Wednesday, September 01, 2010

ನೀಲು ೩೬

suzhou-buddha

 

ವಿಮುಕ್ತಿ ಹೊಂದಿದವನೂ

ಕಾಮದ ಬೇಗೆಯಿಂದ

ರೋಗದ ನರಳುವಿಕೆಯಿಂದ

ವೃದ್ಧಾಪ್ಯದ ಕಾರ್ಪಣ್ಯದಿಂದ

ಸಾವಿನ ಅಂಜಿಕೆಯಿಂದ

ವಿಮುಕ್ತಿ ಪಡೆಯಲಾರ