲ್ಲ
ಮರಳಿ ಹೋಗುವೆನಾದರೆ ನನಗಿನ್ನೂ ಅಂಥ ಕ್ಷಣಗಳೇ ಬೇಕು
ನಿನಗೆ ಗೊತ್ತಿಲ್ಲದಿದ್ದರೆ ಕೇಳು - ಬದುಕು ಎಂದರೆ ಅದೇ-
’ಈಗ’ನ್ನು ಕಳೆದುಕೊಳ್ಳಬೇಡ
ನಾನೀಗ ಎಲ್ಲಿಗೆ ಹೋದರೂ
ಜ್ವರ ಮಾಪಕ ಬೇಕು
ಬಿಸಿನೀರು ಇರಬೇಕು
ಕೊಡೆ ಬೇಕು, ಗಾಳಿಕೊಡೆ ಕೂಡ
ಮತ್ತೆ ಜೀವಿಸಬಲ್ಲೆನಾದರೆ ನನ್ನದು ಬೆಳಕಿನ ಪಯಣ
ಮತ್ತೆ ಬದುಕಬಲ್ಲೆನಾದರೆ ನನ್ನದು ಬರಿಗಾಲ ದುಡಿತ
ವಸಂತನಿಂದ ಹೇಮಂತ ಬರುವವರೆಗೂ.
ಬಂಡಿ ಓಡಿಸುತ್ತೇನೆ ತುಂಬ ಸಲ
ಮೂಡಲದಲ್ಲಿ ನೇಸರನಿಗಾಗಿ ಕಾಯುತ್ತೇನೆ ತುಂಬ ಸಲ
ಮತ್ತೆ ಮಕ್ಕಳೊಡನೆ ಆಡುತ್ತೇನೆ ತುಂಬ ಹೊತ್ತು
ಮತ್ತೆ ಬದುಕನ್ನು ಇನ್ನೊಂದು ಸಲ ಬದುಕಬಲ್ಲೆನಾದರೆ...
ಆದರೆ... ನನಗೀಗ ವರ್ಷ ಎಂಬತ್ತೈದು
ಇನ್ನೆಷ್ಟು ದಿನ ನಾನು ಬದುಕಬಲ್ಲೆ?
(ಇಂಗ್ಲೀಷ್ ಅವತರಣಿಕೆ ಇಲ್ಲಿದೆ: http://www.poemhunter.com/poem/instants/)
Labels:
ನನ್ನ ಕವಿತೆಗಳು
| Reactions: |
Friday, September 23, 2011
ನೀಲು ೪೫
Labels:
ನೀಲುಗಳು
| Reactions: |
Sunday, September 11, 2011
ರೆಹೆಮಾನನ ಚಿತ್ರಗಳು
ಕಳೆದ ವರ್ಷ ರೆಹಮಾನನ ಜೈಹೊ ಕಾರ್ಯಕ್ರಮದಲ್ಲಿ ತೆಗೆದದ್ದು. (ಇನ್ನು ಮುಂದೆ ನನ್ನ ತಥಾಕಥಿತ ಫೋಟೋಗ್ರಾಫಿಯನ್ನೂ ಇದೇ ಬ್ಲಾಗಿನಲ್ಲಿ ಹಾಕುತ್ತೇನೆ, ಬೇಜಾರು ಮಾಡಿಕೊಳ್ಳಬೇಡಿ)
Labels:
ಕ್ಯಾಮರಾದಲ್ಲಿ ಉಳಿದಿದ್ದು
| Reactions: |
Monday, September 05, 2011
ನೀಲು ೪೪
![]() |
| (from: http://lsmdevo.wordpress.com/2011/05/19/desires/) |
ಸಾವಿರಾರು ಆಸೆಗಳ
ಬೆನ್ನತ್ತಿ ಬಳಲುವುದೋ,
ಒಂದೊಂದೇ ಆಸೆಗಳ
ಕೊಲ್ಲುತ್ತ ಸಾಯುವುದೋ?
Labels:
ನೀಲುಗಳು
| Reactions: |
Subscribe to:
Posts (Atom)