
ಹದಿನಾಕರ ಹರಯದಲ್ಲಿ ಪ್ರೇಮಿಸಿದ್ದ
ಹುಡುಗನನ್ನು ನನ್ನ ನಲವತ್ತೈದನೇ ವಯಸ್ಸಿಗೆ
ಮದುವೆಯಾದ ರಾತ್ರಿ
ಅವನ ಕಿವಿಯಲ್ಲಿ ಪಿಸುಗುಟ್ಟಿದೆ
"ನೀನೇ ನನ್ನ ಮೊದಲ ಮತ್ತು ಕೊನೆಯ ಪ್ರೇಮಿ"
ಆತ ಖುಷಿಯಲ್ಲಿ ಕರಗಿಹೋದ
ನಡುವೆ ಬಂದು ಹೋದವರ ಲೆಕ್ಕ
ನಾನೂ ಹೇಳಲಿಲ್ಲ

| Reactions: |

| Tumba chennagide nimma ee lekhana. Namage ee kalada computer jagatthina arivu maadikottide. Nammannu nodi namma appa amma enu andukolluthidro adanne navu eega namma makkalannu nodi andkollabeku. Ennu enenalla developments aagodidyo?!!... | |||
|
| | |||
| iddakkella moola karana, namma earning/ belongings bagge namage halabara hage trupti/abhimana/santosha villa. Ellaru duddina hinde oduvadagide. Relative manege hogonavendere gadi charge bagge yochane madutteve. navu yarigoo duddanthu manasare keduvadilla , swalpa time adaru koduva. Madhav Kulkarni... | |||
| |||
| | |||
| ನಿಮ್ಮ ಲೇಖನದ ಆತ೦ಕ ನನಗೆ ಅರ್ಥವಾಗುತ್ತದೆ.ಆದರೆ ಮನಸ್ಸು ಮಾಡಿದರೆ ಮಾತ್ರ ಈಗಲೂ ಎಲ್ಲ ಸೂಕ್ಷ್ಮ ನ೦ಟುಗಳೂ ಕೌಟು೦ಬಿಕ ನೆಲೆಯಲ್ಲಿ,ಮಾನವೀಯ ನೆಲೆಯಲ್ಲಿ ಉಳಿಯಲು ಸಾಧ್ಯವಿದೆ.ಮೊಬೈಲ್-ಕ್೦ಪ್ಯೂಟರ್ ಗಳ ಹಿತ-ಮಿತ ಬಳಕೆಯನ್ನು ಮಕ್ಕಳ ಅರಿವಾಗಿಸುವ ಪ್ರೀತಿಯ ತೀವ್ರತೆ ಮೊದಲು ನಮ್ಮಲ್ಲಿ ಮೊಳೆಯಬೇಕು.ಸ್ನೇಹ-ಸೌಹಾರ್ದದ ನಡವಳಿಕೆಯ ಮು೦ದುವರಿಕೆಗೆ ಕಾಲ ಇನ್ನೂ ಮಿ೦ಚಿ ಹೋಗಿಲ್ಲ. -ಜ್ಯೋತಿ ಗುರುಪ್ರಸಾದ್.... | |||
| |||
|
| | |||
