Wednesday, September 23, 2009

ನೀಲು ೨೭


ದೇವರು ಆತ್ಮ ಆಧ್ಯಾತ್ಮ 

ಕಲೆ ಕಾವ್ಯ ಮದಿರೆ

ಕೊಡುವ ಎಲ್ಲ ಕಿಕ್ಕುಗಳೂ

ನನ್ನ ಒಂದು ತೆಕ್ಕೆಯಲ್ಲಿ

ನಿನಗೆ ಸಿಕ್ಕದ ದಿನ

ನಿನ್ನ ನೀಲು ಸಾಯುತ್ತಾಳೆ

ಬರೆದಿಟ್ಟುಕೋ!

Monday, September 21, 2009

ನೀಲು ೨೬

ನಿನ್ನ ಕೆನ್ನೆಯ ಆಫ್ಟರ್ ಶೇವಿಗಿಂತ 

ನಿನ್ನ ಮೈವಾಸನೆಯೇ ಹೆಚ್ಚು ಇಷ್ಟ

ಎಂದರೆ

ಸೊಕ್ಕಿನಲ್ಲಿ ಸ್ನಾನ ಮಾಡದೇ ಇರಬೇಡ

ಆಫ್ಟರ್ ಶೇವ್ ಹಾಕುವುದನ್ನು ಬಿಡಬೇಡ