Saturday, June 02, 2007

ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

ದಯಮಾಡಿ ನಿಮಗ ಗೊತ್ತಿರ್ರೊ ಉತ್ತರ ಕರ್ನಾಟಕದ ಕನ್ನಡ ಶಬ್ದಗಳನ್ನ ನನಗ ಈ-ಮೇಲ್ ಮಾಡ್ರಿ, ಅಥವಾ commentsನ್ಯಾಗ ಬರೀರಿ. ಈ ಶಬ್ದಕೋಶ ಬೆಳಸಲಿಕ್ಕೆ ಸಹಾಯ ಮಾಡ್ರಿ. ಅ: ಅಗದೀ, ಅಗದಿ: ತುಂಬ. ಉದಾ: ಅಂವ ಅಗದೀ ಛೊಲೊ ಇದ್ದಾನ ಅಡಕಲ ಖೋಲಿ: store room ಅಡಸಳ ಬಡಸಳ: ಅವ್ಯವಸ್ಥ ಅತ್ಯಾ: ಅತ್ತೆ ಅನಕಾತ: ಸದ್ಯಕ್ಕೆ ಅಪದ್ಧ: ಆಡಬಾರದ್ದು ಅಬಚಿ: ತಾಯಿಯ ಅಕ್ಕ ಅಥವಾ ತಂಗಿ, ಮಾಂಶಿ ಅಳ್ಳಿಟ್ಟು: ಜೋಳದ ಅರಳಿನ ಹಿಟ್ಟು ಅಕ್ಷಂತಿ: ಮಾಧ್ವ ಬ್ರಾಹ್ಮಣರು ತಲೆಗೆ ಹಚ್ಚುವ ಬಿಂದಿ! ಅಂಗಾರ: ಗುಡಿಯಲ್ಲಿ ಕೊಡುವ ಭಸ್ಮ ಅಂವ: ಆತ ಆ: ಆಕಿ: ಅವಳು ಆಜೂಬಾಜೂ: ಅಕ್ಕಪಕ್ಕ ಇ: ಇಯತ್ತೆ: ಶಾಲೆಯಲ್ಲಿಯ ವರ್ಗ ಉ: ಉಡಸಾರಣಿ: ಪೂಜೆಯ ನಂತರದ ದೇವರ ಪೂಜೆಯ ಸಾಮಾನುಗಳು ಉಡಾಳ: ತುಂಟ ಉತ್ತತ್ತಿ: ಒಣ ಖರ್ಜೂರ ಉಲಕೋಚಿ: ತುಂಟ ಉಳ್ಳಾಗಡ್ಡಿ: ಈರುಳ್ಳಿ ಉಂಡಿ: ಲಡ್ಡು, ಲಾಡು ಎ: ಎಬ್ಬಂಕ: ಪೆದ್ದ ಒ: ಒಬ್ಬಿ: ಕಂತು (ಒಂದ್ ಒಬ್ಬಿ ಇಡ್ಲಿ ತಿನ್ನು) ಓ: ಓಣಿ: ಅಡ್ಡರಸ್ತೆ ಕ: ಕಟಕ: ಬಿರುಸು (ಉದಾ: ಕಟಕ ರೊಟ್ಟಿ) ಕಡಗಿ: ಮುಟ್ಟು (menstruation) ಕದ: ಬಾಗಿಲು ಕರದಂಟು: ಒಣಹಣ್ಣು ಮತ್ತು ತಿನ್ನುವ ಅಂಟು ಹಾಹಿ ಮಾಡಿದ ಸಿಹಿ, ಗೋಕಾಕಿನ ಸ್ಪೇಷಲ್! ಕಾಲ್ಮಡಿ: ಮೂತ್ರವಿಸರ್ಜನೆ ಕಾಲ್ಮರಿ: ಚಪ್ಪಲಿ ಕಾಕಡಾ: ಕನಕಾಂಬರ ಕಾಕಾ: ತಂದೆಯ ಅಣ್ಣ ಅಥವಾ ತಮ್ಮ ಕಾಕು: ತಂದೆಯ ಅಣ್ಣ ಅಥವಾ ತಮ್ಮನ ಹೆಂಡತಿ ಕುಟ್ರಿ: ಗುಡ್ಡೆ ಕುಬಸ: ರವಿಕೆ, ಬಸುರಿಯಾದಾಗ ಹೆಣ್ಣಿಗೆ ಮಾಡುವ ಆತಿಥ್ಯ = ಸೀಮಂತ ಕುಂದಾ: ಒಂದು ಬಗೆಯ ಹಾಲಿನ ಸಿಹಿ, ಬೆಳಗಾಂವಿಯ ಸ್ಪೇಷಲ್! ಖ: ಖಜ್ಜೂರಿ: ಖರ್ಜೂರ ಖರೆ: ನಿಜ ಖಂಗ: ??, ಭಾರಿ ಖಂಗ ಇದ್ದಾನ ಖಾನೆ: ವಿಭಾಗ ಖೊಳಮಿಸುವುದು: ತುಂಬ urgent ಆಗುವುದು ಖೋಲಿ: ಕೋಣೆ ಗ: ಗಡಾನ: ಬೇಗ ಗಪ್ಪು: ಸುಮ್ಮನೆ ಗಿರಮಿಟ್ಟು: ಏನೇನೋ ಹಾಕಿ ಗಿರಿಗಿರಿ ತಿರುಗಿಸಿ ಮಾಡಿದ ಚುರುಮುರಿ ಗುಡಿ: ದೇವಸ್ತಾನ ಗುಡಿಗಿ: trousers ಗುಂಡುಪೊಂಗ್ಳು: ಪಡ್ಡು, ದೋಸೆ ಹಿಟ್ಟಿನಲ್ಲಿ ಮಾಡುವ ತಿನಿಸು ಚ: ಚಷ್ಮಾ: ಕನ್ನಡಕ ಚರಿಗಿ: ತಂಬಿಗೆ ಚಾದರ: ಹೊದಿಕೆ ಚಾಳೀಸು: ಕನ್ನಡಕ ಚಾವಿ: ಬೀಗದ ಕೈ ಚಿಕ್ಕು: ಸಪೋಟ ಚಿಮಣಿ ಎಣ್ಣೆ: ಸೀಮೆ ಎಣ್ಣೆ ಚಿಟ್ಟಾ: ಬೀಡಿ ಚುರುಮುರಿ: ಮಂಡಕ್ಕಿ: ಮಂಡಾಳ ಚೊಲೊ: ಒಳ್ಳೆಯವ. ಚೌರಿ: ಕೃತಕ ಕೂದಲು ಛ: ಛೊಲೊ: ಒಳ್ಳೆಯವ. ಜ: ಜಡ್ಡು:ರೋಗ ಜನಿವಾರ: ಯಜ್ನೋಪವೀತ ಜರ್-ಕರ್ತಾ: ಒಂದು ವೇಳೆ ಜಳಕ: ಸ್ನಾನ ಜಾವಳ: ಮಗುವಿನ ಮೊದಲ ಚೌರ ಜುಲುಮಿ: ಒತ್ತಾಯ ಟ: ಟಿಕಳಿ: ಬಿಂದಿ ಟೊಪಿಗಿ: ಟೋಪಿ ಡ: ಡರಿ:ತೇಗು ಡರಿಕೆ: ತೇಗು ಡಾಣಿ: ಸೇವು ಇತ್ಯಾದಿ ತ: ತಡಿ: ತಾಳು ತರುಬು: ನಿಲ್ಲಿಸು ತಳಗ: ಕೆಳಗೆ ತಂಬಿಗಿ ತೊಗೊಂಡು ಹೋಗೂದು: ಮಲವಿಸರ್ಜನೆ ಕಾರ್ಯ ತಂಬು: ಟೆಂಟು ತಿಂಡಿ: ಕೆರೆತ ತುಟ್ಟಿ: ದುಬಾರಿ ತೋಂಡಿ: ಮೌಖಿಕ ಪರೀಕ್ಷೆ, oral exam, viva ದ: ದಮ್: ತಾಳು (ಬಿಜಾಪುರದ ಕಡೆ) ಧ: ಧಾಬಡಿ: ಒಂದು ತರಹದ ಪಂಚೆ, ಬ್ರಾಹ್ಮಣರ ಮಡಿಗೆ ಒದಗುವ shortcut ಬಟ್ಟೆ ಧೋತರ: ಉದ್ದ ಬಿಳಿ ಪಂಚೆ ನ: ನಪಾಸು: ಫೇಲು ನಳ: ನಲ್ಲಿ ಪ: ಪಟಕಾ, ಪಟಗಾ: ಪೇಟಾ ಪಟ್ಟಾ: ಬೆಲ್ಟು ಪಡಸಾಲಿ: drawing room ಪಡ್ಡು: ಗುಂಡುಪೊಂಗ್ಳು, ದೋಸೆ ಹಿಟ್ಟಿನಿಂದ ಮಾಡಿದ ತಿನಿಸು ಪರಕಾರ: ಲಂಗ ಪಲ್ಲಂಗ: ಮಂಚ ಪಂಚೇತಿ: ಫಜೀತಿ ಪಾತೇಲಿ: ಪಾತ್ರೆ ಪಾಳಿ: ಸರತಿ ಪಾಂಟಣಿಗೆ: ಮೆಟ್ಟಿಲು ಪಿಂಚಣಿ: ಪೆನ್ಶನ್ ಪುಟಾಣಿ: ಹುರಿಗಡ್ಲೆ ಪುಠಾಣಿ: ಹುರಿಗಡ್ಲೆ ಪೇರುಹಣ್ಣು: ಪೇರಲೆಹಣ್ಣು, ಸೀಬೆಹಣ್ಣು ಫ: ಫರಾಳ: ಫಲಾಹಾರ, tiffin, breakfast ಫಳಾರ: ಫಲಾಹಾರದ shortform! ತಿಂಡಿ, tiffin, breakfast ಬ: ಬಕ್ಕಣ: ಜೇಬು ಬಟಾಟಿ: ಆಲೂಗಡ್ಡೆ ಬಯಲಕಡಿ: ಮಲವಿಸರ್ಜನೆ ಬಾಕು: ಬೆಂಚು ಬಾನಾ: ದೇವರಿಗೆ ಕೊಡುವ ಎಡೆ ಬ್ರಾಮ್ರು: ಬ್ರಾಹ್ಮಣರು ಬೆಸ್ತಾರ: ಬೆಸ್ತರ ವಾರ = ಗುರುವಾರ ಬ್ಯಾನಿ: ರೋಗ ಭ: ಭಕ್ಕರಿ: ಜೋಳದ ರೊಟ್ಟಿ ಭಾಂಡಿ: ಪಾತ್ರೆ ಭಿಡೆ: ಸಂಕೋಚ (ಮಹಾರಾಷ್ಟ್ರದಲ್ಲಿ ಭೀಡೆ ಅಂತ ಅಡ್ಡಹೆಸರು ಇದೆ) ಮ: ಮನಗಂಡ: ಬೇಕಾದಷ್ಟು ಮನೂಕ: ಒಣ ದ್ರಾಕ್ಷಿ ಮಳ್ಳ: ಮರುಳ ಮಾರಿ: ಮುಖ ಮಾಸ್ತರ: ಗುರುಗಳು (master ಮಾಸ್ತರ ಆಗಿರಬೇಕು) ಮಾಳಿಗಿ: ಮೇಲ್ಚಾವಣಿ ಮುತ್ತ್ಯಾ: ತಾತ, ಅಜ್ಜ ಮಂಡಕ್ಕಿ: ಮಂಡಾಳ: ಚುರುಮುರಿ ಮಂಡಾಳ: ಮಂಡಕ್ಕಿ: ಚುರುಮುರಿ ಮಂಡಿಗೆ: ಉತ್ತರ ಕರ್ನಾಟಕದ ಬ್ರಾಹ್ಮಣರ ಮದುವೆ ಈ ಸಿಹಿಯಿಲ್ಲದೇ ಪೂರ್ತಿಯಾಗುವುದಿಲ್ಲ. ಮಾಂಶಿ: ತಾಯಿಯ ಅಕ್ಕ ಅಥವಾ ತಂಗಿ ಮುಸಡಿ: ಮುಖ ಮುಂಜವಿ: ಉಪನಯನ ಮುಂದ?: ಮಾತಾಡುವಾಗ "ಆಮೇಲೆ?" ಅನ್ನುತ್ತಾರಲ್ಲ, ಹಾಗೆ ಮೋಗಂ: ಹಾಗೇ, ಸುಮ್ನೇ, ಯ: ಯಾಂಬಲ್: ಯಾವನು ಬಲ್ಲ ರ: ರಕರಕ: ಕಿರಿಕಿರಿ ರಗಡ: ಬೇಕಾದಷ್ಟು ರವಿವಾರ: ಭಾನುವಾರ ರಸಕಸಿ: ಮನಸ್ತಾಪ ರೊಕ್ಕ: ಹಣ ಲ: ಲಗು: ಬೇಗ ಲಠ್ಠ: ದಪ್ಪ ಲುಂಗಿ: ಬಣ್ಣದ ಪಂಚೆ ಲೋಟ: ಗ್ಲಾಸು ವ: ವಗ್ಗರಣಿ: ವಗ್ಗರಣೆ ಹಾಕಿದ ಅವಲಕ್ಕಿ ವಸ್ತ: ವಡವೆ ವೈನಿ: ಅತ್ತಿಗೆ ಸ: ಸಜ್ಜಿಗಿ: ಬೆಲ್ಲ ಮತ್ತು ರವೆ ಹಾಹಿ ಮಾಡಿದ ತಿಂಡಿ ಸಬಕಾರ: ಸೋಪು ಸರs: ಸಾರ್! ಸವುಡು: ಬಿಡುವು ಸಸಾ: ಸರ್ವೇ ಸಾಧಾರಣ/ಸಾಮಾನ್ಯದ shortform, on an average ಸಂಡಾಸ: ಮಲವಿಸರ್ಜನೆ, lavatory ಸಾಬಾಣ: ಸಬಕಾರ, ಸೋಪು ಸಾರು: ರಸಂ ಸೂಟಿ: ರಜೆ ಸೆಲ್ಲೆ: ವಯ್ಯಾರ ಸೈಲ: ಸಡಿಲು ಸೋವಿ: ಅಗ್ಗ ಶ: ಶ್ಯಾಣ್ಯಾ: ಜಾಣ ಶಿಕೋಣಿ: tution ಶಿರಾ: ಕೇಸರಿಭಾತು ಶೆಂಗಾ: ನೆಲಗಡಲೆ, ಹ: ಹತ್ತೀಲೆ: ಹತ್ತಿರ ಹಡಿ: ಹೆರು ಹಪಾಪಿ: ಆಸೆಬುರುಕ ಹವಣಿ: ಮಧ್ಯ, ಹೆಚ್ಚೂ ಇಲ್ಲದ, ಕಡಿಮೆಯೂ ಇಲ್ಲದ ಹಂಗ: ಹಾಗೇ ಹಂಗಾರ: ಹಾಗಾದರೆ ಹರ್ಯಾಗೆ: ಬೆಳಿಗ್ಗೆ ಹಂಗಂದ್ರ: ಹಾಗೆ ಹೇಳಿದರೆ ಹಂತೇಕ: ಹತ್ತಿರ ಹ್ಯಾಂವ: ಛಲ, ಕಿಚ್ಚು ಹಿಂದಾಗಡೆ: ಆಮೇಲೆ ಹುರುಹುರು: ಸಮಾಧಾನವಿಲ್ಲದಿರುವುದು ಹುಳಿ: ಸಾಂಬಾರ್ ಹೊಯ್ಕೊ: ಬಾಯ್ ಬಾಯ್ ಬಡಕೊ, ಮಂಗಳೂರ್ ಕಡೆ - ಸ್ನಾನ ಮಾಡು ಹೌಸು: ಉತ್ಸಾಹ ಹೌರಗ: ನಿಧಾನವಾಗಿ

ಝಾಕಣಿ: ಪಾತ್ರೆಯ ಮೇಲೆ ಮುಚ್ಚುವ ಪ್ಲೇಟು