| ದೇಶಕಾಲ ೧೪ನೇ ಸ೦ಚಿಕೆಯಲ್ಲಿ ವಸುಧೇ೦ದ್ರ ಬರೆದ ಕ್ಷಮೆಯಿಲ್ಲದೂರಿನಲಿ ಕಥೆ ನೆನೆಪಾಯಿತು. ಇದು ಕ೦ಪ್ಯೂಟರ್ ಸ೦ಪರ್ಕವೇ ಇಲ್ಲದ ಬಡ ದೂಮಪ್ಪ/ಬೋರಣ್ಣನನ್ನೂ ಸುತ್ತುವರಿಯುತ್ತಿರುವ ವಾಸ್ತವ. ಜಿ೦ಕೆ ಸುಬ್ಬಣ್ಣ, ಪುತ್ತೂರು.... | |||
| |||
| | |||
| indina yugada durantada bagge first hand anubhava chennagi barediddeerri...idu eeega ella deshagala kandubaruva idannu globalization syndrome ennabahudeno! nice article. uma... | |||
| |||
| | |||
| ಹೌದು ಈಗ ತ೦ದೆ ತಾಯಿ ಇಬ್ಬರಿಗೂ ಬಿಡುವಿಲ್ಲ, ಮಕ್ಕಳ ಜೊತೆ ಇರಲು...ತೀರಾ ಚಿಕ್ಕವಯಸ್ಸಿನ ಮಕ್ಕಳನ್ನು ಬಿಟ್ಟರೆ ಸ್ವಲ್ಪ ದೊಡ್ದ ಮಕ್ಕಳೆಗೂ ಮನಸಿಲ್ಲ, ತ೦ದೆ ತಾಯಿಯರ ಜೊತೆ ಕುಳಿತು.... ಕಥೆ ಕೇಳುತ್ತಾ ತಿನ್ನುವ ಅಮ್ಮನ ಕೈ ತುತ್ತು, ಸಣ್ಣ ಸ್ವರದಲ್ಲಿ ಅಮ್ಮನ ಜೊಗುಳ ಕೇಳುತ್ತಾ, ಅಮ್ಮನ ಕೈ ನಿಧಾನವಾಗಿ ಹಾಡಿಗೆ ತಾಳದ೦ತೆ ತಟ್ಟುತ್ತಿದ್ದರೆ, ಸುಖವಾಗಿ ಕನಸು ಕಾಣುತ್ತಾ ನಿದ್ದೆಗೆ ಜಾರುವ ಸುಖದಿ೦ದ ವ೦ಚಿತರು ಈ ಮೊಬೈಲ್, ಲ್ಯಾಪ್ ಟಾಪ್ ಯುಗದ ನತದ್ರುಷ್ಟ ಮಕ್ಕಳು.... ಎಲ್ಲಾ ನಮ್ಮದೇ ತಪ್ಪು............. | |||
| |||
| | |||
| ನಿನ್ಟೆಂಡೋ ಡಿ ಎಸ್ ಅಂದ್ರೆ ಏನು ಸಾರ್?... | |||
| |||
|
| | |||
| ಇದೆಲ್ಲ ನಾವೇ ಮಾಡಿಕೊ೦ಡಿದ್ದು. ಸ೦ಬ೦ಧಕ್ಕಿ೦ತಲೂ ಕಾ೦ಚಾಣ ಹೆಚ್ಚೆ೦ದು ದ್ವಿಪಗಳಾದ ಸ೦ಸಾರ ನಮ್ಮದು. ನಮ್ಮ ಮಕ್ಕಳ ಈ ಸ೦ಸ್ಕೃತಿಗೆ ನಾವೇ ಕಾರಣರು. ವಾದಿರಾಜ... | |||
| |||
| | |||
| ಕುಲಕರ್ಣಿ ಸರ್, ನಿಮ್ಮ ಹೊಸ ಲೇಖನ ಓದಿ ವಾಸ್ತವದ ನಿಜ ಸ್ಥಿತಿ ಅರಿವಾಯಿತು.....ನನಗೂ ಸ್ವಲ್ಪ ನಿಮ್ಮ ಲೇಖನದ ಹಾಗೆ ಆಗಿದೆಯೇನೋ ಅನ್ನಿಸಿತು.....ಹಳೆಯ ಅನುಭವಿಸಿ ಮಾಡುವಂತವನ್ನು ನೆನಪಿಸಿದ್ದೀರಿ....ಥ್ಯಾಂಕ್ಸ್....ನಿಜಕ್ಕೂ ಒಳ್ಳೆಯ ಬರಹ.... ಆಹಾಂ! ನನ್ನ ಬ್ಲಾಗಿನಲ್ಲಿ ನನ್ನ ಹಳೆ ಮನೆಯ ನೆನಪುಗಳುಮ್, ಮತ್ತು ಹೊಸ ಮನೆಯ ಕನಸುಗಳು...ಎಂಬ ಚಿತ್ರ-ಲೇಖನವಿದೆ....ಬಿಡುವು ಮಾಡಿಕೊಂಡು ಬನ್ನಿ.....ನಿಮ್ಮ ಪ್ರತಿಕ್ರಿಯೆ ತಿಳಿಸಿ...ಥ್ಯಾಂಕ್ಸ್........ | |||
