ನನ್ನ ಆತ್ಮೀಯ ಗೆಳೆಯನ ಬಗ್ಗೆ ನನ್ನ ಪ್ರಿಯಕರನಿಗೆ
ನನ್ನ ಪ್ರಿಯಕರನ ಬಗ್ಗೆ ನನ್ನ ಆತ್ಮೀಯ ಗೆಳೆಯನಿಗೆ
ಹೇಳಿದೆ
ನನ್ನ ಪ್ರಿಯಕರನಿಗೆ ನನ್ನ ಮೇಲೆ ಸಂದೇಹ
ನನ್ನ ಆತ್ಮೀಯ ಗೆಳೆಯ ಮೊಬೈಲಿಗೂ ಸಿಗುತ್ತಿಲ್ಲ
Sunday, April 04, 2010
ನೀಲು ೩೪
Labels:
ನೀಲುಗಳು
| Reactions: |
Friday, April 02, 2010
ಕುವೆಂಪು ಮತ್ತು ಏಟ್ಸ್
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು ಹೋಗುವೆ ಮಲೆಯ ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ
ಅಲ್ಲಿ ಕಾನನ ಮಧ್ಯೆ ತುಂಗೆಯು ಮುತ್ತನಿಡುವಳು ಕಣ್ಣಿಗೆ
ದಡದೊಳಿಡಿದಿಹ ಬಿದಿರು ಮೆಳೆಗಳ ಹಸಿರು ಚಾಮರ ತಣ್ಣಗೆ
ಬೀಸು ಗಾಳಿಗೆ ವಲೆಯೆ ಭದ್ರೆಯು ತುಂಬಿ ಹರಿವಳು ನುಣ್ಣಗೆ
ಮಲೆಯ ಬಿತ್ತರದೆದುರು ಹೊನಲುಗಳೆನಿತು ನೋಡದೋ ಸಣ್ಣಗೆ |
ಎಲ್ಲಿ ಹಸಿರನು ಚಿಮ್ಮಿ ಕಣ್ಣಿಗೆ ಪೈರು ಪಚ್ಚೆಯ ಬೆಳೆವುದೋ
ಎಲ್ಲಿ ಗದ್ದೆಯ ಕೋಗು ಪವನನ ಹಸಿಗೆ ತೆರೆತೆರೆಯೊಲೆವುದೋ
ಬಿಂಕಗಂಗಳ ಮಲೆಯ ಹೆಣ್ಗಳ ಭಿತ್ತಿ ಎಲ್ಲೆಡೆ ಸೆಳೆವುದೋ
ಎಲ್ಲಿ ಕಾಲವು ತೇಲಿ ಸುಖದಲಿ ತಿಳಿಯದಂತೆಯೆ ಕಳೆವುದೋ |
ಹಾತೊರೆಯುತಿದೆ ಕಾತರಿಸುತಿದೆ ಮನಕೆ ಮನೆ ಗಿರ ಹಿಡಿದಿದೆ
ನೆನಪಿನಳರಿನ ಬಂಧನಾತ್ಮದ ಭೃಂಗ ಹೊಡೆನಲಿಕುಡಿದಿದೆ
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಬಿಳಿಯ ತಿಂಗಳ ಸಿರಿವನಂಗಳ ಮಲೆಯ ಮಂಗಳ ನಾಡಿಗೆ |
-------------------------------------------------
I will arise and go now, and go to Innisfree,
And a small cabin build there, of clay and wattles made:
Nine bean-rows will I have there, a hive for the honey-bee;
And live alone in the bee-loud glade.
And I shall have some peace there, for peace comes dropping slow,
Dropping from the veils of the morning to where the cricket sings;
There midnight's all a glimmer, and noon a purple glow,
And evening full of the linnet's wings.
I will arise and go now, for always night and day
I hear lake water lapping with low sounds by the shore;
While I stand on the roadway, or on the pavements grey,
I hear it in the deep heart's core.
---------------------------------------------------------------------
ವಿಲಿಯಂ ಬಟ್ಲರ್ ಏಟ್ಸ್ ತನ್ನ ೨೫ನೇ ವಯಸ್ಸಿನಲ್ಲಿ ಬರೆದ ಈ ಕೆಳಗಿನ ಕವನಕ್ಕೂ, ನಮ್ಮ ಕುವೆಂಪು ಬರೆದ ಆ ಮೇಲಿನ ಕವನಕ್ಕೂ ಎಷ್ಟೊಂದು ಹೋಲಿಕೆ ಇದೆಯಲ್ಲವೇ? ಕುವೆಂಪು ಏಟ್ಸನ ಈ ಕವನದಿಂದ ಪ್ರೇರಿತರಾಗಿರಬಹುದು ಎಂದು ನನ್ನ ಊಹೆ. ಕುವೆಂಪು ತಮ್ಮ ಯಾವ ವಯಸ್ಸಿನಲ್ಲಿ ಈ ಕವಿತೆ ಬರೆದಿರಬಹುದು? ಇತಿಹಾಸ ಗೊತ್ತಿರುವವರು ಇವುಗಳ ಮೇಲೆ ಬೆಳಕು ಚೆಲ್ಲುತ್ತೀರಾ?
