Tuesday, November 30, 2010

ನೀಲು ೪೦

ನನ್ನ ಹಳೆ ಪ್ರಿಯಕರನನ್ನು

ನನ್ನ ಗಂಡನ ಜೊತೆ

ಭೇಟಿ ಮಾಡಿಸಬೇಕು

ಅವನ ಮಾತು, ಕವಿತೆ, ಮುದ್ದು, ಪ್ರೀತಿ, ಕಾಮ…

ಎಲ್ಲ ಒಮ್ಮೆ ತೋರಿಸಬೇಕು

ಆದರೇನು ಮಾಡಲಿ?

ಆ ಹಳೇ ಪ್ರಿಯಕರನೇ ಈ ನನ್ನ ಗಂಡ!

Monday, November 15, 2010

ನೀಲು ೨೯

ನಿನ್ನ ದೇವರು, ಧರ್ಮ, ನೈತಿಕತೆ 

ಆತ್ಮ, ಆಧ್ಯಾತ್ಮ, ಪರಮಾತ್ಮಗಳೆಲ್ಲ

ನನ್ನ ಯೌವನ, ರೂಪ, ಕಣ್ಣು

ತುಟಿ, ಮೊಲೆ, ಕಟಿಗಳ ಮುಂದೆ

ಸತ್ತುಹೋಗದೇ ಇದ್ದರೆ

ನೀನು ಷಂಡ ಅಥವಾ ಗೇ

ಎಂದು ಕಣ್ಣುಮಿಟುಕಿಸಿದಳು