Wednesday, December 15, 2010

ನೀಲು ೪೧

ಹತ್ತು ವರುಷದ ಹಿಂದೆ

ನದಿ ತಟದಲ್ಲಿ ಕೂತು

ಓದಿದ ರೋಮ್ಯಾಂಟಿಕ್ ಕವಿತೆಯನ್ನು

ಮತ್ತೊಮ್ಮೆ ಕೇಳೋಣ ಅನಿಸಿತು

ಅವನ ದನಿಯಲ್ಲೂ ನಡುಕವಿರಲಿಲ್ಲ

ನನ್ನ ರೋಮವೂ ನಿಮಿರಲಿಲ್ಲ