ಇನ್ನಿಲ್ಲವಾಯಿತೇ ಆ ದನಿ
ಸರಿಗಮದ ಅಮೃತ ಹನಿ
ಭಾವ ಕೊಳದ ತಳಕ್ಕೆ ತಳುಹಿ
ಮೌನಕ್ಕೆ ಮಾತು ಹೇಳಿಕೊಡುವ
ಭಾವತ್ರಪ್ತ ದನಿ
ಪುಸ್ತಕದಿಂದ ಮಸ್ತಕಕ್ಕೆ ಇಳಿಯುವಹಾಗೆ
ಪ್ರತಿ ಪದಗಳಿಗೆ ಭಾವಮೂರ್ತಿ ಕೆತ್ತುವ
ಮಹಾಶಿಲ್ಪಿ ದನಿ
ಭಾವಸಮುದ್ರದ ಧುಮ್ಮಿಕ್ಕುವ ಅಲೆಗಳ ಮಹಾಪೂರ
ಗುಡುಗುಡಿಸುವ ಶಬ್ದತಾಳಗಳ ಮೇಳ
ಇನ್ನು ಭಾವಕವಿಗಳ ಕವನಗಳೆಲ್ಲ ಯಾಕ?
ಆ ದನಿಯಿಲ್ಲದೇ ಪದಪುಂಜಗಳೆಲ್ಲ ಮೂಕ
(image courtesy: The Hindu)
http://kannada-nudi.blogspot.com/2006/07/opinion-c-aswath-kannada-literature.html
ನಾನು ಜುಲೈ ೨೦೦೬ರಲ್ಲಿ ಸಿ ಅಶ್ವಥ್ ಬಗ್ಗೆ ಬರೆದ ಲೇಖನ ಇಲ್ಲಿದೆ, ಅದನ್ನು ಮುಟ್ಟದೇ ಇಲ್ಲಿ ಮತ್ತೊಮ್ಮೆ ಕೊಂಡಿ ಕೊಡುತ್ತಿದ್ದೇನೆ.