ಮಲೆಯ ನಾಡಿಗೆ ಮಳೆಯ ಬೀಡಿಗೆ ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು ಹೋಗುವೆ ಮಲೆಯ ಕಣಿವೆಯ ಕಾಡಿಗೆ
![]() |
| image from www.totalkannada.com |
ಅಲ್ಲಿ ಕಾನನ ಮಧ್ಯೆ ತುಂಗೆಯು ಮುತ್ತನಿಡುವಳು ಕಣ್ಣಿಗೆ
ದಡದೊಳಿಡಿದಿಹ ಬಿದಿರು ಮೆಳೆಗಳ ಹಸಿರು ಚಾಮರ ತಣ್ಣಗೆ
ಬೀಸು ಗಾಳಿಗೆ ವಲೆಯೆ ಭದ್ರೆಯು ತುಂಬಿ ಹರಿವಳು ನುಣ್ಣಗೆ
ಮಲೆಯ ಬಿತ್ತರದೆದುರು ಹೊನಲುಗಳೆನಿತು ನೋಡದೋ ಸಣ್ಣಗೆ |
ಎಲ್ಲಿ ಹಸಿರನು ಚಿಮ್ಮಿ ಕಣ್ಣಿಗೆ ಪೈರು ಪಚ್ಚೆಯ ಬೆಳೆವುದೋ
ಎಲ್ಲಿ ಗದ್ದೆಯ ಕೋಗು ಪವನನ ಹಸಿಗೆ ತೆರೆತೆರೆಯೊಲೆವುದೋ
ಬಿಂಕಗಂಗಳ ಮಲೆಯ ಹೆಣ್ಗಳ ಭಿತ್ತಿ ಎಲ್ಲೆಡೆ ಸೆಳೆವುದೋ
ಎಲ್ಲಿ ಕಾಲವು ತೇಲಿ ಸುಖದಲಿ ತಿಳಿಯದಂತೆಯೆ ಕಳೆವುದೋ |
ಹಾತೊರೆಯುತಿದೆ ಕಾತರಿಸುತಿದೆ ಮನಕೆ ಮನೆ ಗಿರ ಹಿಡಿದಿದೆ
ನೆನಪಿನಳರಿನ ಬಂಧನಾತ್ಮದ ಭೃಂಗ ಹೊಡೆನಲಿಕುಡಿದಿದೆ
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಬಿಳಿಯ ತಿಂಗಳ ಸಿರಿವನಂಗಳ ಮಲೆಯ ಮಂಗಳ ನಾಡಿಗೆ |
-------------------------------------------------
I will arise and go now, and go to Innisfree,
![]() |
| Image from www.topnews.in |
Nine bean-rows will I have there, a hive for the honey-bee;
And live alone in the bee-loud glade.
And I shall have some peace there, for peace comes dropping slow,
Dropping from the veils of the morning to where the cricket sings;
There midnight's all a glimmer, and noon a purple glow,
And evening full of the linnet's wings.
I will arise and go now, for always night and day
I hear lake water lapping with low sounds by the shore;
While I stand on the roadway, or on the pavements grey,
I hear it in the deep heart's core.
---------------------------------------------------------------------
ವಿಲಿಯಂ ಬಟ್ಲರ್ ಏಟ್ಸ್ ತನ್ನ ೨೫ನೇ ವಯಸ್ಸಿನಲ್ಲಿ ಬರೆದ ಈ ಕೆಳಗಿನ ಕವನಕ್ಕೂ, ನಮ್ಮ ಕುವೆಂಪು ಬರೆದ ಆ ಮೇಲಿನ ಕವನಕ್ಕೂ ಎಷ್ಟೊಂದು ಹೋಲಿಕೆ ಇದೆಯಲ್ಲವೇ? ಕುವೆಂಪು ಏಟ್ಸನ ಈ ಕವನದಿಂದ ಪ್ರೇರಿತರಾಗಿರಬಹುದು ಎಂದು ನನ್ನ ಊಹೆ. ಕುವೆಂಪು ತಮ್ಮ ಯಾವ ವಯಸ್ಸಿನಲ್ಲಿ ಈ ಕವಿತೆ ಬರೆದಿರಬಹುದು? ಇತಿಹಾಸ ಗೊತ್ತಿರುವವರು ಇವುಗಳ ಮೇಲೆ ಬೆಳಕು ಚೆಲ್ಲುತ್ತೀರಾ?