| |||
| | |||
| ನಾವು ಊಟಮತ್ತು ವಾಕಿಂಗ್ನಲ್ಲಿ ಜತೆಯಾಗಿರ್ತೇವೆ.ಆದರೆ ಗಂಡ ಪೇಪರ್ ಓದಿದರೆ ಹೆಂಡತಿ ಬ್ಲಾಗ್ ಓದುವುದು. ಅನಾಮಿಕ... | |||
| |||
| | |
| ಕುಲಕರ್ಣಿ ಅವರೇ! ತಮ್ಮ ಲೇಖನ ಓದಿ ಖುಷಿ ಆಯಿತು. ನಾವು ಇಂದು ವರ್ಲ್ಡ್ ಕ್ಲಾಸ್ ಪೇರೆಂಟ್ಸ್ ಹಾಗೂ ನಮ್ಮ ಮಕ್ಕಳು ವರ್ಡ್ ಕ್ಲಾಸ್ ಚಿಲ್ಡ್ರನ್! ಇದಕ್ಕಿಂತ ಹೆಚ್ಚಿಗೆ ಹೇಳಲು ಗೊತ್ತಾಗ್ತಾಇಲ್ಲ! ವಂದನೆಗಳು - ಪೆಜತ್ತಾಯ ಎಸ್. ಎಮ್. .... | |
| Reactions: |
| Reactions: |
೨೦೦೫ರಲ್ಲಿ, ಲಂಡನ್ನಿನ ಮನೆ ಹತ್ತಿರದ ಲೈಬ್ರರಿನಲ್ಲಿ ಭಾರತೀಯರು ಬರೆದಿರುವ ಕಾದಂಬರಿ ಹುಡುಕುವಾಗ ವಿಕಾಸ್ ಸ್ವರೂಪ್ ಬರೆದ "Q & A" ಕಣ್ಣಿಗೆ ಬಿತ್ತು, ಮೂರು ದಿನದಲ್ಲಿ ಓದಿ ಮುಗಿಸಿದೆ, ಮೂರು ಕ್ಷಣದಲ್ಲಿ ಮರೆತೂ ಬಿಟ್ಟಿದ್ದೆ, ಅಷ್ಟು ಚೆನ್ನಾಗಿದೆ ಆ ಕಾದಂಬರಿ. ಹಿಂದಿ ಸಿನೆಮಾದ (ಯಾಕೋ ನನಗೆ ಬಾಲಿವುಡ್ ಪದ ಸರಿ ಅನಿಸುವುದಿಲ್ಲ) "ಅಮರ್ ಅಕ್ಬರ್ ಅಂತೋನಿ" ತರಹ ಕಾದಂಬರಿಯ ನಾಯಕನ ಹೆಸರು "ರಾಮ್ ಮಹಮ್ಮದ್ ಥಾಮಸ್" ಎಂದು ಶುರುವಾದಾದಲೇ ಈ ಕಾದಂಬರಿಯ ಬಣ್ಣ ಗೊತ್ತಾಗಿಹೋಗುತ್ತದೆ. ಕನ್ನಡದ "ರಾಗಸಂಗಮ"ದಲ್ಲಿ ಬರುತ್ತಿದ್ದ ಕಾದಂಬರಿಗಳಿಗಿಂತ ಇದು ಭಿನ್ನವಾಗೇನೂ ಇಲ್ಲ. "ಸ್ಲಂಡಾಗ್ ಮಿಲಿಯನೇರ್" ಸಿನೆಮಾದ ಹಸಿ ಹಸಿ ಸುದ್ದಿಗಳು ಹೊರಬರುತ್ತಿದ್ದಾಗ ಗೊತ್ತಾದದ್ದು, ಈ ಸಿನೆಮಾ ಆ ಕಾದಂಬರಿಯ ಆಧಾರಿತ ಎಂದು! ಭಾರತೀಯ ಭಾಷೆಗಳಲ್ಲಿ ಬಿಡಿ, ಇಂಗ್ಲೀಷಿನಲ್ಲೇ ಭಾರತೀಯರು ಇದಕ್ಕಿಂತ ಚೆನ್ನಾಗಿರುವ ಕಾದಂಬರಿಗಳನ್ನು ಬರೆದಿರುವಾಗ, ಹೋಗೀ ಹೋಗೀ ಇಂಥ ಕಳಪೆ ಕಾದಂಬರಿಯನ್ನು ಆಧರಿಸಿ ಹಾಲಿವುಡ್‍ನವರು ಭಾರತದ ಬಗ್ಗೆ ಮಾಡಿದ ಸಿನೆಮಾ ಇಷ್ಟೊಂದು ಸುದ್ದಿ ಮಾಡುತ್ತಿದೆಯಾ ಎಂದು ಆಶ್ಚರ್ಯವಾಯಿತು. | Yes true the movie did not show the western pedophiles roaming and hunting slum kids, & also the illicit organ trade rackets operating in India using the same kids. This part of the story was specifically omitted. anyways the happiest thing about the movie is the three well deserved oscars for Indians esp AR RAHAMAN & his Music and a superb screenplay, and story telling. kritik who can deny that?... | |||
|
| | |||
| nija----kanri. SUBBARAO KODAPADI... | |||
| |||
| | |||
| ಒಂದು ದೇಶದ ಬಗ್ಗೆ ಎಲ್ಲಾ ತಿಳಿದವರ ಹಾಗೆ ಬರೆಯುವ ಹೊರಗಿನವರ ಬಗ್ಗೆಯಾಗಲೀ, ಒಳಗಿನವರದೇ ಅಜ್ಞಾನದ ಬಗ್ಗೆಯಾಗಲಿ ಅಷ್ಟು ತಲೆಕೆಡಿಸಿಕೊಳ್ಳಬೇಕಿಲ್ಲ ಕೇಶವ್. ನಮ್ಮನ್ನು ಉತ್ತಮಪಡಿಸಿಕೊಳ್ಳುವುದರ ಬಗ್ಗೆ ಸಲಹೆ ಇದ್ದರೆ ಅದನ್ನು ಕೇಳುವುದರಿಂದ ಕಳೆದುಕೊಳ್ಳುವುದೇನಿಲ್ಲ. ಆದರೆ ಸುಮ್ಮನೇ ಕೆಣಕಲು ಅಥವಾ ಅಜ್ಞಾನದಿಂದ ಮಾಡುವ ಟೀಕೆಯನ್ನು ಎಂಜಾಯ್ ಮಾಡುವುದು ಆರೋಗ್ಯಕರ. ಅವರ ಅಜ್ಞಾನ ನೀಗಲಿ ಎಂದು ಹಾರೈಸಬಹುದು ಬೇಕಿದ್ದರೆ. ಕೆ.ಟಿ.ಗಟ್ಟಿಯವರ ಒಂದು ಕಾದಂಬರಿ (ಅರಗಿನ ಮನೆ-೧೯೮೩ರಲ್ಲಿ ಬರೆದಿದ್ದು ಅಂತ ನೆನಪು)ಯಲ್ಲಿ ಇಥಿಯೋಪಿಯಾದ ಜನರಿಗೆ ಭಾರತದ ಬಗ್ಗೆ ಇದ್ದ ಮೂಢನಂಬುಗೆಗಳನ್ನು ಓದಿದರೆ ನಗುಬರುತ್ತದೆ, ಸ್ವತಃ ಅಧಃಪತನದಲ್ಲಿದ್ದ ದೇಶದ ಧಾರ್ಷ್ಟ್ಯದ ಬಗ್ಗೆ. ನಿಮ್ಮ ಲೇಖನ ಓದಿದಾಗ ನೆನಪಗಿದ್ದು ಅದೇ. - ನರೇಂದ್ರ ಪೈ... | |||
| |||
| | |||
| ಕೇಶವ, ಇದ್ದದ್ದನ್ನು ಇದ್ದಂತೆ ಹೇಳಿದ್ದೀರಿ, ಅಭಿನಂದನೆಗಳು. ಬಿಳಿಯರಿಗೆ ಹಾಗೂ ಕೆಲವು ಕರಿಯರಿಗೆ ದೃಷ್ಟಿದೋಷವಿದ್ದದ್ದು ಸುಳ್ಳಲ್ಲ.... | |||
