Saturday, June 02, 2007

ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

ದಯಮಾಡಿ ನಿಮಗ ಗೊತ್ತಿರ್ರೊ ಉತ್ತರ ಕರ್ನಾಟಕದ ಕನ್ನಡ ಶಬ್ದಗಳನ್ನ ನನಗ ಈ-ಮೇಲ್ ಮಾಡ್ರಿ, ಅಥವಾ commentsನ್ಯಾಗ ಬರೀರಿ. ಈ ಶಬ್ದಕೋಶ ಬೆಳಸಲಿಕ್ಕೆ ಸಹಾಯ ಮಾಡ್ರಿ. ಅ: ಅಗದೀ, ಅಗದಿ: ತುಂಬ. ಉದಾ: ಅಂವ ಅಗದೀ ಛೊಲೊ ಇದ್ದಾನ ಅಡಕಲ ಖೋಲಿ: store room ಅಡಸಳ ಬಡಸಳ: ಅವ್ಯವಸ್ಥ ಅತ್ಯಾ: ಅತ್ತೆ ಅನಕಾತ: ಸದ್ಯಕ್ಕೆ ಅಪದ್ಧ: ಆಡಬಾರದ್ದು ಅಬಚಿ: ತಾಯಿಯ ಅಕ್ಕ ಅಥವಾ ತಂಗಿ, ಮಾಂಶಿ ಅಳ್ಳಿಟ್ಟು: ಜೋಳದ ಅರಳಿನ ಹಿಟ್ಟು ಅಕ್ಷಂತಿ: ಮಾಧ್ವ ಬ್ರಾಹ್ಮಣರು ತಲೆಗೆ ಹಚ್ಚುವ ಬಿಂದಿ! ಅಂಗಾರ: ಗುಡಿಯಲ್ಲಿ ಕೊಡುವ ಭಸ್ಮ ಅಂವ: ಆತ ಆ: ಆಕಿ: ಅವಳು ಆಜೂಬಾಜೂ: ಅಕ್ಕಪಕ್ಕ ಇ: ಇಯತ್ತೆ: ಶಾಲೆಯಲ್ಲಿಯ ವರ್ಗ ಉ: ಉಡಸಾರಣಿ: ಪೂಜೆಯ ನಂತರದ ದೇವರ ಪೂಜೆಯ ಸಾಮಾನುಗಳು ಉಡಾಳ: ತುಂಟ ಉತ್ತತ್ತಿ: ಒಣ ಖರ್ಜೂರ ಉಲಕೋಚಿ: ತುಂಟ ಉಳ್ಳಾಗಡ್ಡಿ: ಈರುಳ್ಳಿ ಉಂಡಿ: ಲಡ್ಡು, ಲಾಡು ಎ: ಎಬ್ಬಂಕ: ಪೆದ್ದ ಒ: ಒಬ್ಬಿ: ಕಂತು (ಒಂದ್ ಒಬ್ಬಿ ಇಡ್ಲಿ ತಿನ್ನು) ಓ: ಓಣಿ: ಅಡ್ಡರಸ್ತೆ ಕ: ಕಟಕ: ಬಿರುಸು (ಉದಾ: ಕಟಕ ರೊಟ್ಟಿ) ಕಡಗಿ: ಮುಟ್ಟು (menstruation) ಕದ: ಬಾಗಿಲು ಕರದಂಟು: ಒಣಹಣ್ಣು ಮತ್ತು ತಿನ್ನುವ ಅಂಟು ಹಾಹಿ ಮಾಡಿದ ಸಿಹಿ, ಗೋಕಾಕಿನ ಸ್ಪೇಷಲ್! ಕಾಲ್ಮಡಿ: ಮೂತ್ರವಿಸರ್ಜನೆ ಕಾಲ್ಮರಿ: ಚಪ್ಪಲಿ ಕಾಕಡಾ: ಕನಕಾಂಬರ ಕಾಕಾ: ತಂದೆಯ ಅಣ್ಣ ಅಥವಾ ತಮ್ಮ ಕಾಕು: ತಂದೆಯ ಅಣ್ಣ ಅಥವಾ ತಮ್ಮನ ಹೆಂಡತಿ ಕುಟ್ರಿ: ಗುಡ್ಡೆ ಕುಬಸ: ರವಿಕೆ, ಬಸುರಿಯಾದಾಗ ಹೆಣ್ಣಿಗೆ ಮಾಡುವ ಆತಿಥ್ಯ = ಸೀಮಂತ ಕುಂದಾ: ಒಂದು ಬಗೆಯ ಹಾಲಿನ ಸಿಹಿ, ಬೆಳಗಾಂವಿಯ ಸ್ಪೇಷಲ್! ಖ: ಖಜ್ಜೂರಿ: ಖರ್ಜೂರ ಖರೆ: ನಿಜ ಖಂಗ: ??, ಭಾರಿ ಖಂಗ ಇದ್ದಾನ ಖಾನೆ: ವಿಭಾಗ ಖೊಳಮಿಸುವುದು: ತುಂಬ urgent ಆಗುವುದು ಖೋಲಿ: ಕೋಣೆ ಗ: ಗಡಾನ: ಬೇಗ ಗಪ್ಪು: ಸುಮ್ಮನೆ ಗಿರಮಿಟ್ಟು: ಏನೇನೋ ಹಾಕಿ ಗಿರಿಗಿರಿ ತಿರುಗಿಸಿ ಮಾಡಿದ ಚುರುಮುರಿ ಗುಡಿ: ದೇವಸ್ತಾನ ಗುಡಿಗಿ: trousers ಗುಂಡುಪೊಂಗ್ಳು: ಪಡ್ಡು, ದೋಸೆ ಹಿಟ್ಟಿನಲ್ಲಿ ಮಾಡುವ ತಿನಿಸು ಚ: ಚಷ್ಮಾ: ಕನ್ನಡಕ ಚರಿಗಿ: ತಂಬಿಗೆ ಚಾದರ: ಹೊದಿಕೆ ಚಾಳೀಸು: ಕನ್ನಡಕ ಚಾವಿ: ಬೀಗದ ಕೈ ಚಿಕ್ಕು: ಸಪೋಟ ಚಿಮಣಿ ಎಣ್ಣೆ: ಸೀಮೆ ಎಣ್ಣೆ ಚಿಟ್ಟಾ: ಬೀಡಿ ಚುರುಮುರಿ: ಮಂಡಕ್ಕಿ: ಮಂಡಾಳ ಚೊಲೊ: ಒಳ್ಳೆಯವ. ಚೌರಿ: ಕೃತಕ ಕೂದಲು ಛ: ಛೊಲೊ: ಒಳ್ಳೆಯವ. : ಜಡ್ಡು:ರೋಗ ಜನಿವಾರ: ಯಜ್ನೋಪವೀತ ಜರ್-ಕರ್ತಾ: ಒಂದು ವೇಳೆ ಜಳಕ: ಸ್ನಾನ ಜಾವಳ: ಮಗುವಿನ ಮೊದಲ ಚೌರ ಜುಲುಮಿ: ಒತ್ತಾಯ ಟ: ಟಿಕಳಿ: ಬಿಂದಿ ಟೊಪಿಗಿ: ಟೋಪಿ ಡ: ಡರಿ:ತೇಗು ಡರಿಕೆ: ತೇಗು ಡಾಣಿ: ಸೇವು ಇತ್ಯಾದಿ ತ: ತಡಿ: ತಾಳು ತರುಬು: ನಿಲ್ಲಿಸು ತಳಗ: ಕೆಳಗೆ ತಂಬಿಗಿ ತೊಗೊಂಡು ಹೋಗೂದು: ಮಲವಿಸರ್ಜನೆ ಕಾರ್ಯ ತಂಬು: ಟೆಂಟು ತಿಂಡಿ: ಕೆರೆತ ತುಟ್ಟಿ: ದುಬಾರಿ ತೋಂಡಿ: ಮೌಖಿಕ ಪರೀಕ್ಷೆ, oral exam, viva ದ: ದಮ್: ತಾಳು (ಬಿಜಾಪುರದ ಕಡೆ) ಧ: ಧಾಬಡಿ: ಒಂದು ತರಹದ ಪಂಚೆ, ಬ್ರಾಹ್ಮಣರ ಮಡಿಗೆ ಒದಗುವ shortcut ಬಟ್ಟೆ ಧೋತರ: ಉದ್ದ ಬಿಳಿ ಪಂಚೆ ನ: ನಪಾಸು: ಫೇಲು ನಳ: ನಲ್ಲಿ ಪ: ಪಟಕಾ, ಪಟಗಾ: ಪೇಟಾ ಪಟ್ಟಾ: ಬೆಲ್ಟು ಪಡಸಾಲಿ: drawing room ಪಡ್ಡು: ಗುಂಡುಪೊಂಗ್ಳು, ದೋಸೆ ಹಿಟ್ಟಿನಿಂದ ಮಾಡಿದ ತಿನಿಸು ಪರಕಾರ: ಲಂಗ ಪಲ್ಲಂಗ: ಮಂಚ ಪಂಚೇತಿ: ಫಜೀತಿ ಪಾತೇಲಿ: ಪಾತ್ರೆ ಪಾಳಿ: ಸರತಿ ಪಾಂಟಣಿಗೆ: ಮೆಟ್ಟಿಲು ಪಿಂಚಣಿ: ಪೆನ್ಶನ್ ಪುಟಾಣಿ: ಹುರಿಗಡ್ಲೆ ಪುಠಾಣಿ: ಹುರಿಗಡ್ಲೆ ಪೇರುಹಣ್ಣು: ಪೇರಲೆಹಣ್ಣು, ಸೀಬೆಹಣ್ಣು ಫ: ಫರಾಳ: ಫಲಾಹಾರ, tiffin, breakfast ಫಳಾರ: ಫಲಾಹಾರದ shortform! ತಿಂಡಿ, tiffin, breakfast ಬ: ಬಕ್ಕಣ: ಜೇಬು ಬಟಾಟಿ: ಆಲೂಗಡ್ಡೆ ಬಯಲಕಡಿ: ಮಲವಿಸರ್ಜನೆ ಬಾಕು: ಬೆಂಚು ಬಾನಾ: ದೇವರಿಗೆ ಕೊಡುವ ಎಡೆ ಬ್ರಾಮ್ರು: ಬ್ರಾಹ್ಮಣರು ಬೆಸ್ತಾರ: ಬೆಸ್ತರ ವಾರ = ಗುರುವಾರ ಬ್ಯಾನಿ: ರೋಗ ಭ: ಭಕ್ಕರಿ: ಜೋಳದ ರೊಟ್ಟಿ ಭಾಂಡಿ: ಪಾತ್ರೆ ಭಿಡೆ: ಸಂಕೋಚ (ಮಹಾರಾಷ್ಟ್ರದಲ್ಲಿ ಭೀಡೆ ಅಂತ ಅಡ್ಡಹೆಸರು ಇದೆ) ಮ: ಮನಗಂಡ: ಬೇಕಾದಷ್ಟು ಮನೂಕ: ಒಣ ದ್ರಾಕ್ಷಿ ಮಳ್ಳ: ಮರುಳ ಮಾರಿ: ಮುಖ ಮಾಸ್ತರ: ಗುರುಗಳು (master ಮಾಸ್ತರ ಆಗಿರಬೇಕು) ಮಾಳಿಗಿ: ಮೇಲ್ಚಾವಣಿ ಮುತ್ತ್ಯಾ: ತಾತ, ಅಜ್ಜ ಮಂಡಕ್ಕಿ: ಮಂಡಾಳ: ಚುರುಮುರಿ ಮಂಡಾಳ: ಮಂಡಕ್ಕಿ: ಚುರುಮುರಿ ಮಂಡಿಗೆ: ಉತ್ತರ ಕರ್ನಾಟಕದ ಬ್ರಾಹ್ಮಣರ ಮದುವೆ ಈ ಸಿಹಿಯಿಲ್ಲದೇ ಪೂರ್ತಿಯಾಗುವುದಿಲ್ಲ. ಮಾಂಶಿ: ತಾಯಿಯ ಅಕ್ಕ ಅಥವಾ ತಂಗಿ ಮುಸಡಿ: ಮುಖ ಮುಂಜವಿ: ಉಪನಯನ ಮುಂದ?: ಮಾತಾಡುವಾಗ "ಆಮೇಲೆ?" ಅನ್ನುತ್ತಾರಲ್ಲ, ಹಾಗೆ ಮೋಗಂ: ಹಾಗೇ, ಸುಮ್ನೇ, ಯ: ಯಾಂಬಲ್: ಯಾವನು ಬಲ್ಲ ರ: ರಕರಕ: ಕಿರಿಕಿರಿ ರಗಡ: ಬೇಕಾದಷ್ಟು ರವಿವಾರ: ಭಾನುವಾರ ರಸಕಸಿ: ಮನಸ್ತಾಪ ರೊಕ್ಕ: ಹಣ ಲ: ಲಗು: ಬೇಗ ಲಠ್ಠ: ದಪ್ಪ ಲುಂಗಿ: ಬಣ್ಣದ ಪಂಚೆ ಲೋಟ: ಗ್ಲಾಸು ವ: ವಗ್ಗರಣಿ: ವಗ್ಗರಣೆ ಹಾಕಿದ ಅವಲಕ್ಕಿ ವಸ್ತ: ವಡವೆ ವೈನಿ: ಅತ್ತಿಗೆ ಸ: ಸಜ್ಜಿಗಿ: ಬೆಲ್ಲ ಮತ್ತು ರವೆ ಹಾಹಿ ಮಾಡಿದ ತಿಂಡಿ ಸಬಕಾರ: ಸೋಪು ಸರs: ಸಾರ್! ಸವುಡು: ಬಿಡುವು ಸಸಾ: ಸರ್ವೇ ಸಾಧಾರಣ/ಸಾಮಾನ್ಯದ shortform, on an average ಸಂಡಾಸ: ಮಲವಿಸರ್ಜನೆ, lavatory ಸಾಬಾಣ: ಸಬಕಾರ, ಸೋಪು ಸಾರು: ರಸಂ ಸೂಟಿ: ರಜೆ ಸೆಲ್ಲೆ: ವಯ್ಯಾರ ಸೈಲ: ಸಡಿಲು ಸೋವಿ: ಅಗ್ಗ ಶ: ಶ್ಯಾಣ್ಯಾ: ಜಾಣ ಶಿಕೋಣಿ: tution ಶಿರಾ: ಕೇಸರಿಭಾತು ಶೆಂಗಾ: ನೆಲಗಡಲೆ, ಹ: ಹತ್ತೀಲೆ: ಹತ್ತಿರ ಹಡಿ: ಹೆರು ಹಪಾಪಿ: ಆಸೆಬುರುಕ ಹವಣಿ: ಮಧ್ಯ, ಹೆಚ್ಚೂ ಇಲ್ಲದ, ಕಡಿಮೆಯೂ ಇಲ್ಲದ ಹಂಗ: ಹಾಗೇ ಹಂಗಾರ: ಹಾಗಾದರೆ ಹರ್ಯಾಗೆ: ಬೆಳಿಗ್ಗೆ ಹಂಗಂದ್ರ: ಹಾಗೆ ಹೇಳಿದರೆ ಹಂತೇಕ: ಹತ್ತಿರ ಹ್ಯಾಂವ: ಛಲ, ಕಿಚ್ಚು ಹಿಂದಾಗಡೆ: ಆಮೇಲೆ ಹುರುಹುರು: ಸಮಾಧಾನವಿಲ್ಲದಿರುವುದು ಹುಳಿ: ಸಾಂಬಾರ್ ಹೊಯ್ಕೊ: ಬಾಯ್ ಬಾಯ್ ಬಡಕೊ, ಮಂಗಳೂರ್ ಕಡೆ - ಸ್ನಾನ ಮಾಡು ಹೌಸು: ಉತ್ಸಾಹ ಹೌರಗ: ನಿಧಾನವಾಗಿ