Labels:
ಸುಂಸುಮ್ನೆ
| Reactions: |
Thursday, April 01, 2010
ಇದಕ್ಕೆ ಉಪಯವೇನು?
"ಬುದ್ಧಿವಂತರು ಶಿರಬಡಗಿಯಿಂದ ಬಾಗಲಕೋಟೆಗೆ ಹೋಗಿ ನೆಲೆಸುತ್ತಾರೆ,
ಅತಿ ಬದ್ಧಿವಂತರು ಬಾಗಲಕೋಟೆಯಿಂದ ಬಕ್ಕಿಂಗ್ ಹ್ಯಾಮ್ ಗೆ ಹೋಗುತ್ತಾರೆ
![]() |
| Image courtesy: Aayushi Mehta (flickr) |
ದಡ್ಡರು ತಮ್ಮ ಬಡತನದಲ್ಲಿ ಬೇಯುತ್ತಾ,
ಸರಕಾರದ ಭಿಕ್ಷೆಗಾಗಿ ಕಾಯುತ್ತಾ,
ಬುದ್ಧಿವಂತರ ಸಬ್ಸಿಡೈಸ್ಡ್ ಶಿಕ್ಷಣಕ್ಕೆ ಬೇಕಾದ ಕಂದಾಯ ಕಟ್ಟುತ್ತಾ, ಶಿರಬಡಗಿಯಲ್ಲೇ ಉಳಿಯುತ್ತಾರೆ.
ಪ್ರತೀ ಸಾರಿ ನೆರೆ ಪರಿಹಾರದ ಚೆಕ್ ಬಂದಾಗ -ನಮ್ಮೂರಾಗ ಸಾಲಿ ಕಲ್ತವರ್ ಯಾರ್ ಇಲ್ರಿ- ಎನ್ನುತ್ತಾರೆ.
ತಲಾಠಿ ಹೇಳಿದ್ದನ್ನು ಕೇಳಿ, ತೋರಿಸಿದಲ್ಲಿ ಸಹಿ ಹಾಕಿ, ಅವನಿಗೆ ಲಂಚ ಕೊಟ್ಟು ದುಡ್ಡು ಇಸಿದುಕೊಳ್ಳುತ್ತಾರೆ
ಕೇವಲ ದುಡ್ದಿನಿಂದ ರಾಜ್ಯ ಅಭಿವೃದ್ಧಿ ಹೊಂದುತ್ತದೆ ಎನ್ನುವ ಭ್ರಮೆಯನ್ನು ಪತ್ರಿಕೆಗಳು ಉಂಟುಮಾಡುತ್ತವೆ.
ಇದನ್ನೇ ನಿಜ ಎಂದು ನಂಬಿದ ಇಬ್ಬರು ಮಾತನಾಡುತ್ತಾರೆ -
-ಇದಕ್ಕೆಲ್ಲ ಕೊನೆಯೇ ಇಲ್ಲವೇ-
ಇದಕ್ಕೆ ಉಪಾಯವೇನು?"
ನನ್ನನ್ನು ತುಂಬ ಹತ್ತಿರದಿಂದ ನೋಡಿದ ನನ್ನ ಅತ್ಯಂತ ಒಳ್ಳೆಯ ವಿಮರ್ಶಕ ಮಿತ್ರ ನನ್ನ ಬಗ್ಗೆ ಬರೆದ ಮಿಂಚಂಚೆಯ ಬರಹ ಇದು.
-------------- ---------------------
-------------- ---------------------
ಹಳ್ಳಿಯಲ್ಲಿ ಹುಟ್ಟಿ ಚೆನ್ನಾಗಿ ಓದಿ, ಸರಕಾರಿ ಕಾಲೇಜಿನಲ್ಲಿ ಸಾಫ್ಟ್ವೇರ್ ಇಂಜಿನಿಯರಿಂಗ್ ಮಾಡಿರುವ ಹುಡುಗ (ಹುಡುಗಿ ಅಂತಲೂ ಓದಿಕೊಳ್ಳಿ) ವಾಪಸ್ ತನ್ನ ಹಳ್ಳಿಗೆ ಹೋಗಿ ಮಾಡುವುದೇನಿದೆ? ಆತ ಕ್ಯಾಲಿಫೋರ್ನಿಯಾದಲ್ಲಿರಲಿ, ಮೆಲ್ಬೋರ್ನದಲ್ಲಿರಲಿ, ಯಾರಿಗೂ ಏನೂ ಅನಿಸುವುದಿಲ್ಲ. ಆದರೆ ಹಳ್ಳಿಯಲ್ಲಿ ಹುಟ್ಟಿ ಆತನಿಗಿಂತ ಚನ್ನಾಗಿ ಓದಿ, ಸರಕಾರಿ ಕಾಲೇಜಿನಲ್ಲಿ ಡಾಕ್ಟರಿಕೆ ಮಾಡಿ ನ್ಯುಯಾರ್ಕಿಗೋ ಲಂಡನ್ನಿಗೋ ಹೋಗಿ ನೆಲಸಲಿ, ಆತನ ನೆಂಟರಿಂದ ಹಿಡಿದು ದೂರದ ಗೆಳೆಯರವರೆಗೆ ‘ಪ್ರಪಂಚದ ಅತೀ ಕೆಟ್ಟ ಸ್ವಾರ್ಥಿ‘ ಎನ್ನುವ ಹಣೆಪಟ್ಟಿ.