| |||
| | |||
| ಕುಲಕರ್ಣಿಯವರೇ, ಈ ದೇಶದ ಮಣ್ಣಿನಿಂದಲೇ ಹುಟ್ಟಿದ ಗಾಂದಿಯ ಬಗ್ಗೆ ಒಂದು ಒಳ್ಳೆಯ ಚಿತ್ರ ಮಾಡಿದ್ದು ಬಾರತೀಯರಲ್ಲ. ಇದು ಸತ್ಯವಲ್ಲವೇ? ಭಾರತದ ಬಹುಸಂಖ್ಯಾತ ನಗರಗಳಲ್ಲಿ ಹರಡಿರುವ ಸ್ಲಂಗಳ ಭಯಂಕರ ಪರಿಸ್ಥಿತಿಯನ್ನು ಸ್ಲಂಡಾಗ್ ಚಿತ್ರಿಸಿದೆ. ಆ ರೀತಿಯ ಚಿತ್ರವನ್ನು ಭಾರತೀಯರು ಮಾಡಿಲ್ಲ ಎನ್ನುವುದು ಸತ್ಯವಲ್ಲವೆ? ಅದನ್ನು ಭಾರತೀಯರು ಮಾಡಿದ್ದರೆ, ಇಷ್ಟೊಂದು ಚರ್ಚೆ ನಡೆಯುತ್ತಿತ್ತೆ? ನನಗಂತೂ ಅನುಮಾನ. ಹಿಂದೆ ಕನ್ನಡದಲ್ಲಿ ದೇವಿರಿ ಬಂತಲ್ಲ. ಅದರಲ್ಲೂ ಸ್ಲಂನ ನರಕವೇ ಚಿತ್ರಣವಾಗಿದೆ. ಯಾವ ಅನುಭವ ಯಾರಿಗೆ ದಕ್ಕುತ್ತದೆಯೋ ಅವರು ಅದನ್ನು ಕಲೆಯಾಗಿ ಅಭಿವ್ಯಕ್ತಿಸುತ್ತಾರೆ. ಪ್ರತಿಭೆಗೆ ಕರಿಯ ಬಿಳಿಯ ಎಂಬ ಬೇಧವಿದೆಯೇ? ಬರಾಕ್ ಒಬಾಮ ಅಧ್ಯಕ್ಷರಾದ ದಿನ ಭಾರತೀಯ ಮಾಧ್ಯಮಗಳೇ ಹೆಚ್ಚಾಗಿ ಕರಿಯ ಅಧ್ಯಕ್ಷ ಎಂಬುದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು ಸುಳ್ಳಲ್ಲ. ಚಿತ್ರ ಇಷ್ಟವಾದರೆ ನೋಡೋಣ. ಮಾಡಿದವರ ಬೆನ್ನು ತಟ್ಟೋಣ. ಇಷ್ಟವಾಗಲಿಲ್ಲ ಸುಮ್ಮನಾಗೋಣ. .... ಡಾ. ಬಿ,ಆರ್. ಸತ್ಯನಾರಾಯಣ... | |||
| |||
| | |||
| ಸ್ಲಮ್ ಡಾಗ್ ಸಿನೆಮಾಕಿ೦ತ ಮೊದಲು ನಮ್ಮ ಭಾರತೀಯ ನಿರ್ದೇಶಕರಿ೦ದ ಸಲಾಮ್ ಬಾ೦ಬೆ ಚಿತ್ರ, ಸತ್ಯಜಿತ್ ರಾಯ್ ಅವರ ಹಲವಾರು ಚಿತ್ರಗಳು, ನಮ್ಮ ಕನ್ನಡದ ಗಿರೀಶ ಕಾಸರವಳ್ಳಿಯವರ ಮತ್ತು ಕೆರ್ ಆಫ್ ಫುಟಪಾತ್ ಚಿತ್ರಗಳಲ್ಲಿ ಸ್ಲಮ್ ಜೀವನದ ಕಥೆ ವ್ಯಥೆಯನ್ನು ಮನಸ್ಸಿಗೆ ತಾಗುವ ರೀತಿಯಲ್ಲಿ ನಿವೇದಿಸಿದ್ದಾರೆ. ಇದೂ ಯಾರ ಕಣ್ಣಿಗೂ ಬೀಳುವದಿಲ್ಲಾ. ಪರ೦ಗಿ ಜನರು ಕಲ್ಲು ಮುಟ್ಟಿದರು ಚಿನ್ನ. ನಿನ್ನ ಭಾಷೆಯಲ್ಲೆ ಹೇಳುವದಾದರೆ ಪರ೦ಗಿ ಜನರ ಉಚ್ಚೆಯೂ ನಮಗೆ ತೀರ್ಥ. ನಮಗೆ ಯಾವಾಗ ನಮ್ಮತನವು ಜಾಗೃತವಾಗುತ್ತದೋ ಆ ದೇವನೇ ಬಲ್ಲ. ವಾದಿರಾಜ ಕುಲಕರ್ಣಿ... | |||