ಝಾಕಣಿ: ಪಾತ್ರೆಯ ಮೇಲೆ ಮುಚ್ಚುವ ಪ್ಲೇಟು

9 comments:

  1. ವಾವ್, ಒಳ್ಳೆ ಕೆಲಸ ಮಾಡ್ತಿರಿರಾ. ನನ್ನ ಉತ್ತರ ಕರ್ನಾಟಕದ ಗೆಳೆಯರಿಗೆಲ್ಲಾ ಕಳಿಸ್ತೀನಿ. ನೋಡೋಣ. ಇದು ಇಲ್ಲಿಗೆ ನಿಲ್ಲೂದು ಬೇಡ. ಒಂದು ಒಳ್ಳೆ ಆನ್ಲೈನ್ ಪದಕೋಶವಾಗಲಿ.

    ReplyDelete
  2. ವಿಕಾಸ್ ಹೆಗಡೆ,
    ಖಂಡಿತ ಮುಂದುವರೆಸೋಣ, ತುಂಬ ಜನರ ಸಹಾಯ ಬೇಕು.
    ಕೇಶವ

    ReplyDelete
  3. ಅಗದಿ ಛಲೋ ಕೆಲ್ಸಾ ನೋಡ್ರಿ.

    ಇಲ್ಲೋಸ ಅದಾವು ನೋಡ್ರಿ
    ಪ್ಯಾಲಿ, ಅರಬಾ, ಉಪ್ಪಿಟ್ಟು, ಝುಣಕಾ,ಇಂಡಿ( ಚಟ್ನಿ),ಗುದಮುರಗಿ, ಲಗಾ,ಉಸಾಬರಿ,ಹೊಲಾ,ಅರಿವಿ(ಬಟ್ಟೆ),ಕೆರವು,ಮಡ್ಡಿ(ತಲೆ ಹಿಂಬಾಗ),ವಾರಪಡಿ :-),ಬರೋಬ್ಬರೀ,ವಾಟೆ(ಲೋಟ),ಗಂಗಾಳ( ತಾಟು),ಸಸಾರ(ಸರಳ), ಸಂಗಟೀ,ಬಂಕಾ,ಚಬಕಾ,ಕೆಬ್ಬಣ,ಪೋಲಕಾ (ಬ್ಲೌಸ್, ಜಂಪರ)..

    ಮತ್ತೆ ನೆನೆಪು ಮಾಡಿಕೊಂಡು ಹೇಳ್ತೀನಿ.. :-)

    ReplyDelete
  4. ಸಂತೋಷ್ ಅವರ,
    ಸೇರಸ್ತೀನಿ, ಭಾಳ ಧನ್ಯವಾದಗೋಳು. ಇನ್ನಷ್ಟು ಪದ ಹುಡುಕಿ ಕೊಡ್ರಲಾ..
    ಕೇಶವ

    ReplyDelete
  5. ಕದ=ಬಾಗಿಲು, ಗವಾಕ್ಷಿ=ಕಿಟಕಿ, ಹರ್ಯಾಗ=ನಸುಕಿನಲ್ಲಿ, ಕಂದೀಲು=ಲಾಂದ್ರ, ಬೆಳಕಿಂಡಿ=ಛಾವಣಿ ಮೇಲಿನ ಕಿಟಕಿ, ಕಪಾಟು=ಅಲಮಾರ(ಕಬೋರ್ಡ),ಬಂಡಿ=ಚಕ್ಕಡಿ,ಮಹಡಿ=ಅಂತಸ್ತು(ಮಹಡಿ ಮನೆ ಅಂತಾರಲ್ಲ ಹಂಗ,ಮಾಳಿಗೆ=ಮೇಲ್ಛಾವಣಿ, ಜಗುಲಿ=ಕಟ್ಟೆ,ದೇವರ ಮನೆಯಲ್ಲಿರುವ ಕಟ್ಟೆ, ದೀಡ್ ಪಂಡಿತ=ಜಾಣ ದಡ್ಡ(ತಾನೇ ಜಾಣ ಅಂತ ತಿಳಿದುಕೊಂಡವ),
    ಖಾರಬ್ಯಾಳಿ=ಬೇಳಸಾರು, ಆಮ್ರ=ಸಾರು, ಕಲ್ಲೆಣ್ಣೆ,ಚಿಮಣಿ ಎಣ್ಣೆ=ಸೀಮೆಎಣ್ಣೆ, ಸಮಕ್ಷಮ=ಎದುರುಬದುರು, ಚೊಲೊ=ಒಳ್ಳೆಯ, ಚಂದ=ಅಂದ, ಚೆನ್ನಾಗಿದೆ, ಬದುವು=ಹೊಲದ ಪೈರಿನ ಮಧ್ಯದ ಕಾಲುದಾರಿ, ನಡ=ಸೊಂಟ, ರಟ್ಟೆ=ತೋಳು(ಕೈ ತೋಳು), ಮತ್ತೆ ನೆನಪು ಮಾಡಿಕೊಂಡು ಹೇಳತೀನಿ...ಬರ್ತೀನ್ರಿ ಸರs.