![]() |
| Image from: www.boston.com |
ಕೆರೂರಿನವ ಬಾಗಲಕೋಟೆಗೆ, ಬಾಗಲಕೋಟೆಯವ ಹುಬ್ಬಳ್ಳಿಗೆ, ಹುಬ್ಬಳ್ಳಿಯಾಂವ ಬೆಂಗಳೂರಿಗೆ, ಬೆಂಗಳೂರಿನವ ಲಂಡನ್ನಿಗೆ, ಲಂಡನ್ನಿನವ ಬೇಏರಿಯಾಗೆ - ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಗುಳೆ ಎದ್ದು ಹೊರಟವರೇ ಅಲ್ಲವೇ? ಬಾಗಲಕೋಟೆ ಬಿಟ್ಟು ಹುಬ್ಬಳ್ಳಿಗೋ, ಬೆಂಗಳೂರಿಗೆ ಗುಳೆ ಎದ್ದು ಬದುಕನ್ನು ಕಟ್ಟಿಕೊಂಡಾಗ ಏಳದ ಪ್ರಶ್ನೆಗಳು, ಇಂಗ್ಲಂಡಿಗೋ ಅಮೇರಿಕಕ್ಕೋ ಬಂದಾಗ ನಮಗೂ, ನಮ್ಮ ಮಿತ್ರರಿಗೂ ಇಂಥ ಉತ್ತರವಿಲ್ಲದ ಪ್ರಶ್ನೆಗಳು ಹುಟ್ಟುವುದೇಕೆ?
ಇವೆಲ್ಲ ವಿವರಣೆಗಳು ಪರದೇಶದಲ್ಲಿ ನೆಲಸಿರುವ ನಾವು ನಮ್ಮ ಸಮಾಧಾನಕ್ಕೆ ಹುಡುಕಿರುವ ಸಬೂಬು ಮಾತ್ರ, ನಿಜವಾದ ಉತ್ತರಗಳಲ್ಲ ಎಂದು ನಮಗೆ ಖಾತ್ರಿ ಗೊತ್ತು. ಪ್ರಶ್ನೆಗಳಿದ್ದರೆ ತಾನೆ ಉತ್ತರ ಹುಡುಕುವ ಕಷ್ಟ; ಅದಕ್ಕೆಂದೇ ನಾವೆಲ್ಲ ಬಹಳ ಜನ ಇಲ್ಲಿ ಅಂಥ ಪ್ರಶ್ನೆಗಳನ್ನೇ ಕೊಂದು ಹಾಕಿದ್ದೇವೆ.
ವರುಷಕ್ಕೋ ಎರಡು ವರುಷಕ್ಕೋ ಒಂದೆರೆಡು ವಾರ ಇಂಡಿಯಾದಲ್ಲಿ ಸುತ್ತಾಡಿಕೊಂಡು, ಭಾರತದ ಸರಕಾರಕ್ಕೆ, ರಸ್ತೆಗಳಿಗೆ, ವಾಹನಸಂದಣಿಗೆ, ವಿದ್ಯುತ್ ಕಡಿತಕ್ಕೆ, ಸೊಳ್ಳೆ ಕಚ್ಚಿದ್ದಕ್ಕೆ ವರುಷವಿಡೀ ಬಯ್ದುಕೊಂಡು, ನಾಕಾರು ಡಾಲರೋ ಪೌಂಡೋ ಚಾರಿಟಿಗೆ ಕೊಟ್ಟು, ‘ಭಾರತ ಬದುಕಿರುವುದೇ ನಮ್ಮಂಥವರಿಂದ‘ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತೇವೆ. ಇದೇ ಈ ಸಮಸ್ಯೆಗಳಿಗೆ ತಕ್ಕ ಉಪಾಯ ಎಂದು ಕಂಠ ಪೂರ್ತಿ ವೈನು ಕುಡಿದು ಪಾರ್ಟಿಮಾಡುತ್ತೇವೆ.
Labels:
ಸುಂಸುಮ್ನೆ
| Reactions: |
Subscribe to:
Posts (Atom)