| |||
| | |||
| ಕಿಶೋರ್ ಧಮನೀಕರ್, ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಅನುವಾದಿಸಿರುವುದು, ನೀವು ಬರೆದಂತೆ, ನಿರ್ಪಾಲ್ ಧಾಲಿವಾಲನ ಮಾತುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂಗ್ಲಂಡಿನಲ್ಲಿ ಹುಟ್ಟಿ ಬೆಳೆದಿರುವ ಭಾರತೀಯ ಉಪಖಂಡದ ಜನರು ಭಾರತೀಯರೋ ಅಥವಾ ಪಾಕಿಸ್ತಾನಿಗಳೋ ಅಥವಾ ಶ್ರೀಲಂಕದವರೋ ಅಲ್ಲ, ಅವರೆಲ್ಲ ಬ್ರಿಟಿಷ್ ಏಶಿಯನ್ಸ್. ಇಲ್ಲಿನ ಬ್ರಿಟಿಷ್ ಏಶಿಯನ್ಸ್‍ಗಳಲ್ಲಿ undercurrentಆಗಿ ಒಂದು ತರಹದ superiority complex ಇರುವುದು (ಎಲ್ಲರೂ ಅಲ್ಲ, and I dont want to generalise) ನನ್ನ ಅನಿಸಿಕೆ. ನಾನಿಲ್ಲಿ ಬರೆದಿರುವುದು ಅಂಕಣಕಾರನಾಗಿ. ನನ್ನ ಅಭಿಪ್ರಾಪವನ್ನು ಇಲ್ಲಿ ಮಂಡಿಸಲು ಆ ಲೇಖನದ ಕೆಲ ಭಾಗವನ್ನು quote ಮಾಡಿದ್ದೇನೆ, ಅಷ್ಟೇ! ಹಾಗೆ ನೋಡಿದರೆ ಯಾವ ಪತ್ರಿಕೆಯೂ ಸುದ್ದಿಗಳ ಹೊರತಾಗಿ ಮತ್ತೆಲ್ಲವನ್ನೂ ಅದು ಬರಹಗಾರನ ಮಾತು ಎಂದೇ ಹೇಳುತ್ತವೆ; ಆದರೆ ಪ್ರಕಟಿಸುವ ಮೊದಲು, ಸಂಪಾದಕ ಮಂಡಲಿ ಇರುತ್ತದಲ್ಲವೇ? ಈಗ ನಾನು ಕೆಂಡಸಂಪಿಗೆಯಲ್ಲಿ ಅಂಕಣಕಾರನಾಗಿ ಬರೆದರೂ, ನನ್ನ ಬರಹ ಸಂಪಾದಕ ಮಂಡಲಿಯನ್ನು ದಾಟಿ ತಾನೆ ಪ್ರಕಟವಾಗಬೇಕು, ಇಲ್ಲದಿದ್ದರೆ, ನನ್ನ ಬ್ಲಾಗಿನಲ್ಲಿ ಯಾರಿಗೂ ಕಾಯದೇ ಪ್ರಕಟಿಸಲು ಬರುತ್ತದಲ್ಲ! ಪಶ್ಚಿಮದಲ್ಲಿರುವ ನಾನು ಇಲ್ಲಿ ನಾನು ಪಶ್ಚಿಮದ ನಿಂದನೆಯಲ್ಲಿ ತೊಡಗಿಲ್ಲ; ಆದರೆ ಒಂದು ಸಿನೆಮಾ ಪಾಲಿಟಿಕಲಿ ಯಾವ ಯಾವ ಮಟ್ಟ ಮುಟ್ಟಬಹುದು ಎಂದು ನನ್ನ ಅಭಿಪ್ರಾಯ ಮಂಡಿಸಿದ್ದೇನೆ. ಉಳಿದ ಪತ್ರಿಕೆಗಳಲ್ಲಿ ನೇರವಾಗಿ ಈ ಮಾತುಗಳನ್ನು ಹೇಳಿಲ್ಲ, ಆದರೆ googleನಲ್ಲಿ ಹುಡಿಕಿ, ಈವರೆಗೆ ಬಂದ ಎಲ್ಲ ಬರಹಗಳನ್ನು ಒಟ್ಟು ಹಾಕಿ ಓದಿದರೆ, ನನಗೆ ಹೀಗೆ ಅನಿಸಿತು, ಅದನ್ನೇ ಬರೆದಿದ್ದೇನೆ. ತಪ್ಪಿದ್ದರೆ ಕ್ಷಮಿಸಿ ಎಂದಷ್ಟೇ ಹೇಳಬಲ್ಲೆ. - ಕೇಶವ ಕುಲಕರ್ಣಿ... | |||