    ReplyDelete
  6. ಕೇಶವ ಅವರೆ,
    ಉತ್ತರ ಕರ್ನಾಟಕದ ಶಬ್ದಕೋಶ ಎನ್ನುವಂತಹ ರೆಫೆರೆನ್ಸ್ ಒಂದು ಇರಬೇಕು ಓದುಗರಿಗೆ ಅಂತ ಯೋಚನೆ ಮಾಡಿದ್ದೆ.
    ಯಾಕಂದ್ರೆ ಕೆಲವೊಂದು ಕಥೆ ಕವಿತೆಗಳನ್ನ ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಬರೆದರೆ ಸಂತೃಪ್ತಿ.
    ಆದರೆ ಓದುಗರಿಗೆ ಅರ್ಥವಾಗಲು ಕಷ್ಟ.
    ಸರಿ, ಇವತ್ತಿನಿಂದ ನಾನು ನನಗೆ ನೆನಪಿಗೆ ಬರುವ ಶಬ್ದಗಳನ್ನು ಗೀಚಿಕೊಳ್ಳುತ್ತೇನೆ.
    ನಿಮಗೆ ತಿಳಿಸುತ್ತಾ ಇರುತ್ತೇನೆ.

    ಸೂಸಲಾ : ತೋಯ್ಸಿ ಮಾಡಿದ ಮಂಡಕ್ಕಿ
    ಛಂದ : ಸುಂದರವಾದ. ಚೆನ್ನಾದ

    ReplyDelete
  7. Keshav,nimma kosha illi americadalli odo bhagya.
    Namma ahaveri kade kelavu shabda use madthara ,illivaregu yava pusthakadalli kandilla.kelavu :

    dyasa illa-nenapu illa
    padakati-aram aguttade
    gada gada-begane
    dyasa bandaga matta kalisuttene.

    ReplyDelete
  8. ಒಳ್ಳೆ ಕೆಲಸ. ಪದ ಸಂಗ್ರಹಿಸುವಾಗ ಅದರ ಸಾಮಾಜಿಕ ಮತ್ತು ಪ್ರಾದೇಶಿಕ ಹಿನ್ನೆಲೆ ಪಡೆಯಿರಿ. ಧಾರವಾಡದೊಳಗೇ ವಾಟೆ ಮತ್ತು ಲೋಟ ಬ್ರಾಹ್ಮಣ ಮತ್ತು ಬ್ರಾಹ್ಮಣೇತರು ಬಳಸುವ ಪದಗಳು

    ReplyDelete
  9. ಒಳ್ಳೆ ಕೆಲಸ. ಪದ ಸಂಗ್ರಹಿಸುವಾಗ ಅದರ ಸಾಮಾಜಿಕ ಮತ್ತು ಪ್ರಾದೇಶಿಕ ಹಿನ್ನೆಲೆ ಪಡೆಯಿರಿ. ಧಾರವಾಡದೊಳಗೇ ವಾಟೆ ಮತ್ತು ಲೋಟ ಬ್ರಾಹ್ಮಣ ಮತ್ತು ಬ್ರಾಹ್ಮಣೇತರು ಬಳಸುವ ಪದಗಳು

    ReplyDelete