| |||
|
| | |||
| ನಿಮಗೆಲ್ಲ ಅರಗಿಸಿಕೊಳ್ಳದಷ್ಟು ದೊಡ್ಡ ಪೆಟ್ಟು ಕೊಟ್ಟಿದ್ದಾನಲ್ಲಾ ಆ ಡ್ಯಾನಿಗೆ ಹ್ಯಾಟ್ಸ್ ಅಫ್.... | |||
| |||
| | |||
| tumba olleyala lekhana. jana marulo jatre marulo annuvanta paristiti. Idu nijavagalu duradrustakara. India andre bari Hindi film alla anta horaginavarige manavarike agabeku.... | |||
| |||
| | |||
| ಒಂದು ಕೆಟ್ಟ ಚಿತ್ರದ ಬಗ್ಗೆ ಇಷ್ಟೆಲ್ಲಾ ಕಿಡಿ ಕಾರುವುದೂ ಅನಗತ್ಯ. ಆದರೆ ನೀವು quote ಮಾಡಿರುವ ಮಾತುಗಳು ನಿಮ್ಮ ಸಿಟ್ಟಿಗೆ ಅನುಕೂಲವಾಗುವಂತೆ ಪತ್ರಿಕೆಗಳ ವರದಿ ಎಂದು ಹೇಳಿರುವುದು ತಪ್ಪು. http://www.guardian.co.uk/film/filmblog/2009/jan/15/danny-boyle-shows ಲಿಂಕಿನಲ್ಲಿ ನೀವು ಅನುವಾದಿಸಿರುವ ಎಲ್ಲ ಮಾತುಗಳನ್ನೂ ಆಡಿರುವುದು ನಿರ್ಪಾಲ್ ಸಿಂಗ್ ಧಾಲಿವಾಲ ಎಂಬ ಭಾರತ ಮೂಲದವನು. ಅವನು gaurdian ಪತ್ರಿಕೆಗೆ freelance ಆಗಿ ಬರೆಯುತ್ತಾನೆ. ಅವನ ಕಾಲಂ ಅದು. ಹೇಗೆ ನಿಮ್ಮ ಮಾತು ಕೆಂಡಸಂಪಿಗೆಯ ಮಾತಾಗುವುದಿಲ್ಲವೋ ಹಾಗೆ ಅದು ಅವನ ಮಾತಷ್ಟೆ, ಗಾರ್ಡಿಯನ್ ಮಾತಲ್ಲ. ಭಾರತೀಯ ಮೂಲದವನು ಹಾಗೆ ಹೇಳಿದರೆ ಆ ಮಾತುಗಳ ಅರ್ಥವೇ ಬೇರಾಗುತ್ತದೆ. ನೀವು ಆತನ ಹೆಸರನ್ನು ಹೇಳಿದ್ದರೆ ಸರಿಯಾಗುತ್ತಿತ್ತು. ಉಳಿದಂತೆ ದೊಡ್ಡ ಪತ್ರಿಕೆಗಳಲ್ಲಿ ನೀವು ಹೇಳಿದಂತೆ "ಬಿಳಿಯರೇ ಇಂತಹ ಚಿತ್ರವನ್ನು ಮಾಡಬಲ್ಲರು" ಎಂಬ ಅರ್ಥ ಬರುವ ಮಾತುಗಳನ್ನು ನಾನು ನೋಡಿಲ್ಲ. ಹೌದಾಗಿದ್ದರೆ ದಯವಿಟ್ಟು ಲಿಂಕುಗಳನ್ನು ಕೊಡಿ. - ಕಿಶೋರ್ ಧಮನೀಕರ್... | |||
| |||
|
| | |||
| ನಿಮಗೆ ಯಾರೂ ಪ್ರತಿಕ್ರಿಯಿಸಲೇ ಇಲ್ಲ.ಯಾಕೆ?ಬಹುಶಃ ಹೊಗಳಿ ಬರೆಯಬೇಕಿತ್ತೋ ಏನೋ ಮುರಲಿ... | |||
| |||
| Reactions: |